Bengaluru Crime: ಬೆಂಗಳೂರಿನಲ್ಲಿ ಪತ್ನಿ ಕೊಂದು ಆಂಧ್ರಕ್ಕೆ ಎಸ್ಕೇಪ್ ಆದ ಪತಿ ಸಿಕ್ಕಿದ್ದು ಬೀದಿ ಹೆಣವಾಗಿ

ವಯಸ್ಸು ಐವತ್ತಾದರು ನಿಸಾರ್ ಪತ್ನಿ ಶೀಲ ಶಂಕಿಸುತ್ತಿದ್ದ. ನವೆಂಬರ್ 19ರಂದು ಪತ್ನಿಯ ಹತ್ಯೆಗೆ ಪ್ಲಾನ್ ಮಾಡಿಕೊಂಡು ಆಕೆಯ ಮೇಲೆ ಪೆಟ್ರೋಲ್ ಸುರಿದು ಕೊಲೆ ಮಾಡಿದ್ದಾನೆ. ಆದ್ರೆ ಕೊನೆಗೆ ಬೆಂಗಳೂರಿನಿಂದ ತಪ್ಪಿಸಿಕೊಂಡು ಹೋಗಿ ಆಂಧ್ರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

Bengaluru Crime: ಬೆಂಗಳೂರಿನಲ್ಲಿ ಪತ್ನಿ ಕೊಂದು ಆಂಧ್ರಕ್ಕೆ ಎಸ್ಕೇಪ್ ಆದ ಪತಿ ಸಿಕ್ಕಿದ್ದು ಬೀದಿ ಹೆಣವಾಗಿ
ಸಾಂಕೇತಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Nov 28, 2021 | 8:36 AM

ಬೆಂಗಳೂರು: ಹೆಂಡತಿಯ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಪತ್ನಿಯನ್ನು ಕೊಂದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಆಯೇಷಾ(45) ಮೃತ ಮಹಿಳೆ. ಹೆಂಡತಿಯನ್ನು ಕೊಲೆ ಮಾಡಿದ್ದ ಪತಿ ನಿಸಾರ್(50) ಆಂಧ್ರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ನಿಸಾರ್ ಮತ್ತು ಆಯೇಷಾ ದಂಪತಿ ಬೆಂಗಳೂರಿನ ರಾಜೇಂದ್ರನಗರದಲ್ಲಿ ವಾಸವಿದ್ದರು. ವಯಸ್ಸು ಐವತ್ತಾದರು ನಿಸಾರ್ ಪತ್ನಿ ಶೀಲ ಶಂಕಿಸುತ್ತಿದ್ದ. ನವೆಂಬರ್ 19ರಂದು ಪತ್ನಿಯ ಹತ್ಯೆಗೆ ಪ್ಲಾನ್ ಮಾಡಿಕೊಂಡು ಆಕೆಯ ಮೇಲೆ ಪೆಟ್ರೋಲ್ ಸುರಿದು ಕೊಲೆ ಮಾಡಿದ್ದಾನೆ. ಆದ್ರೆ ಕೊನೆಗೆ ಬೆಂಗಳೂರಿನಿಂದ ತಪ್ಪಿಸಿಕೊಂಡು ಹೋಗಿ ಆಂಧ್ರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಆರೋಪಿ ನಿಸಾರ್ ಮಸೀದಿಗಳಲ್ಲಿ ಚಂದಾ ವಸೂಲಿ ಮಾಡಿ ಮದರಸಗೆ ನೀಡೊ‌ ಕೆಲಸ ಮಾಡುತ್ತಿದ್ದ. ಆತ ಪತ್ನಿ‌ ಶೀಲ ಶಂಕಿಸಿ ಆಗಾಗ ಜಗಳ ಮಾಡ್ತಿದ್ದ. ಮನೆಯಲ್ಲೂ ಕೂಡ ಹೆಚ್ಚಾಗಿ ಇರ್ತಾ ಇರ್ಲಿಲ್ಲ. ನವಂಬರ್ 19 ರಂದು ಹೆಂಡತಿಯನ್ನ ಕೊಲ್ಲಲೇಬೇಕೆಂದು ರೆಡಿಯಾಗಿ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಖರೀದಿಸಿಕೊಂಡು ಮನೆಗೆ ಬಂದಿದ್ದ.

ಪತ್ನಿಯನ್ನು ಕೊಲ್ಲಲು ಪತಿಯಿಂದ ಮಾಸ್ಟರ್ ಪ್ಲಾನ್ ಅಜ್ಜಿ ಆಯೇಷಾ ಜೊತೆ ಮಗಳ ಪುಟ್ಟ ಮಗು ವಾಸವಾಗಿತ್ತು. ಪಾಪು ಮನೆಯಲ್ಲಿದ್ರೆ ಪತ್ನಿ ಕಥೆ ಮುಗಿಸೋದು ಕಷ್ಟ ಎಂದು ಮೊದಲಿಗೆ ಅಳಿಯನಿಗೆ ಕರೆ ಮಾಡಿ ಪಾಪುವನ್ನ ನಾನು ನೋಡಬೇಕು ಅನ್ನಿಸ್ತಿದೆ ನೀಲಸಂದ್ರ ಸಂಬಂಧಿ ಮನೆಗೆ ಕರೆತರುವಂತೆ ಹೇಳಿದ್ದ. ಅದರಂತೆ ನವಂಬರ್ 19 ರ ಶುಕ್ರವಾರ ಆರೋಪಿ ನಿಸಾರ್ ಅಳಿಯ ಪಾಪು ಕರೆದು ನೀಲಸಂದ್ರ ಕಡೆ ತೆರಳಿದ್ದ. ಮನೆಯಲ್ಲಿದ್ದ ಮಗ ಮತ್ತು ಸೊಸೆ ಕೂಡ ಕೆಲಸಕ್ಕೆ ತೆರಳಿದ್ರು. ಈ ಸಮಯಕ್ಕಾಗಿ ಕಾಯುತ್ತಿದ್ದ ಆರೋಪಿ ಸಂಜೆ 3 ಗಂಟೆಗೆ ತನ್ನ ಮನೆಗೆ ಬಂದಿದ್ದ. ಬಂದು ಪತ್ನಿ ಬಳಿ ಐದು ಕೆ.ಜಿಯ ಚಿಕ್ಕ ಸಿಲಿಂಡರ್ ಕೊಡು ಅಂತಾ ಹೊರಗಿನಿಂದಲೇ ಕೇಳಿದ್ದಾನೆ. ಆಗ ಪತ್ನಿ ಸಿಲಂಡರ್ ತರಲು ಹೋದಾಗ ಆಕೆ ಮೇಲೆ ಪೆಟ್ರೋಲ್ ಸುರಿದು ತಕ್ಷಣ ಡೋರ್ ಲಾಕ್ ಮಾಡಿಕೊಂಡಿದ್ದಾನೆ. ಬಳಿಕ ಡೋರ್ ಪಕ್ಕದಲ್ಲೇ ಇದ್ದ ಕಿಟಕಿ ಗಾಜನ್ನು ಒಡೆದಿದ್ದಾನೆ. ಈ ವೇಳೆ ಒಡೆದ ಗಾಜಿನ ಚೂರು ಆತನ ಕೈಯನ್ನ ಸೀಳಿದೆ. ರಕ್ತ ಹರಿತಿದ್ರು ಕಿಟಕಿಯಿಂದಲೇ ಬೆಂಕಿ ಕಡ್ಡಿ ಗೀಚಿ ಎಸೆದಿದ್ದಾನೆ.

ತಕ್ಷಣ ಬೆಂಕಿ ಸ್ಫೋಟಗೊಂಡಿದೆ. ಬಾಗಿಲು ಒಡೆದಿದೆ. ಈ ಪರಿಣಾಮ ಕಿಟಕಿ ಬಳಿ ಇದ್ದ ಈತನ ಮುಖವನ್ನೂ ಬೆಂಕಿ ಸುಟ್ಟಿದೆ. ಅಕ್ಕ ಪಕ್ಕದವರು ಬರುವಷ್ಟರಲ್ಲಿ ಆರೋಪಿ ನಿಸಾರ್ ಎಸ್ಕೇಪ್ ಆಗಿದ್ದಾನೆ. ಬೆಂಕಿ ಆರಿಸಿದ ನೆರೆಹೊರೆಯವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಉಸಿರಾಡ್ತಿದ್ದ ಆಯೇಷಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಪೊಲೀಸರು ಶುಕ್ರವಾರ ಸಂಜೆ ಹೊತ್ತಿಗೆ ಆರೋಪಿ ಪತ್ತೆಗೆ ಟೀಂ ರೆಡಿ ಮಾಡಿ ಕಾರ್ಯಾಚರಣೆ ಶುರು ಮಾಡಿದ್ರು.

ಪತ್ನಿ ಕೊಂದು ಎಸ್ಕೇಪ್ ಆದವ ಬೀದಿ ಹೆಣವಾಗಿದ್ದ ಆತನಿಗಾಗಿ ಎಲ್ಲಾ ಕಡೆಗಳಲ್ಲೂ ಹುಡುಕಾಟ ನಡೆಸಿದ್ರು. ಆರೋಪಿ ನಿಸಾರ್ ಬಸ್ ಹತ್ತಿ ಆಂಧ್ರ ಪ್ರದೇಶದತ್ತ ಪರಾರಿಯಾಗಿದ್ದ. ಜೊತೆಗೆ ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿದ್ದ. ಫೋನ್ ಆಗಾಗ ಆನ್ ಮಾಡಿ ಆಫ್ ಮಾಡ್ತಿದ್ದ ಆದರೆ ಯಾರಿಗೂ ಕರೆ ಮಾಡಿರಲಿಲ್ಲಿ. ಲೊಕೇಶನ್ ಟ್ರೇಸ್ ಮಾಡಿದ ಖಾಕಿಗೆ ಆತ ಮದನಪಲ್ಲಿಯಲ್ಲಿ ಇರೋದು ಗೊತ್ತಾಗಿದೆ. ಇಷ್ಟೆಲ್ಲಾ ಗಾಯವಾಗಿದ್ರು ಆತ ಆಸ್ಪತ್ರೆಗೆ ಮಾತ್ರ ಹೋಗಿರಲಿಲ್ಲ. ಬಸ್ ನಲ್ಲಿಯೇ ಆಂಧ್ರಗೆ ಹೋಗಿ ತಲೆಮರೆಸಿಕೊಳ್ಳುವ ಯತ್ನ ಮಾಡಿದ್ದ.

ಭಾನುವಾರ ಬೆಳಗ್ಗೆ ಮತ್ತೆ ಫೋನ್ ಆನ್ ಮಾಡಿದ್ದಾನೆ. ಆಗ ಆತ ಪೆನುಗೊಂಡದಲ್ಲಿ ಇರೋದು ಗೊತ್ತಾಗಿ ಪೊಲೀಸರು ಅಲ್ಲಿದ್ದ ಮಸೀದಿ, ದರ್ಗಾ ಎಲ್ಲಾ ಕಡೆ ಹುಡುಕಾಡಿದ್ದಾರೆ. ಆತನನ್ನು ಹುಡುಕಿ ಹೈರಾಣಾಗಿದ್ದಾರೆ. ಇದೇ ವೇಳೆ ಭಾನುವಾರ ನಿಸಾರ್ ನಂಬರ್ಗೆ ಮಗ ಮನ್ಸೂರ್ ಕರೆ ಮಾಡಿದ್ದಾನೆ. ಆಗ ಫೋನ್ ರಿಸೀವ್ ಮಾಡಿದ ಸ್ಥಳೀಯರು ಆತ ಸಾವನ್ನಪ್ಪಿರೊ ವಿಷಯ ತಿಳಿಸಿದ್ದಾರೆ. ಪತ್ನಿಯನ್ನು ಕೊಲೆ ಮಾಡಿ ತಲೆ ಮರಿಸಿಕೊಳ್ಳಲು ಆಂಧ್ರಕ್ಕೆ ಬಂದ ಆರೋಪಿ ಬೀದಿ ಹೆಣವಾಗಿದ್ದಾನೆ.

ಇದನ್ನೂ ಓದಿ: ಬೆಂಗಳೂರು: ಜಾಗದ ವಿಚಾರಕ್ಕೆ ಅಕ್ಕನ ಕೊಲೆಗೆ ಸುಪಾರಿ ನೀಡಿದ್ದ ತಮ್ಮ! 7 ತಿಂಗಳ ಹಿಂದೆ ನಡೆದ ಕೊಲೆಯ ರಹಸ್ಯವನ್ನು ಖಾಕಿ ಭೇದಿಸಿದ್ದೇಗೆ?

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?