AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dabaspet: ದಾಬಸ್ ​ಪೇಟೆ ಬಳಿ ಭೀಕರ ರಸ್ತೆ ಅಪಘಾತ: ಲಾರಿಗೆ ಹಿಂದಿನಿಂದ ಬೈಕ್ ಡಿಕ್ಕಿ, ತಂದೆ-ಮಗಳು ಸಾವು

Road Accident: ಸುಮಾರು 40 ವರ್ಷ ವಯಸ್ಸಿನ ತಂದೆ ಮತ್ತು 6 ವರ್ಷದ ಮಗಳು ಮೃತ ದುರ್ದೈವಿಗಳು. ಬೆಂಗಳೂರು ಮಾರ್ಗವಾಗಿ ತುಮಕೂರು ಕಡೆ ಮಗು ಜೊತೆ ದಂಪತಿ ತೆರಳುತ್ತಿದ್ದರು.

Dabaspet: ದಾಬಸ್ ​ಪೇಟೆ ಬಳಿ ಭೀಕರ ರಸ್ತೆ ಅಪಘಾತ: ಲಾರಿಗೆ ಹಿಂದಿನಿಂದ ಬೈಕ್ ಡಿಕ್ಕಿ, ತಂದೆ-ಮಗಳು ಸಾವು
ಲಾರಿಗೆ ಹಿಂದಿನಿಂದ ಬೈಕ್ ಡಿಕ್ಕಿ: ತಂದೆ, ಮಗಳು ಸಾವು
TV9 Web
| Updated By: ಸಾಧು ಶ್ರೀನಾಥ್​|

Updated on:Mar 03, 2022 | 3:49 PM

Share

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ದಾಬಸ್ ​ಪೇಟೆಯಲ್ಲಿ ಲಾರಿಗೆ ಹಿಂದಿನಿಂದ ಬೈಕ್ ಡಿಕ್ಕಿಯಾಗಿ ತಂದೆ ಮತ್ತು ಮಗಳು ಸಾವನ್ನಪ್ಪಿದ್ದಾರೆ. ಬೈಕ್​​ನಲ್ಲಿದ್ದ ತಾಯಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 40 ವರ್ಷ ವಯಸ್ಸಿನ ತಂದೆ ಮತ್ತು 6 ವರ್ಷದ ಮಗಳು ಮೃತ ದುರ್ದೈವಿಗಳು. ಬೆಂಗಳೂರು ಮಾರ್ಗವಾಗಿ ತುಮಕೂರು ಕಡೆ ಮಗು ಜೊತೆ ದಂಪತಿ ತೆರಳುತ್ತಿದ್ದರು.

iPhone ಖರೀದಿಸಲು ಮನೆಯವರ ಜೊತೆ ಮುನಿಸಿಕೊಂಡು ನಾಪತ್ತೆಯಾಗಿದ್ದ ಮೈಸೂರು ವಿದ್ಯಾರ್ಥಿ ಕೆರೆಯಲ್ಲಿ ಶವವಾಗಿ ಪತ್ತೆ ಸಾಂಸ್ಕೃತಿಕ ನಗರಿ ಮೈಸೂರಿನ ಹೊರವಲಯದಲ್ಲಿರುವ ಇಲವಾಲದಿಂದ ವಾರದ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿ ನಾಗೇಶ್(17) ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಐ ಫೋನ್ (iPhone) ಖರೀದಿ ಮಾಡುವ ವಿಚಾರವಾಗಿ ಮನೆಯವರ ಜೊತೆ ಮುನಿಸಿಕೊಂಡಿದ್ದ ನಾಗೇಶ್ ತಾನೇ ಹಣ ಹೊಂದಿಸಿದ್ದ. ಆತ ಹೊಂದಿಸಿದ್ದ ಹಣಕ್ಕಾಗಿ ಸ್ನೇಹಿತರೇ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ನಾಗೇಶ್ ಪೋಷಕರು ಇಲವಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿದ್ಯಾರ್ಥಿ ನಾಗೇಶ್ ಬಹಳ ದಿನದಿಂದ ಐ ಫೋನ್ ಖರೀದಿ ಮಾಡಬೇಕು ಎಂಬ ಆಸೆಯನ್ನು ಹೊಂದಿದ್ದ. ಈ ಬಗ್ಗೆ ಪೋಷಕರ ಬಳಿ ಕೇಳಿದಾಗ ಅಷ್ಟೊಂದು ಹಣದ ಫೋನ್ ಏಕೆ ಎಂದು ನಿರಾಕರಿಸಿದ್ದರು. ಹೀಗಾಗಿ ನಾಗೇಶ್ ಪೋಷಕರೊಂದಿಗೆ ಮುನಿಸಿಕೊಂಡಿದ್ದ. ಸದ್ಯ ತಾನೇ ಐ ಫೋನ್ ಖರೀದಿಸಲು ಹಣ ಹೊಂದಿಸುತ್ತಿದ್ದ. ಆದ್ರೆ ವಾರದ ಹಿಂದೆ ಏಕಾಏಕಿ ನಾಗೇಶ್ ನಾಪತ್ತೆಯಾಗಿದ್ದ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಲಾಗಿತ್ತು. ಆದ್ರೆ ಇಂದು ವಿದ್ಯಾರ್ಥಿ ನಾಗೇಶ್ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈ ಸಂಬಂಧ ಪೋಷಕರು ನಾಗೇಶ್ ಹೊಂದಿಸಿದ್ದ ಹಣಕ್ಕಾಗಿ ಸ್ನೇಹಿತರೇ ಕೊಲೆ ಮಾಡಿರಬೇಕು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಉಕ್ರೇನ್​​ನಲ್ಲಿ ಮೆಡಿಕಲ್ ವಿದ್ಯಾರ್ಥಿ ನವೀನ್ ಸಾವಿನ ಹಿನ್ನೆಲೆ ನೀಟ್ ವಿರುದ್ಧ ಸಮರ ಸಾರಿದ ಜೆಡಿಎಸ್: ಹೆಚ್​ಡಿ ಕುಮಾರಸ್ವಾಮಿ ಟ್ವೀಟ್

ಇದನ್ನೂ ಓದಿ: ಕಾಫಿನಾಡಿನಲ್ಲಿ ಆನೆಗಳಿಂದ ಬೆಳೆಗಳನ್ನು ಉಳಿಸಲು ಗಿಡಗಳಿಗೆ ಮೈಕ್ ಸೆಟ್, ಡಿಜೆ ಸಿಸ್ಟಮ್ ಅಳವಡಿಸಿದ ರೈತರು!

Published On - 3:43 pm, Thu, 3 March 22