ಪತಿಯ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಟಾರ್ಚರ್, ಪುತ್ರನ ಶಾಲೆಯಲ್ಲಿ ಪ್ರಯೋಗಕ್ಕೆ ತಂದಿದ್ದ ಕೆಮಿಕಲ್ ಕುಡಿದು ಪ್ರಾಣಬಿಟ್ಟ ಸಾಫ್ಟ್‌ವೇರ್ ಇಂಜಿನಿಯರ್

TV9 Digital Desk

| Edited By: ರಮೇಶ್ ಬಿ. ಜವಳಗೇರಾ

Updated on: Jan 31, 2023 | 10:50 PM

ರಾಸಾಯನಿಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಗಂಡನ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಕಿರುಕುಳ ನೀಡಿದ್ದರಿಂದ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ತಿಳಿದುಬಂದಿದೆ.

ಪತಿಯ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಟಾರ್ಚರ್, ಪುತ್ರನ ಶಾಲೆಯಲ್ಲಿ ಪ್ರಯೋಗಕ್ಕೆ ತಂದಿದ್ದ ಕೆಮಿಕಲ್ ಕುಡಿದು ಪ್ರಾಣಬಿಟ್ಟ ಸಾಫ್ಟ್‌ವೇರ್ ಇಂಜಿನಿಯರ್
ಮಾಧುರಿ ದಂಪತಿ

ಬೆಂಗಳೂರು: ವರದಕ್ಷಿಣೆ ಕಿರುಕುಳ ತಾಳಲಾಗದೇ ಆತ್ಮಹತ್ಯೆಗೆ ಯತ್ನಿಸಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಮಹಿಳೆಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ದೇವನಹಳ್ಳಿಯ ವಿಜಿಪುರ ಗ್ರಾಮದ ಮಾಧುರಿ (26) ಸಾವಿಗೀಡಾದ ಮಹಿಳೆ. ಈಕೆ ಬೆಂಗಳೂರಿನ ತೂಬರಹಳ್ಳಿಯ ನಿವಾಸಿ ಗುರುಪ್ರಸಾದ್ ಜತೆ 2016ರಲ್ಲಿ ಮದುವೆಯಾಗಿದ್ದಳು. ಆದ್ರೆ, ಗುರುಪ್ರಸಾದ್ ಕುಟುಂಬದವರು ಮಾಧುರಿಗೆ ಕಿರುಕುಳ ನೀಡುತ್ತಿದ್ದರಂತೆ. ಇದರಿಂದ ಬೇಸತ್ತ ಮಾಧುರಿ ನವರಿ 25ರಂದು ಮಗನ ಶಾಲೆಯಲ್ಲಿ ಕೆಮಿಕಲ್ ಎಕ್ಸಪೀರಿಮೆಂಟ್ ಗೆ ತಂದಿದ್ದ ರಾಸಾಯನಿಕವನ್ನು ಜ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಮಾಧುರಿಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಇಂದು (ಜನವರಿ 31) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

ಇದನ್ನೂ ಓದಿ: ಯುವತಿಯ ಬೆತ್ತಲೆ ಜಗತ್ತಿನಲ್ಲಿ ಸಿಲುಕಿಕೊಂಡ ಯುವಕ, ಮರ್ಯಾದೆಗೆ ಹೆದರಿ ಪ್ರಾಣ ಬಿಟ್ಟ

ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಮಾಧುರಿ 2016ರಲ್ಲಿ ಗುರುಪ್ರಸಾದ್ ಎಂಬಾತನನ್ನ ಮದುವೆಯಾಗಿದ್ದಳು. ಗುರುಪ್ರಸಾದ್ ಕೂಡ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರು. ಈ ದಂಪತಿಗೆ 6 ವರ್ಷದ ಮಗನಿದ್ದಾನೆ. ರಾಸಯಾನಿಕ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅಂದರೆ ಜನವರಿ 26ರಂದು ಪೊಲೀಸರು ಆಕೆಯ ಹೇಳಿಕೆ ಪಡೆದುಕೊಂಡಿದ್ದರು. ಬಳಿಕ ಆಕೆಯ ಹೇಳಿಕೆಯೊಂದಿಗೆ ವರ್ತೂರು ಠಾಣೆ ಪೊಲೀಸ್ ಎಫ್ಐಆರ್ ದಾಖಲಿಸಿಕೊಂಡಿದ್ದರು.

ತಾನು ಗರ್ಭಿಣಿ ಆಗಿದ್ದಾಗಿನಿಂದ ಗುರುಪ್ರಸಾದ್ ಬೇರೆಯವರ ಜೊತೆ ಅಕ್ರಮ ಸಂಬಂಧ ಹೊಂದಿದ್ದರು ಎಂದು ಮಾಧುರಿ ಪತಿ ವಿರುದ್ಧ ಪೊಲೀಸರು ಮುಂದೆ ಹೇಳಿಕೆಯಲ್ಲಿ ಆರೋಪಿಸಿದ್ದಾರೆ. ಅಲ್ಲದೇ ಹಲ್ಲೆ ಮಾಡಿ ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಹೇಳಿದ್ದಾಳೆ, ಇದೀಗ ಮಾಧುರಿ ಕುಟುಂಬಸ್ಥರು ಕೊಲೆ ಯತ್ನ ಆರೋಪ ಮಾಡಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada