ಕ್ವಾರಿಯಲ್ಲಿ ಮೀನು ಹಿಡಿಯಲು ಹೋಗಿ ಬಾಲಕ ನೀರುಪಾಲು; ಜಾನುವಾರು ಕೊಟ್ಟಿಗೆ ಕಾಸಿಗೂ ನಾಲಿಗೆ ಚಾಚಿದ್ದ ಪಿಡಿಓ ಎಸಿಬಿ ಬಲೆಗೆ

ಕ್ವಾರಿಯಲ್ಲಿ ಮೀನು ಹಿಡಿಯಲು ಹೋಗಿ ಬಾಲಕ ನೀರುಪಾಲು; ಜಾನುವಾರು ಕೊಟ್ಟಿಗೆ ಕಾಸಿಗೂ ನಾಲಿಗೆ ಚಾಚಿದ್ದ ಪಿಡಿಓ ಎಸಿಬಿ ಬಲೆಗೆ
ಕೂಡ್ಲು ಕ್ವಾರಿಯಲ್ಲಿ ಮೀನು ಹಿಡಿಯಲು ಹೋಗಿ 9 ವರ್ಷದ ಬಾಲಕ ನೀರುಪಾಲು

ಸಹೋದರರ ಜೊತೆ ನಿನ್ನೆ ಗುರುವಾರ ಮಧ್ಯಾಹ್ನ 3 ಗಂಟೆಗೆ ಮೀನು ಹಿಡಿಯಲು ಬಾಲಕ ವಿಷ್ಣು ಹೋಗಿದ್ದ. ಬಾಲಕ ವಿಷ್ಣು ಮೀನು ಹಿಡಿಯಲು ಹೋಗಿ ಕಾಲು ಜಾರಿ ಬಿದ್ದಿದ್ದಾನೆ. ಬಾಲಕನ ಜೊತೆಯಲ್ಲಿ ಹೋಗಿದ್ದ ಸಹೋದರರು ಕುಟುಂಬಸ್ಥರಿಗೆ ಈ ಮಾಹಿತಿ ತಲುಪಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಕಾರ್ಯಾಚರಣೆ ನಡೆಸಿತ್ತು.

TV9kannada Web Team

| Edited By: sadhu srinath

Jan 21, 2022 | 10:16 AM

ಬೆಂಗಳೂರು: ಕೂಡ್ಲು ಗ್ರಾಮದ ಬಳಿ ಕ್ವಾರಿಯಲ್ಲಿ ಮೀನು ಹಿಡಿಯಲು ಹೋಗಿ 9 ವರ್ಷದ ಬಾಲಕ ವಿಷ್ಣು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ. ನೇಪಾಳ ಮೂಲದ ದಂಪತಿಯ ಮಗ ವಿಷ್ಣು ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ನೇಪಾಳ ಮೂಲದ ಕುಟುಂಬ ಕೆಲಸ ಅರಸಿಕೊಂಡು ಕೆಲ ವರ್ಷಗಳ ಹಿಂದೆ ಕೂಡ್ಲು ಸಮೀಪದ ಸಿಂಗಸಂದ್ರದಲ್ಲಿ ನೆಲೆಸಿತ್ತು.

ಸಹೋದರರ ಜೊತೆ ನಿನ್ನೆ ಗುರುವಾರ ಮಧ್ಯಾಹ್ನ 3 ಗಂಟೆಗೆ ಮೀನು ಹಿಡಿಯಲು ಬಾಲಕ ವಿಷ್ಣು ಹೋಗಿದ್ದ. ಬಾಲಕ ವಿಷ್ಣು ಮೀನು ಹಿಡಿಯಲು ಹೋಗಿ ಕಾಲು ಜಾರಿ ಬಿದ್ದಿದ್ದಾನೆ. ಬಾಲಕನ ಜೊತೆಯಲ್ಲಿ ಹೋಗಿದ್ದ ಸಹೋದರರು ಕುಟುಂಬಸ್ಥರಿಗೆ ಈ ಮಾಹಿತಿ ತಲುಪಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಕಾರ್ಯಾಚರಣೆ ನಡೆಸಿತ್ತು. ನಿನ್ನೆ ಸಂಜೆ ಕತ್ತಲಾಗುವ ತನಕ ಹುಡುಕಾಡಿದರೂ ಮೃತ ದೇಹ ಪತ್ತೆಯಾಗಿರಲಿಲ್ಲ. ಬಳಿಕ ಇಂದು ಮುಂಜಾನೆಯಿಂದ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದರು. ಸ್ಥಳೀಯ ಈಜುಗಾರರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಯ ಜಂಟಿ ಕಾರ್ಯಾಚರಣೆಯು ಬಾಲಕನ ಮೃತ ದೇಹ ಹೊರತೆಗೆಯುವಲ್ಲಿ ಸಹಕಾರಿಯಾಗಿದೆ.

ಜಾನುವಾರು ಕೊಟ್ಟಿಗೆ ಕಾಸಿಗೂ ನಾಲಿಗೆ ಚಾಚಿದ್ದ ಪಿಡಿಓ ಎಸಿಬಿ ಬಲೆಗೆ ಮೈಸೂರು: ಜಾನುವಾರು ಕೊಟ್ಟಿಗೆ ನಿರ್ಮಾಣಕ್ಕೆ ಸರ್ಕಾರದ ಧನ ಸಹಾಯ ಬಿಡುಗಡೆ ಮಾಡಲು 5 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಪಿಡಿಒ ಸತೀಶ್ ಕುಮಾರ್ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ತಟ್ಟೆಕೆರೆ ಗ್ರಾಮ ಪಂಚಾಯತ್ ಪಿಡಿಒ ಸತೀಶ್ ಕುಮಾರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಸರ್ಕಾರದ ವತಿಯಿಂದ ಕೊಡಮಾಡುವ ಸಹಾಯ ಧನ ಬಾಬತ್ತಿನಲ್ಲಿ 28 ಸಾವಿರ ರೂ ಹಣ ಬಿಡುಗಡೆಗೆ 5 ಸಾವಿರ ರೂ ಲಂಚಕ್ಕೆ ಪಿಡಿಒ ಸತೀಶ್ ಬೇಡಿಕೆ ಇಟ್ಟಿದ್ದರು. ರಮೇಶ್ ಎಂಬ ಫಲಾನುಭವಿಯಿಂದ ಲಂಚ ಪಡೆಯುವಾಗಲೇ ಪಿಡಿಒ ಸತೀಶ್ ಬಲೆಗೆ ಬಿದ್ದರು. ಎಸಿಬಿ ಡಿವೈಎಸ್‌ಪಿ ಧರ್ಮೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

ಇದನ್ನೂ ಓದಿ:

ಸರ್ಕಾರ ನೀಡಿದ ಕೋವಿಡ್ ಪರಿಹಾರ ಚೆಕ್ ಬೌನ್ಸ್! ಸುತ್ತಿ ಸುತ್ತಿ ಸುಸ್ತಾದರೂ ಪರಿಹಾರ ಹಣ ಮಾತ್ರ ಕೈಗೆ ಸಿಗ್ತಿಲ್ಲ

Follow us on

Related Stories

Most Read Stories

Click on your DTH Provider to Add TV9 Kannada