AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸಕೋಟೆಯಲ್ಲಿ ನಾಲ್ವರು ಕಾರ್ಮಿಕರ ಅನುಮಾನಾಸ್ಪದ ಸಾವು!

ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಮುತ್ಸಂದ್ರ ಗ್ರಾಮದಲ್ಲಿ ಅಸ್ಸಾಂ ಮೂಲದ ನಾಲ್ವರು ಯುವ ಕಾರ್ಮಿಕರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಕೋಕಾಕೋಲಾ ವೇರ್‌ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ಇವರು, ಲೇಬರ್ ಶೆಡ್‌ನಲ್ಲಿ ಮಲಗಿದ್ದಾಗ ಮೃತಪಟ್ಟಿದ್ದಾರೆ. ರಾತ್ರಿ ಕಿಟಕಿ-ಬಾಗಿಲು ಮುಚ್ಚಿ ಅಡುಗೆ ಮಾಡಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸೂಲಿಬೆಲೆ ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.

ಹೊಸಕೋಟೆಯಲ್ಲಿ ನಾಲ್ವರು ಕಾರ್ಮಿಕರ ಅನುಮಾನಾಸ್ಪದ ಸಾವು!
ಹೊಸಕೋಟೆಯಲ್ಲಿ ನಾಲ್ವರು ಕಾರ್ಮಿಕರ ಅನುಮಾನಾಸ್ಪದ ಸಾವು!
ನವೀನ್ ಕುಮಾರ್ ಟಿ
| Edited By: |

Updated on:Jan 31, 2026 | 1:04 PM

Share

ಬೆಂಗಳೂರು ಗ್ರಾಮಾಂತರ, ಜನವರಿ 31: ಜಿಲ್ಲೆಯ (Bengaluru Rural) ಹೊಸಕೋಟೆ ತಾಲೂಕಿನ ಮುತ್ಸಂದ್ರ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ನಾಲ್ವರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಹಲ್ ಚಲ್ ಎಬ್ಬಿಸಿದೆ. ಕೋಕಾಕೋಲಾ ವೇರ್‌ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ನಾಲ್ವರು ಕಾರ್ಮಿಕರು ಲೇಬರ್ ಶೆಡ್‌ನಲ್ಲಿ ಮಲಗಿದ್ದ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ

ಮೃತರನ್ನು ಜಯಂತ್ ಸಿಂಧೆ (25), ನೀರೇಂದ್ರನಾಥ್ (24), ಡಾಕ್ಟರ್ ಟೈಡ್ (25) ಹಾಗೂ ಧನಂಜಯ್ ಟೈಡ್ (20) ಎಂದು ಗುರುತಿಸಲಾಗಿದೆ. ನಾಲ್ವರೂ ರಾತ್ರಿ ಶೆಡ್‌ನ ಕಿಟಕಿ ಹಾಗೂ ಬಾಗಿಲುಗಳನ್ನು ಸಂಪೂರ್ಣವಾಗಿ ಮುಚ್ಚಿಕೊಂಡು ಅಡುಗೆ ಮಾಡಿದ್ದರು ಎನ್ನಲಾಗಿದೆ. ನೈಟ್ ಶಿಫ್ಟ್​ಗೆ ಹೋಗಲು ತಯಾರಾಗಿದ್ದ ನಾಲ್ವರಲ್ಲಿ ಇಬ್ಬರು ಕುಳಿತಲ್ಲೇ ಮೃತಪಟ್ಟರೆ, ಇನ್ನಿಬ್ಬರ ಶವ ಮಲಗಿದ ಸ್ಥಿತಿಯಲ್ಲಿದೆ.  ಮಾಡಿದ ಅಡುಗೆಯೂ ಪಾತ್ರೆಯಲ್ಲಿ ಹಾಗೇ ಉಳಿದಿದ್ದು, ಹಲವಾರು ಗೊಂದಲಗಳಿಗೆ ಎಡೆಮಾಡಿಕೊಟ್ಟಿದೆ.  ಬೆಳಗಿನ ಜಾವ  ಅವರು ಉಸಿರುಗಟ್ಟಿ ಸಾವನ್ನಪ್ಪಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಬೆಳಿಗ್ಗೆ ಶಿಫ್ಟ್ ಮುಗಿಸಿ ಮನೆಗೆ ಬಂದಾತನಿಗೆ ಕಾಡಿತ್ತು ಶಾಕ್!

ಕೊಕಾಕೋಲಾ ವೇರ್ ಹೌಸ್ ನಲ್ಲಿ ನಾಲ್ವರು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಇದೇ ಗ್ರಾಮದ ಶೇಡ್ ನಲ್ಲಿ ಐದು ಜನ ಸ್ನೇಹಿತರು ರೂಂ ಬಾಡಿಗೆಗೆ ಪಡೆದು ವಾಸವಾಗಿದ್ದರು. ಅಲ್ಲದೆ 4 ಜನ ಸ್ನೇಹಿತರು ನೈಟ್ ಶೀಪ್ಟ್ ಗೆ ಹೋಗಬೇಕು ಎಂದು ರೂಂ ನಲ್ಲೆ ಉಳಿದುಕೊಂಡಿದ್ದು ಒರ್ವ ಮಾತ್ರ ಬೆಳಗ್ಗೆ ಶಿಪ್ಟ್ ಗೆ ಕೆಲಕ್ಕೆ ಹೋಗಿದ್ದ. ಕೆಲಸ ಮುಗಿಸಿಕೊಂಡು ರೂಂ ಗೆ ಬಂದ ಕಾರ್ಮಿಕ ಬಾಗಿಲು ಬಡೆದರು ಯಾರೂ ಬರದ ಕಾರಣ ಕಿಟಕಿ ಇಂದ ಇಣುಕಿ ನೋಡಿದ್ದ.ಈ ವೇಳೆ ನಾಲ್ವರೂ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಇದನ್ನೂ ಓದಿ ಮೂರು ಮದುವೆಯಾಗಿ ಲಕ್ಷಾಂತರ ರೂ. ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ! ಹೇಳಿದ್ದೇನು ನೋಡಿ

ಮಾದಕ ವಸ್ತು ಸೇವಿದ್ದಾರೆಯೇ ಎಂದು ಪೊಲೀಸರ ಶಂಕೆ

ಘಟನೆಯ ಮಾಹಿತಿ ತಿಳಿದ ತಕ್ಷಣ ಸೂಲಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಒಡೆದು ನೋಡಿದಾಗ ಉಸಿರುಗಟ್ಟಿ ನಾಲ್ವರು ಸಾವನ್ನಪಿರುವುದು ಗೊತ್ತಾಗಿದೆ. ರಾತ್ರಿ ಅಡುಗೆ ಮಾಡುವುದಕ್ಕೆ ಎಂದು ಗ್ಯಾಸ್ ಮೇಲೆ ಇಟ್ಟಿದ್ದ ಅನ್ನವೆಲ್ಲ ಪಾತ್ರೆಯಲ್ಲಿ ಸೀದಿದ್ದು, ಅನ್ನ ಸೀದು ಹೊಗೆ ತುಂಬಿಕೊಂಡ ಕಾರಣ ನಾಲ್ವರು ಉಸಿರುಗಟ್ಟಿ ಸಾವನ್ನಪಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಾಲ್ವರು ಸ್ನೇಹಿತರು ಏನಾದರೂ ಮಾದಕ ವಸ್ತುಗಳನ್ನ ಸೇವಿಸಿದ್ದರ ಅನ್ನು ಅನುಮಾನ ಸಹ ಪೊಲೀಸರಿಗೆ ಕಾಡುತ್ತಿದ್ದು, ಆ ಬಗ್ಗೆಯು ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:03 am, Sat, 31 January 26

Follow Us
Naveen Kumar
Naveen Kumar

ನವೀನ್ ಕುಮಾರ್ ಟಿ ಎಂಬ ನಾನು ಮೂಲತಃಹ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ನಮ್ಮ ಹೆಮ್ಮೆಯ ಟಿವಿನೈನ್ ನ ದೇವನಹಳ್ಳಿ ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ನಾನು ಪದವಿ ಮುಗಿಯುತ್ತಿದ್ದಂತೆ ಟಿವಿನೈನ್ ನಲ್ಲಿ ವರದಿಗಾರನಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಉದ್ದೇಯನ್ನ ಪಡೆದು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡ್ತಿದ್ದೀನಿ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಾ ಬಂದಿದ್ದೇನೆ.

Read More