ಬೆಂಗಳೂರು: ಜಾಗದ ವಿಚಾರಕ್ಕೆ ಅಕ್ಕನ ಕೊಲೆಗೆ ಸುಪಾರಿ ನೀಡಿದ್ದ ತಮ್ಮ! 7 ತಿಂಗಳ ಹಿಂದೆ ನಡೆದ ಕೊಲೆಯ ರಹಸ್ಯವನ್ನು ಖಾಕಿ ಭೇದಿಸಿದ್ದೇಗೆ?

ಜಾಗದ ವಿಚಾರಕ್ಕೆ ಬೆಂಗಳೂರಿನ ರಾಜಾಜಿನಗರದಲ್ಲಿ ಸೀತಾರನ್ನು ಹತ್ಯೆಗೈದಿದ್ದರು. ಹತ್ಯೆ ಬಳಿಕ ಅಕ್ಕ ಕಾಣೆಯಾಗಿದ್ದಾಳೆಂದು ದೂರು ನೀಡಿದ್ದರು. ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

ಬೆಂಗಳೂರು: ಜಾಗದ ವಿಚಾರಕ್ಕೆ ಅಕ್ಕನ ಕೊಲೆಗೆ ಸುಪಾರಿ ನೀಡಿದ್ದ ತಮ್ಮ! 7 ತಿಂಗಳ ಹಿಂದೆ ನಡೆದ ಕೊಲೆಯ ರಹಸ್ಯವನ್ನು ಖಾಕಿ ಭೇದಿಸಿದ್ದೇಗೆ?
ಮೃತ ಸೀತಾ
Follow us
TV9 Web
| Updated By: sandhya thejappa

Updated on: Nov 27, 2021 | 12:18 PM

ಬೆಂಗಳೂರು: ಜಾಗದ ವಿಚಾರಕ್ಕೆ ಸ್ವಂತ ಅಕ್ಕನಿಗೆ ಸೈನೆಡ್ ನೀಡಿ ಹತ್ಯೆಗೈದಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳು ಸೈನೆಡ್ ನೀಡಿ 47 ವರ್ಷದ ಸೀತಾರನ್ನು ಹತ್ಯೆ ಮಾಡಿದ್ದರು. ನೂರ್ ಅಹ್ಮದ್ ಹಾಗೂ ಸತ್ಯ ಎಂಬುವವರು ಬಂಧನಕ್ಕೊಳಗಾದ ಆರೋಪಿಗಳು. ಮೃತ ಸೀತಾ ಸಹೋದರ ವೆಂಕಟೇಶ್ ಆಚಾರ್ ಪರಾರಿಯಾಗಿದ್ದಾನೆ.

ಮಿಸ್ಸಿಂಗ್ ದೂರು ನೀಡಿದ್ದ ತಮ್ಮ ಜಾಗದ ವಿಚಾರಕ್ಕೆ ಬೆಂಗಳೂರಿನ ರಾಜಾಜಿನಗರದಲ್ಲಿ ಸೀತಾರನ್ನು ಹತ್ಯೆಗೈದಿದ್ದರು. ಹತ್ಯೆ ಬಳಿಕ ಅಕ್ಕ ಕಾಣೆಯಾಗಿದ್ದಾಳೆಂದು ದೂರು ನೀಡಿದ್ದರು. ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಾಲ್ವರು ಆರೋಪಿಗಳ ಪೈಕಿ ಈಗಾಗಲೇ ಇಬ್ಬರು ಮೃತಪಟ್ಟಿದ್ದಾರೆ. 7 ತಿಂಗಳ ಹಿಂದೆ ನಡೆದ ಭಯಾನಕ ಕೊಲೆಯ ರಹಸ್ಯವನ್ನು ಸದ್ಯ ಖಾಕಿ ಭೇದಿಸಿದೆ. ನೂರ್ ಅಹ್ಮದ್ ಹಾಗೂ ಸತ್ಯ ಬಂಧಿತರಾಗಿದ್ದು, ಇನ್ನುಳಿದ ಇಬ್ಬರು ಮೆಂಟಲ್ ರಘು, ಕುಮಾರ ಸಾವನ್ನಪ್ಪಿದ್ದಾರೆ.

ಮೂಲತಃ ಮಂತ್ರಾಲಯದವರಾದ ಸೀತಾ ಬೆಂಗಳೂರಿನ ರಾಜಾಜಿನಗರದಲ್ಲಿ ನೆಲೆಸಿದ್ದರು. 2021 ಮಾರ್ಚ್ 26ಕ್ಕೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಅಕ್ಕ ಕಾಣೆಯಾಗಿದ್ದಾಳೆ ಅಂತ ಸಹೋದರ ವೆಂಕಟೇಶ್ ಆಚಾರ್ ದೂರು ನೀಡಿದ್ದ. ಮಿಸ್ಸಿಂಗ್ ಕೇಸ್ ಹಿಂದೆ ಬಿದ್ದಿದ್ದ ಸುಬ್ರಹ್ಮಣ್ಯನಗರ ಪೊಲೀಸರಿಗೆ ಸೀತಾಳ ಸುಳಿವೇ ಸಿಕ್ಕಿರಲಿಲ್ಲ. ಇತ್ತೀಚೆಗೆ ಕಾಲ್ ಡಿಟೈಲ್ಸ್ ಆಧರಿಸಿ ಸತ್ಯ ಅನ್ನೊ ವ್ಯಕ್ತಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಸೀತಾ ತಮ್ಮ ವೆಂಕಟೇಶ್ ಕೊಲೆ ಸುಪಾರಿ ನೀಡಿದ್ದಾಗಿ ಸತ್ಯ ಬಾಯಿಬಿಟ್ಟಿದ್ದಾನೆ.

ಮಂತ್ರಾಲಯದ ಬಳಿಯಿದ್ದ ಜಾಗವನ್ನು ಮಾರಲು ವೆಂಕಟೇಶ್ ಹೊರಟಿದ್ದ. ಮಾರಟ ಮಾಡಲು ಅಕ್ಕನ ಸಹಿ ಬೇಕಾಗಿತ್ತು. ಆದರೆ ಅಕ್ಕ ಸೀತಾ ಸಹಿ ಹಾಕಲು ಒಪ್ಪಿರಲಿಲ್ಲ. ಈ ಹಿನ್ನೆಲೆ ವೆಂಕಟೇಶ್ ನಾಲ್ವರಿಗೆ 2.5 ಲಕ್ಷಕ್ಕೆ ಸುಪಾರಿ ನೀಡಿದ್ದ ಎಂದು ತಿಳಿದುಬಂದಿದೆ.

ಆರೋಪಿಗಳು ಬಂಗಾರ ಖರೀದಿ ನೆಪದಲ್ಲಿ ಸೀತಾಳನ್ನು ಕರೆದೊಯ್ದಿದ್ದರು. ಹಾಸನ ಮಾರ್ಗವಾಗಿ ಕರೆದೊಯ್ದಿದ್ದರು. ನಂತರ ಟ್ಯಾಬ್ಲೆಟ್ ತಿಂದ ಸ್ವಲ್ಪ ಹೊತ್ತಿಗೆ ಸೀತಾ ಸಾವನ್ನಪ್ಪಿದ್ದರು. ಮೃತದೇಹವನ್ನು ಹೊಸಪೇಟೆ ಹತ್ತಿರದ ನೀರಿನ ಕ್ಯಾನಲ್ ಬಿಸಾಡಿದ್ದಾರೆ ಸದ್ಯ ಎಷ್ಟೆ ಹುಡುಕಾಟ ನಡೆಸಿದರೂ ಮೃತದೇಹ ಸಿಕ್ಕಿಲ್ಲ. ಹೀಗಾಗಿ ಮೃತದೇಹ ಪತ್ತೆಗೆ ಖಾಕಿ ಮುಂದಾಗಿದೆ. ಇಬ್ಬರು ಆರೋಪಿಗಳು ಮೃತಪಟ್ಟಿದ್ದು ಹೇಗೆ ಎನ್ನುವ ಬಗ್ಗೆ ಮಾಹಿತಿ ಇನ್ನು ತಿಳಿದುಬಂದಿಲ್ಲ.

ಇದನ್ನೂ ಓದಿ

ವೇಗವಾಗಿ ಹರಡುತ್ತಿದೆ ರೂಪಾಂತರಿ ಕೊರೊನಾ ವೈರಸ್! ಕಡ್ಡಾಯವಾಗಿ ಮಾಸ್ಕ್ ಧರಿಸಲು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಮನವಿ

ಇಂದು ಉನ್ನತಾಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಮಹತ್ವದ ಸಭೆ; ಕೊವಿಡ್​ 19, ಲಸಿಕೆ ನೀಡಿಕೆ ಸ್ಥಿತಿ ಪರಿಶೀಲನೆ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ