ನೆಲಮಂಗಲ: ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಆಕಸ್ಮಿಕ ಬೆಂಕಿ; ಕಿಡಿಗೇಡಿಗಳು ಕೃತ್ಯ ಎಸಗಿರುವ ಶಂಕೆ
ನೆಲಮಂಗಲದ ಪೇಟೆ ಬೀದಿಯ ಹಿಪ್ಪೇ ಆಂಜನೇಯ ಬಡಾವಣೆಯ ನಂದೀಶ್ ಅವರಿಗೆ ಸೇರಿದ ಮಹೀಂದ್ರ ಎಕ್ಸ್ ಯುವಿ 500 ಕಾರಿಗೆ ಬೆಂಕಿ ತಗುಲಿದೆ. ಸದ್ಯ ನೆಲಮಂಗಲ ಅಗ್ನಿಶಾಮಕ ಸಿಬ್ಬಂದಿಗಳಿಂದ ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾಗಿದೆ.
ನೆಲಮಂಗಲ: ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಆಕಸ್ಮಿಕ ಬೆಂಕಿ (Fire accident) ತಗುಲಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದಲ್ಲಿ ನಡೆದಿದೆ. ನೆಲಮಂಗಲದ ಪೇಟೆ ಬೀದಿಯ ಹಿಪ್ಪೇ ಆಂಜನೇಯ ಬಡಾವಣೆಯ ನಂದೀಶ್ ಅವರಿಗೆ ಸೇರಿದ ಮಹೀಂದ್ರ ಎಕ್ಸ್ ಯುವಿ 500 ಕಾರಿಗೆ ಬೆಂಕಿ ತಗುಲಿದೆ. ಸದ್ಯ ನೆಲಮಂಗಲ ಅಗ್ನಿಶಾಮಕ ಸಿಬ್ಬಂದಿಗಳಿಂದ ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾಗಿದೆ. ಯಾರೋ ಕಿಡಿಗೇಡಿಗಳೇ ಬೇಕಂತಲೇ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು, ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಕೋಲಾರ: ಚಾಕುವಿನಿಂದ ಸೊಸೆ ಮೇಲೆ ಅತ್ತೆ, ಮಾವನಿಂದ ಹಲ್ಲೆ ಸೋಸೆ ಮೇಲೆ ಅತ್ತೆ, ಮಾವ ಚಾಕಿವಿನಿಂದ ಹಲ್ಲೆ ಮಾಡಿದ ಘಟನೆ ಕೋಲಾರ ಜಿಲ್ಲೆಯ ರಾಜಾ ನಗರದಲ್ಲಿ ನಡೆದಿದೆ. ಅರಬಿಂದ್ ಸುಲ್ತಾನ್ ಚಾಕುವಿನಿಂದ ತೀವ್ರ ಗಾಯಗೊಂಡ ಮಹಿಳೆ. ಮಾವ ನವಾಜ್ ಬೇಗ್ ಮತ್ತು ಅತ್ತೆ ನಪ್ಸಿನ್ ತಾಜ್ ಸೇರಿ ಸಂಬಂಧಿಗಳು ಹಲ್ಲೆ ಮಾಡಿದ್ದಾರೆ ಎಂದು ಸೋಸೆ ಆರೋಪ ಮಾಡಿದ್ದಾರೆ. ಅರಬಿಂದ್ ಸುಲ್ತಾನ್ ಮತ್ತು ಮುಕ್ತಿಯಾರ್ ಬೇಗ್ ಅವರು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯನ್ನು ಸಹಿಸದೆ ಪ್ರತಿದಿನ ಅತ್ತೆ ಮಾವ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಡಿ.26 ರಂದು ಸೊಸೆಯ ಮೇಲೆ ಮಾವ ಮತ್ತು ಅತ್ತೆ ಕುಟುಂಬದಿಂದ ಹಲ್ಲೆ ನಡೆದಿದ್ದು, ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಅರಬಿಂದ್ ಸುಲ್ತಾನ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು: ಬೈಕ್ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್ ಜೆಜೆ ನಗರ ಪೊಲೀಸರು ನಗರದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಆರು ಜನರು ಸೇರಿ ಗುಂಪು ಕಟ್ಟಿಕೊಂಡು ಬೈಕ್ ಕಳ್ಳತನ ಮಾಡುತ್ತಿದ್ದರು. ಸದ್ಯ ಅರೋಪಿಗಳ ಬಳಿಯಿದ್ದ ಒಟ್ಟು ಹದಿನೆಂಟು ಬೈಕ್ ಹಾಗೂ ಹತ್ತು ಲಕ್ಷದ ಐವತ್ತು ಸಾವಿರ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾತ್ರಿ ಸಮಯದಲ್ಲಿ ಹಾಗೂ ಹಗಲು ಸಮಯದಲ್ಲಿ ಬೈಟ್ ಕಳ್ಳತನ ಮಾಡುತ್ತಿದ್ದ ಆರೋಪಿಗಳಾದ ಮಹಮದ್ ಅರ್ಬಾಜ್, ಸೈಯದ್ ಹಯಾತ್,ಮಹಮದ್ ಜೈನ್, ಮುಬಾರಕ್ ಪಾಷ, ವರೂಣ್ ಕುಮಾರ್, ಶಾಹಬಾಜ್ ಬಂಧಿಸಲಾಗಿದೆ.
ಇದನ್ನೂ ಓದಿ: ಐಷಾರಾಮಿ ಕಾರಿಗೆ ಬೆಂಕಿ ಹಚ್ಚಿರುವ ಕಿಡಿಗೇಡಿಗಳು; ಬೆಂಕಿ ಇಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
ದಾವಣಗೆರೆಯಲ್ಲಿ ಮೊಬೈಲ್ ಟವರ್ ಜನರೇಟರ್ಗೆ ಆಕಸ್ಮಿಕ ಬೆಂಕಿ! ಭಾರಿ ಪ್ರಮಾಣದಲ್ಲಿ ಆವರಿಸಿದ ಹೊಗೆ
Published On - 2:40 pm, Tue, 30 November 21