
ದೇವನಹಳ್ಳಿ, ಜೂನ್ 18: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport Bengaluru) ಸಾಕಷ್ಟು ಪ್ರಯಾಣಿಕರ ನೆಚ್ಚಿನ ಏರ್‌ಪೋರ್ಟ್. ಪ್ರಯಾಣಿಕರಿಗಾಗಿ ಒಂದಿಲ್ಲೊಂದು ಸೇವೆಗಳನ್ನ ನೀಡುತ್ತಿದೆ. ಇದೀಗ ಮತ್ತೊಂದು ಸೇವೆ ನೀಡಲು ಕೆಂಪೇಗೌಡ ಏರ್‌ಪೋರ್ಟ್ ಮುಂದಾಗಿದೆ. ಅದೇನೆಂದರೆ, ಮಕ್ಕಳ ಜೊತೆ ಬರುವ ಪ್ರಯಾಣಿಕರು ಮತ್ತು ಮಹಿಳೆಯರ ಅನುಕೂಲಕ್ಕೆ ನೂತನ ಟ್ರಾಲಿ ವ್ಯವಸ್ಥೆ (trolley system) ಮಾಡಲಾಗಿದೆ.
ಕೆಂಪೇಗೌಡ ಏರ್ಪೋರ್ಟ್ಗೆ ನಿತ್ಯ ಲಕ್ಷಾಂತರ ಜನರು ಬರುತ್ತಾರೆ. ಪ್ರಯಾಣಿಕರು ತಮ್ಮ ಲಗೇಜ್ ಜೊತೆಗೆ ಮಕ್ಕಳನ್ನು ಕಡೆದುಕೊಂಡು ಹೊಗುವಲ್ಲಿ ಹೆಣಗಾಡುತ್ತಿದ್ದರು. ಈ ನಿಟ್ಟಿನಲ್ಲಿ ಏರ್‌ಪೋರ್ಟ್ ಆಡಳಿತ ಮಂಡಳಿ ಪ್ರಯಾಣಿಕರು ಮತ್ತು ಮಹಿಳೆಯರ ಅನುಕೂಲಕ್ಕಾಗಿ ಲಗೇಜ್ ಜೊತೆಗೆ ಮಕ್ಕಳನ್ನ ಕೂರಿಸಿಕೊಂಡು ಹೋಗಲು ನೂತನ ಟ್ರಾಲಿ ವ್ಯವಸ್ಥೆಯನ್ನು ಆರಂಭಿಸಿದೆ.
ಇದನ್ನೂ ಓದಿ: ಬೆಂಗಳೂರು ಏರ್ಪೋರ್ಟ್ಗೆ ಮತ್ತೊಂದು ಗರಿ: ಸತತ 3ನೇ ಬಾರಿಗೆ ವಿಶ್ವದ ಅತ್ಯುತ್ತಮ ಆಗಮನ ವಿಮಾನ ನಿಲ್ದಾಣ ಪ್ರಶಸ್ತಿ
ಏರ್ಪೋರ್ಟ್ನ ಟರ್ಮಿನಲ್ 01 ಮತ್ತು 02 ರಲ್ಲಿ ಕೆಐಎಬಿ ಬೇಬಿ ಕ್ಯಾರಿಯರ್ ಮತ್ತು ಹ್ಯಾಂಡ್ ಬ್ಯಾಗ್ ಟ್ರಾಲಿ ಸೇವೆಯನ್ನು ಆರಂಭಿಸಿದೆ. ನೂತನ ಟ್ರಾಲಿಯಲ್ಲಿ 2 ತಿಂಗಳಿನಿಂದ 4 ವರ್ಷದವರೆಗಿನ ಮಕ್ಕಳನ್ನ ಕೂರಿಸಿಕೊಂಡು ಹೋಗಬಹುದಾಗಿದೆ. ಇದು ಪುಟ್ಟ ಮಕ್ಕಳೊಂದಿಗೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಸದ್ಯ ಕೆಂಪೇಗೌಡ ಏರ್‌ಪೋರ್ಟ್ ಆಡಳಿತ ಮಂಡಳಿ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಅಂದಹಾಗೆ ಕೆಂಪೇಗೌಡ ಏರ್‌ಪೋರ್ಟ್ ವಿಮಾನ ನಿಲ್ಥಾಣಕ್ಕೆ ದೇಶ ವಿದೇಶಗಳಿಂದ ಪ್ರಯಾಣಿಕರು ಆಗಮಿಸುತ್ತಾರೆ. ಕಳೆದ ವರ್ಷ 20224ರಲ್ಲಿ 40 ಮಿಲಿಯನ್ಗೂ ಅಧಿಕ ಪ್ರಯಾಣಿಕರು ಸಂಚರಿಸುವ ಮೂಲಕ ಹೊಸ ದಾಖಲೆ ಬರೆಯಲಾಗಿತ್ತು. ಕಳೆದ ವರ್ಷ ಜನವರಿ 01 ರಿಂದ ಡಿಸೆಂಬರ್ 31 ರ ಮಧ್ಯರಾತ್ರಿವರೆಗೂ ಒಟ್ಟು 4 ಕೋಟಿ 73 ಲಕ್ಷ ಪ್ರಯಾಣಿಕರು ಕೆಂಪೇಗೌಡ ಏರ್ಪೋರ್ಟ್ನಿಂದ ದೇಶ ಹಾಗೂ ವಿದೇಶಗಳಿಗೆ ಪ್ರಯಾಣಿಸಿದ್ದರು.
ಇದನ್ನೂ ಓದಿ: ಪ್ರಯಾಣಿಕರಿಗೆ ಗುಡ್ನ್ಯೂಸ್: ಇನ್ಮುಂದೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 24/7 ಸಿಗಲಿದೆ ವೈದ್ಯಕೀಯ ಸೇವೆ
ಇದು 2022ಕ್ಕೆ ಹೋಲಿಕೆ ಮಾಡಿದರೆ 21.1 % ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿತ್ತು. ಅಲ್ಲದೆ ಅಕ್ಟೋಬರ್ 20 ರಂದು ಒಂದೇ ದಿನ ಕೆಐಎಬಿಯಿಂದ 1 ಲಕ್ಷ 26 ಸಾವಿರದ 532 ಜನ ಪ್ರಯಾಣ ಮಾಡುವ ಮೂಲಕ ಒಂದು ದಿನದಲ್ಲಿ ಅತಿ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡಿದ ದಿನ ಅನ್ನೂ ಖ್ಯಾತಿ ಕೂಡ ಪಡೆದುಕೊಂಡಿತ್ತು. ಪ್ರತಿದಿನ ಕೆಐಎಬಿಯಿಂದ ವಿವಿಧೆಡೆಗೆ ಸರಾಸರಿ 723 ಟ್ರಿಪ್ಗಳು ಮಾಡಲಾಗುತ್ತದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:56 am, Wed, 18 June 25