ನೆಲಮಂಗಲ: ಡಿವೈಡರ್‌ಗೆ ಗುದ್ದಿದ ಕಾರು; 5ಜನ ಇಂಜಿನಿಯರ್​ಗಳ ಪೈಕಿ ಮೂವರು ಸ್ಥಳದಲ್ಲೇ ಸಾವು

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 19, 2023 | 5:41 PM

ಅವರೆಲ್ಲ ಸಾಫ್ಟ್‌ವೇರ್ ಕಂಪನಿಗಳಲ್ಲಿ ಐಟಿ ಉದ್ಯಮಿಗಳಾಗಿದ್ದವರು, ಕೈತುಂಬಾ ಸಂಬಳ ಪಡೆಯುತ್ತಿದ್ದರು. ಕುಟುಂಬ ನಿರ್ವಹಣೆಯ ಜವಾಬ್ದಾರಿ ಸಹ ಇವರದ್ದೆ ಆಗಿತ್ತು, ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದ್ದಾಗ ವ್ಹೀಕೆಂಡ್ ಫೀಕ್‌ನೀಕ್ ಮೂರು ಕುಟುಂಬಗಳ ಆಧಾರ ಸ್ಥಂಭಗಳನ್ನ ಕಿತ್ತುಕೊಂಡಿದೆ.

ನೆಲಮಂಗಲ: ಡಿವೈಡರ್‌ಗೆ ಗುದ್ದಿದ ಕಾರು; 5ಜನ ಇಂಜಿನಿಯರ್​ಗಳ ಪೈಕಿ ಮೂವರು ಸ್ಥಳದಲ್ಲೇ ಸಾವು
ಕಾರು ಅಪಘಾತ
Follow us on

ಬೆಂಗಳೂರು ಗ್ರಾಮಾಂತರ, ಸೆ.19: ಡಿವೈಡರ್‌ಗೆ ಗುದ್ದಿ ನುಜ್ಜು ಗುಜ್ಜಾಗಿರುವ ಕಾರು, ಕಾರಿನೊಳಗೆ ಸಿಲುಕಿರುವ ಮೃತದೇಹಗಳು, ಮೃತ ದೇಹ ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿಗಳ ಹರಸಾಹಸ, ಸ್ಥಳದಲ್ಲಿ ಕಿಕ್ಕಿರಿದಿರುವ ಜನ. ಈ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಉತ್ತರ (Bengaluru North) ತಾಲೂಕು ಅಂಚೆಪಾಳ್ಯದಲ್ಲಿ. ಹೌದು, ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 5ಜನ ಇಂಜಿನಿಯರ್ ಪೈಕಿ ಮೂರು ಜನ ಇಂಜಿನಿಯರ್​ಗಳು ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಇನ್ನುಳಿದ ಇಬ್ಬರು ಇಂಜಿನಿಯರ್​ಗಳು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಆಗಸ್ಟಿನ್ ನಿರೋಷ್, ದಾ ರೆಡ್ಡಿ, ವಿಘ್ನೇಶ್ ಸ್ಥಳದಲ್ಲೆ ಸಾವನ್ನಪ್ಪಿದ್ರೆ, ಮಿಥುನ್ ಯಾದವ್ ಹಾಗೂ ಶತೃಘ್ನ ಇಬ್ಬರು ಕೋಮಾಗೆ ಹೋಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಹೌದು ಮೃತರೆಲ್ಲರು ಬೆಂಗಳೂರಿನ ಖಾಸಗಿ ಐಟಿ ಕಂಪನಿಯೊಂದರಲ್ಲಿ ಟೆಕ್ಕಿಗಳಾಗಿದ್ದರು. ನಿನ್ನೆ(17) ಭಾನುವಾರ ರಜೆ ಇದ್ದಿದ್ದರಿಂದ ಒಂದು ದಿನದ ಪಿಕ್‌ನಿಕ್ ಹೋಗಿ ಬರೋಣ ಎಂದು ಮೈಸೂರು ಟ್ರಿಪ್ ಹೋಗಿದ್ದರು. ಮೈಸೂರಿಗೆ ತೆರಳಿ ವಾಪಸ್ ಬರುತ್ತಿದ ಇವರು ಇನ್ನೇನು ಕೆಲವೇ ನಿಮಿಷಗಳಲ್ಲಿ ತಮ್ಮ ತಮ್ಮ ಮನೆಗಳನ್ನ ತಲುಪುತಿದ್ದರು. ಆದ್ರೆ, ವಿಧಿ ಈ ಐದು ಜನರ ಬದುಕಲ್ಲಿ ಆಟ ಆಡಿದೆ.

ಇದನ್ನೂ ಓದಿ:ದಕ್ಷಿಣ ಕನ್ನಡ: ಕಾರು, ಬೈಕ್​ ನಡುವೆ ಡಿಕ್ಕಿ; ಓರ್ವ ಯುವತಿ ಸಾವು; ಅಪಘಾತ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆ

ಕಾರು ಚಾಲಕ ಆಗಸ್ಟೀನ್ ಮುಂಜಾನೆಯ ನಿದ್ದೆ ಮಂಪರಿನಲ್ಲಿ ಮನೆಗೆ ತೆರಳುವ ಆತುರದಲ್ಲಿ ವೇಗವಾಗಿ ಬಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂರು ಜನ ಇಂಜಿನಿಯರ್​ಗಳು ಚಾಲಕ ಅಗಸ್ಟಿನ್ ನಿರೋಷ್ ಸೇರಿದಂತೆ ಮೂರು ಜನ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.‌ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಅದೇನೆ ಇರಲಿ ಗೌರಿ-ಗಣೇಶ ಹಬ್ಬದ ಆಚರಣೆಯಲ್ಲಿ ಇರಬೇಕಾದ ಕುಟುಂಬಗಳು, ಶೋಕ ಸಾಗರದಲ್ಲಿ ಮುಳುಗಿರೋದು ನೋವಿನ ಸಂಗತಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ