AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರು ಮದುವೆಯಾಗಿ ಲಕ್ಷಾಂತರ ರೂ. ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ! ಹೇಳಿದ್ದೇನು ನೋಡಿ

ಮೂರು ಮದುವೆಯಾಗಿ ಲಕ್ಷಾಂತರ ರೂ. ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ! ಹೇಳಿದ್ದೇನು ನೋಡಿ

ನವೀನ್ ಕುಮಾರ್ ಟಿ
| Edited By: |

Updated on: Jan 30, 2026 | 12:25 PM

Share

ದೊಡ್ಡಬಳ್ಳಾಪುರ ತಾಲೂಕಿನ ಅಣಬೆ ಗ್ರಾಮದಲ್ಲಿ ಮಹಿಳೆಯೊಬ್ಬಳು ಪ್ರೀತಿಸುವ ನಾಟಕವಾಡಿ ಮೂವರು ಪುರುಷರನ್ನು ಮದುವೆಯಾಗಿ ಲಕ್ಷಾಂತರ ರೂ. ವಂಚನೆ ಮಾಡಿರುವ ಪ್ರಕರಣ ಸಂಬಂಧ ಆಕೆಯ ಎರಡನೇ ಗಂಡ ಇದೀಗ ‘ಟಿವಿ9’ ಮುಂದೆ ಅಳಲು ತೋಡಿಕೊಂಡಿದ್ದಾರೆ. ಅವರು ಹೇಳಿದ್ದೇನು? ಆಕೆ ಮಾಡಿದ್ದೇನು? ವಿಡಿಯೋ ಇಲ್ಲಿದೆ ನೋಡಿ.

ದೇವನಹಳ್ಳಿ, ಜನವರಿ 30: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅಣಬೆ ಗ್ರಾಮದ ಸುಧಾರಾಣಿ ಎಂಬ ಮಹಿಳೆ, ಪ್ರೀತಿಸುವ ನಾಟಕವಾಡಿ ಮದುವೆಯಾಗಿ ಮೂವರನ್ನು ವಂಚಿಸಿರುವುದು ಬಯಲಾಗಿದೆ. ಆಕೆ ಪ್ರೀತಿಸಿ ಮದುವೆಯಾಗಿ ಲಕ್ಷಾಂತರ ರೂಪಾಯಿ ವಂಚಿಸಿದ್ದಾಳೆ ಎಂದು ಆರೋಪಿಸಲಾಗಿದ್ದು, ಇದೀಗ ಆಕೆಯ ಮೋಸದಾಟದ ಬಗ್ಗೆ ಎರಡನೇ ಗಂಡ ಮಾಧ್ಯಮದ ಎದುರು ಮಾಹಿತಿ ಬಿಚ್ಚಿಟ್ಟಿದ್ದಾರೆ.

ಮೊದಲ ಪತಿ ತೀರಿಕೊಂಡಿದ್ದಾರೆ ಎಂದು ಸುಳ್ಳು ಹೇಳಿ ಸುಧಾರಾಣಿ ತನ್ನನ್ನು ಮದುವೆಯಾಗಿದ್ದಾರೆ. ಮದುವೆಯ ನಂತರ ಸುಮಾರು 25 ಲಕ್ಷ ರೂಪಾಯಿಗಳಷ್ಟು ಹಣವನ್ನು ತೆಗೆದುಕೊಂಡಿದ್ದಾಳೆ. ನಂತರ, ಸುಧಾರಾಣಿಗೆ ಮೊದಲ ಪತಿ ಹೀರೇಗೌಡ ಬದುಕಿರುವ ವಿಚಾರ ಗೊತ್ತಾಯಿತು ಎಂದು ಯುವಕ ತಿಳಿಸಿದ್ದಾರೆ. ಸುಧಾರಾಣಿ ಹೈದರಾಬಾದ್​ಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ, ಬೆಂಗಳೂರಿನಲ್ಲಿ ಶಿವಗೌಡ ಎಂಬುವವರನ್ನು ಮೂರನೇ ಮದುವೆಯಾಗಿರುವುದೂ ನಂತರ ಗೊತ್ತಾಯಿತು ಎಂದಿರುವ ಯುವಕ, ಪೊಲೀಸರಿಗೆ ದೂರು ನೀಡಿದ್ದಾರೆ.

ವಿವರಗಳಿಗೆ ಓದಿ: ದೊಡ್ಡಬಳ್ಳಾಪುರದಲ್ಲೊಬ್ಬಳು ಖತರ್ನಾಕ್ ಮಹಿಳೆ: 3 ಮದುವೆಯಾಗಿ ಲಕ್ಷಾಂತರ ರೂ. ಲೂಟಿ, ಠಾಣೆ ಮೆಟ್ಟಿಲೇರಿದ ಗಂಡಂದಿರು!

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ