ಪತ್ನಿ ನೇತ್ರಾಳಿಂದ ಹತ್ಯೆಗೊಳಗಾಗಿದ್ದ ಉದ್ಯಮಿ ಸ್ವಾಮಿರಾಜನ್ ಮನೆಯಲ್ಲಿ ಕಳವು; ಮಡದಿ ಜೈಲಿನಲ್ಲೇ ವಾಸ

| Updated By: preethi shettigar

Updated on: Nov 30, 2021 | 12:08 PM

ಸ್ವಾಮಿರಾಜನ್ ಕೊಲೆಯ ನಂತರ ಪತ್ನಿ ನೇತ್ರಾ ಜೈಲು ಸೇರಿದ್ದಾಳೆ. ಹೀಗಾಗಿ ಮನೆಯ ಬಾಗಿಲು, ಕಿಟಕಿ ಸರಳು ಮುರಿದು ಕಳ್ಳತನ ಮಾಡಲಾಗಿದ್ದು, ಕದ್ದ ವಸ್ತುಗಳ ನಿಗದಿತ ಮೌಲ್ಯದ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ನಿ ನೇತ್ರಾಳಿಂದ ಹತ್ಯೆಗೊಳಗಾಗಿದ್ದ ಉದ್ಯಮಿ ಸ್ವಾಮಿರಾಜನ್ ಮನೆಯಲ್ಲಿ ಕಳವು; ಮಡದಿ ಜೈಲಿನಲ್ಲೇ ವಾಸ
ನೇತ್ರಾ ಮತ್ತು ಕಳ್ಳತನವಾದ ಮನೆ
Follow us on

ಬೆಂಗಳೂರು: ಪತ್ನಿಯಿಂದಲೇ ಹತ್ಯೆಗೊಳಗಾಗಿದ್ದ ಉದ್ಯಮಿ ಸ್ವಾಮಿರಾಜನ್ ಮನೆಯಲ್ಲಿ ಕಳ್ಳತನವಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಹಾರೋಕ್ಯಾತನಹಳ್ಳಿಯ ಸ್ವಾಮಿರಾಜನ್ ಮನೆಯಲ್ಲಿ ಯಾರು ಇರದೆ ಇರುವುದನ್ನು ಕಂಡು ಕಳ್ಳತನ ಮಾಡಲಾಗಿದೆ. ಸ್ವಾಮಿರಾಜನ್ ಕೊಲೆಯ ನಂತರ ಪತ್ನಿ (Wife) ನೇತ್ರಾ ಜೈಲು ಸೇರಿದ್ದಾಳೆ. ಹೀಗಾಗಿ ಮನೆಯ ಬಾಗಿಲು, ಕಿಟಕಿ ಸರಳು ಮುರಿದು ಕಳ್ಳತನ (Theft) ಮಾಡಲಾಗಿದ್ದು, ಕದ್ದ ವಸ್ತುಗಳ ನಿಗದಿತ ಮೌಲ್ಯದ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನವೆಂಬರ್​ 7ರಂದು ಹಾರೋಕ್ಯಾತನಹಳ್ಳಿಯಲ್ಲಿ ನೇತ್ರಾ ( 37) ತನ್ನ ಪತಿಯನ್ನು ಕೊಲೆ ಮಾಡಿದ್ದಳು. 2ನೇ ಪತ್ನಿಯಾಗಿದ್ದ ನೇತ್ರಾ ಎಂಬುವವರು ಮಧ್ಯರಾತ್ರಿ ತುಮಕೂರು ರಸ್ತೆಯ ಸಮೀಪದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ಆಗಮಿಸಿ, ತನ್ನ ಗಂಡ ಉದ್ಯಮಿ ಸ್ವಾಮಿರಾಜನ್ (50) ಅವರನ್ನು ಕೊಲೆ ಮಾಡಿ, ಬಳಿಕ ಪೊಲೀಸರ ಬಳಿ ಬಂದು ತಪ್ಪೊಪ್ಪಿಕೊಂಡಿದ್ದರು.

ರಿಯಲ್ ಎಸ್ಟೇಟ್ ಉದ್ಯಮಿ ಆಗಿರುವ ಸ್ವಾಮಿರಾಜನ್ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಸೆಕ್ಸ್ ವಿಚಾರವಾಗಿ ಅತಿರೇಕದ ವರ್ತನೆಯಿಂದ ಬೇಸತ್ತು ಕೊಲೆ ಮಾಡಿರೋದಾಗಿ ಪೊಲೀಸರ ಎದುರು ಪತ್ನಿ ನೇತ್ರಾ ಹೇಳಿಕೊಂಡಿದ್ದಳು. ಆದರೆ ಪೊಲೀಸರ ತನಿಖೆ ವೇಳೆ ಪ್ರಿಯಕರ ಮತ್ತು ಅಕ್ಕನ ಮಗನ ಜತೆ ಸೇರಿ ಗಂಡನನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಪ್ರಿಯಕರ ಭರತ್​ ಹಾಗೂ ಅಕ್ಕನ ಮಗ ವಿಜಯ್​ನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:

ಅನ್ನಪೂರ್ಣೇಶ್ವರಿ ನಗರದಲ್ಲಿ ಪತ್ನಿ ಕೊಲೆ ಪ್ರಕರಣ; ಸಿನಿಮೀಯ ಶೈಲಿಯಲ್ಲಿ ನಡೆದಿತ್ತು ಮರ್ಡರ್ ಸ್ಕೆಚ್

ಬೆಂಗಳೂರು: ಜಾಗದ ವಿಚಾರಕ್ಕೆ ಅಕ್ಕನ ಕೊಲೆಗೆ ಸುಪಾರಿ ನೀಡಿದ್ದ ತಮ್ಮ! 7 ತಿಂಗಳ ಹಿಂದೆ ನಡೆದ ಕೊಲೆಯ ರಹಸ್ಯವನ್ನು ಖಾಕಿ ಭೇದಿಸಿದ್ದೇಗೆ?

 

Published On - 11:45 am, Tue, 30 November 21