ಬೆಂಗಳೂರು ಏರ್ಪೋರ್ಟ್ಗೆ ಮತ್ತೊಂದು ಗರಿ: ಸತತ 3ನೇ ಬಾರಿಗೆ ವಿಶ್ವದ ಅತ್ಯುತ್ತಮ ಆಗಮನ ವಿಮಾನ ನಿಲ್ದಾಣ ಪ್ರಶಸ್ತಿ
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (KIA) ACI ASQ ಸಂಸ್ಥೆಯಿಂದ ಮೂರನೇ ಬಾರಿಗೆ ವಿಶ್ವದ ಅತ್ಯುತ್ತಮ ಆಗಮನ ವಿಮಾನ ನಿಲ್ದಾಣ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಪ್ರಯಾಣಿಕರ ಸಮೀಕ್ಷೆಯ ಆಧಾರದ ಮೇಲೆ ಈ ಪ್ರಶಸ್ತಿ ನೀಡಲಾಗಿದೆ. ಈ ಪ್ರಶಸ್ತಿಯನ್ನು ಪಡೆದಿರುವುದಕ್ಕೆ KIA ಆಡಳಿತ ಮಂಡಳಿ ಸಂತೋಷ ವ್ಯಕ್ತಪಡಿಸಿದೆ.

ದೇವನಹಳ್ಳಿ, ಮಾರ್ಚ್ 19: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempegowda International Airport Bengaluru) 3ನೇ ಬಾರಿಗೆ ವಿಶ್ವದ ಅತ್ಯುತ್ತಮ ಆಗಮನ ವಿಮಾನ ನಿಲ್ದಾಣ ಪ್ರಶಸ್ತಿ ಪಡೆದುಕೊಂಡಿದೆ. ಆ ಮೂಲಕ ಕೆಐಎಬಿ ಮತ್ತೊಂದು ಗರಿ ಲಭಿಸಿದೆ. ಪ್ರಯಾಣಿಕರ ಸರ್ವೆ ಮೂಲಕ ಮಾಹಿತಿ ಪಡೆದು ACI ASQ ಸಂಸ್ಥೆಯಿಂದ ಪ್ರಶಸ್ತಿ ನೀಡಲಾಗಿದೆ. ಈ ಬಾರಿಯೂ ಕೆಐಎಬಿಗೆ ಪ್ರಶಸ್ತಿ ಬಂದಿದ್ದಕ್ಕೆ ಆಡಳಿತ ಮಂಡಳಿ ಸಂತಸಗೊಂಡಿದೆ.
ಸತತ 3 ವರ್ಷಗಳಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ವಿಶ್ವದ ಅತ್ಯುತ್ತಮ ಆಗಮನ ವಿಮಾನ ನಿಲ್ದಾಣ ಪ್ರಶಸ್ತಿ ಸಿಕ್ಕಿದೆ. ಏರ್ಪೋರ್ಟ್ನಲ್ಲಿನ ಅತ್ಯುತ್ತಮ, ವೇಗದ ಸೇವೆಗಳಿಗೆ ನೀಡುವ ಪ್ರಶಸ್ತಿ ಇದಾಗಿದೆ. ಇಮಿಗ್ರೇಷನ್, ಕಸ್ಟಮ್ಸ್, ಹೈಸ್ಪೀಡ್ ವೈಫೈ, ವೇಗದ ಬ್ಯಾಗೇಜ್, ಲಾಂಜ್, ಸುಗಮ ಮತ್ತು ತೊಂದರೆ ಮುಕ್ತ ಆಗಮನ ದ್ವಾರ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತದೆ.
ಇದನ್ನೂ ಓದಿ: ಪ್ರಯಾಣಿಕರಿಗೆ ಗುಡ್ನ್ಯೂಸ್: ಇನ್ಮುಂದೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 24/7 ಸಿಗಲಿದೆ ವೈದ್ಯಕೀಯ ಸೇವೆ
ಈ ಬಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಕ್ಸ್ ಖಾತೆಯಲ್ಲಿ ಮಾಹಿತಿಕೊಂಡಿದ್ದು, ಬಿಎಲ್‌ಆರ್ ವಿಮಾನ ನಿಲ್ದಾಣವನ್ನು ಎಸಿಐ ವರ್ಲ್ಡ್ ಜಾಗತಿಕವಾಗಿ ಆಗಮನಕ್ಕೆ ಅತ್ಯುತ್ತಮ ವಿಮಾನ ನಿಲ್ದಾಣವೆಂದು ಗುರುತಿಸಿದೆ. ಆತ್ಮೀಯ ಸ್ವಾಗತ, ಸುಗಮ ಪ್ರಯಾಣಿಕರ ಅನುಭವಗಳು ಮತ್ತು ನಮ್ಮ ಸಿಬ್ಬಂದಿಯ ಸಹಾಯದಿಂದ, ಪ್ರತಿ ಭಾರಿಯೂ ಮನೆಗೆ ಬಂದಂತೆ ಭಾಸವಾಗುವಂತೆ ಮಾಡಲು ನಾವು ಶ್ರಮಿಸಿದ್ದೇವೆ.
ಬಿಎಲ್‌ಆರ್ ಟ್ವೀಟ್
BLR Airport has been recognized as the Best Airport for Arrivals Globally by ACI World! From warm welcomes, seamless passenger experiences and assistance from our staff, we are dedicated to making every arrival feel like home.
This award would not be possible without our teams,… pic.twitter.com/xnl3jZHVCw
— BLR Airport (@BLRAirport) March 17, 2025
ನಮ್ಮ ತಂಡ, ಪಾಲುದಾರರು, ಸಿಬ್ಬಂದಿಗಳು ಮತ್ತು ಪ್ರಯಾಣಿಕರಿಲ್ಲದೆ ಈ ಪ್ರಶಸ್ತಿ ಸಾಧ್ಯವಾಗುತ್ತಿರಲಿಲ್ಲ. ನಿಮ್ಮ ಪ್ರಯಾಣದಲ್ಲಿ ನಮ್ಮನ್ನು ನಂಬಿದ್ದಕ್ಕಾಗಿ ಧನ್ಯವಾದಗಳು ಎಂದು ಬಿಎಲ್‌ಆರ್ ತಿಳಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:39 pm, Wed, 19 March 25