ಬೆಂಗಳೂರು, ನವೆಂಬರ್ 08: ಕಾರ್ ಪಾರ್ಕಿಂಗ್ ಅಡ್ಡಿಯಾಗಿದೆ ಅಂತ ಮರ ಕಡಿಸಿದ ಮನೆ ಮಾಲಿಕ ಹಾಗೂ ಗುತ್ತಿಗೆದಾರನ ವಿರುದ್ಧ ದೂರು ದಾಖಲಾಗಿದೆ. ಬೆಂಗಳೂರಿನ (Bengaluru) ಮಲ್ಲಸಂದ್ರದ ಮಾತಾಶ್ರೀ ಬಡಾವಣೆಯಲ್ಲಿನ ಪ್ರದೀಪ್ ಎಂಬುವರ ಮನೆಯ ಮುಂದೆ 30 ಅಡಿ ಎತ್ತರದ ಮರ ಇತ್ತು. ಈ ಮರ ಕಾರ್ ಪಾರ್ಕಿಂಗ್ಗೆ ಅಡ್ಡಿಯಾಗುತ್ತದೆ ಅಂತ ಮನೆ ಮಾಲೀಕ ಅರಣ್ಯ ಇಲಾಖೆಯ ಗುತ್ತಿಗೆದಾರ ಕುಮಾರಸ್ವಾಮಿ ಅವರಿಗೆ ಹಣ ನೀಡಿ ಮರ ಕಡಿಸಿದ್ದಾನೆ.
ಮರವನ್ನು ತುಂಡು ತುಂಡಾಗಿಸಿ ಸಾಗಿಸುವ ವೇಳೆ ಶ್ರೀರಾಮಸೇನೆ ಕಾರ್ಯಕರ್ತ ಅಮರನಾಥ ತಡೆದಿದ್ದಾರೆ. ಬಳಿಕ, ಶ್ರೀರಾಮ ಸೇನೆ ಕಾರ್ಯಕರ್ತ ಅಮರನಾಥ ಮತ್ತು ಪ್ರದೀಪ ಮನೆಯ ಅಕ್ಕಪಕ್ಕದವರು ದಾಸರಹಳ್ಳಿ ವಲಯ ಅರಣ್ಯ ಇಲಾಖೆ ಅಧಿಕಾರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಮನೆ ಮಾಲಿಕ ಹಾಗೂ ಗುತ್ತಿಗೆದಾರನ ವಿರುದ್ಧ ದೂರು ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ