ಬೆಂಗಳೂರು ಏರ್​​ಪೋರ್ಟ್​ಗೆ ಬಂದವನ ಬ್ಯಾಗ್​ನಲ್ಲಿದ್ದವು ಹಾವುಗಳು, ಸರೀಸೃಪಗಳು!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬ್ಯಾಂಕಾಕ್​ನಿಂದ ಬಂದ ಪ್ರಯಾಣಿಕನೊಬ್ಬನ ಬ್ಯಾಗ್​ನಲ್ಲಿ ಅಕ್ರಮವಾಗಿ ಸಾಗಿಸಲ್ಪಡುತ್ತಿದ್ದ ಹಾವು ಮತ್ತು ಇತರ ಸರೀಸೃಪಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣ ದೇವನಹಳ್ಳಿಯಲ್ಲಿ ನಡೆದಿದ್ದು, ವಶಪಡಿಸಿಕೊಂಡ ಪ್ರಾಣಿಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಬೆಂಗಳೂರು ಏರ್​​ಪೋರ್ಟ್​ಗೆ ಬಂದವನ ಬ್ಯಾಗ್​ನಲ್ಲಿದ್ದವು ಹಾವುಗಳು, ಸರೀಸೃಪಗಳು!
ವಶಕ್ಕೆ ಪಡೆದುಕೊಂಡ ಪ್ರಾಣಿಗಳು
Edited By:

Updated on: Aug 13, 2025 | 10:40 AM

ದೇವನಹಳ್ಳಿ, ಆಗಸ್ಟ್ 13: ಪ್ರಯಾಣಿಕನೋರ್ವ (passenger) ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಾಣಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಘಟನೆ  ನಡೆದಿದೆ.

ಪ್ರಯಾಣಿಕನೋರ್ವ ಇಂಡಿಗೋ 6E1056 ವಿಮಾನದಲ್ಲಿ ಬ್ಯಾಂಕಾಕ್​ನಿಂದ ಬೆಂಗಳೂರಿಗೆ ಬಂದಿದ್ದ. ಈ ವೇಳೆ ಆತನ ಲಗೇಜ್ ಬ್ಯಾಗ್ ಪರಿಶೀಲನೆ ಮಾಡಿದಾಗ ಹಾವು ಸೇರಿದಂತೆ ಇತರೆ ಸರೀಸೃಪಗಳು ಪತ್ತೆ ಆಗಿವೆ. ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ. ಸದ್ಯ ಕಸ್ಟಮ್ಸ್ ಅಧಿಕಾರಿಗಳು ಎಲ್ಲವನ್ನೂ ವಶಕ್ಕೆ ಪಡೆದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಅಪರಿಚಿತ ಬ್ಯಾಗ್​ನಿಂದ ಬಿತ್ತು ಕೋಟಿ ಕೋಟಿ ಚಿನ್ನದ ಬಿಸ್ಕೆಟ್

ಇನ್ನು ಇತ್ತೀಚೆಗೆ ದುಬೈನಿಂದ ಬಂದಿದ್ದ ಪ್ರಯಾಣಿಕನೋರ್ವ ಲಗೇಜ್ ಬ್ಯಾಗ್ ಎಳೆದುಕೊಂಡು ಬರುತ್ತಿರುವಾಗ ಲಕ ಲಕ ಹೊಳೆಯುವ ಚಿನ್ನದ ಬಿಸ್ಕೆಟ್​​ಗಳು ಹೊರ ಬಿದಿದ್ದ ಘಟನೆ ನಡೆದಿತ್ತು. ಬೆಳಗ್ಗೆ ದುಬೈನಿಂದ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣಕ್ಕೆ ಬಂದಿಳಿದಿದ್ದ ಪ್ರಯಾಣಿಕನೋರ್ವ ತನ್ನ ಲಗೇಜ್ ಅನ್ನ ಸಹ ಟ್ರಾಲಿಗೆ ಹಾಕ್ಕೊಂಡು ಇಮಿಗ್ರೇಷನ್ ಬಳಿ ಬಂದಿದ್ದಾನೆ. ಈ ವೇಳೆ ಇಮಿಗ್ರೇಷನ್​ನಲ್ಲಿ ಸರತಿ ಸಾಲಿಗೆ ಹೋಗ್ತಿದ್ದಂತೆ ಪ್ರಯಾಣಿಕನ ಟ್ರಾಲಿ ಬ್ಯಾಗ್​ನಿಂದ ಅನಾಮಧೇಯ ಬ್ಯಾಗ್​ವೊಂದು ನೆಲಕ್ಕೆ ಬಿದ್ದಿದ್ದು ಚಿನ್ನದ ಬಿಸ್ಕೆಟ್​ಗಳು ಕೆಳಕ್ಕೆ ಬಿದಿದ್ದವು.

ಇದನ್ನೂ ಓದಿ: ದುಬೈಯಿಂದ 3.44 ಕೋಟಿ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ: ರನ್ಯಾ ಬಂಧನದ ಮರುದಿನವೇ ಅಂಧ ವ್ಯಕ್ತಿ ಅರೆಸ್ಟ್

ಇನ್ನೂ ಟೈಟ್ ಸೆಕ್ಯೂರಿಟಿ ಸೂಕ್ಷ್ಮ ಭದ್ರತೆ ಇರುವ ಏರ್ಪೋಟ್​ನಲ್ಲಿ ಕೆಜಿಗಟ್ಟಲೆ ಚಿನ್ನದ ಬಿಸ್ಕೆಟ್​ಗಳು ಇರುವ ಬ್ಯಾಗ್ ಕೆಳಗಡೆ ಬೀಳ್ತಿದ್ದಂತೆ ಪ್ರಯಾಣಿಕ ಫುಲ್​ ಶಾಕ್ ಆಗಿದ್ದು, ಕೂಡಲೆ ಗೋಲ್ಡ್ ಬಿಸ್ಕೆಟ್ ಸಮೇತ ಕಸ್ಟಮ್ಸ್ ಅಧಿಕಾರಿಗಳ ಬಳಿ ಹೋಗಿದ್ದಾನೆ. ಅಲ್ಲದೆ ನಡೆದ ವಿಚಾರ ತಿಳಿಸಿದಾಗ ಅನಾಮಧೇಯ ಬ್ಯಾಗ್ ಪ್ರಯಾಣಿಕನ ಟ್ರಾಲಿಗೆ ಹಾಕಿರುವುದು ಪತ್ತೆಯಾಗಿದ್ದು, ಬ್ಯಾಗ್ ಓಪನ್ ಮಾಡಿ ನೋಡಿದ ಕಸ್ಟಮ್ಸ್ ಅಧಿಕಾರಿಗಳಿಗೆ 3.5 ಕೆಜಿ ತೂಕವಿರುವ ಚಿನ್ನದ ಬಿಸ್ಕೆಟ್ಗಳು ಸಿಕ್ಕಿದ್ದು ಒಂದು ಕ್ಷಣ ಶಾಕ್ ಆಗಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.