ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಚೈತ್ರಾಗೆ ವಾಚ್ ಉಡುಗೊರೆ ನೀಡಿದ ಬೆಂಗಳೂರು ಗ್ರಾಮಾಂತರ ಎಸ್ಪಿ
600 ಅಂಕಗಳನ್ನು ಪಡೆದು ಸಾಧನೆ ಮಾಡಿರುವ ಚೈತ್ರಾ ಎಸ್ ನೆಲಮಂಗಲ ವೃತ್ತ ತನಿಖಾಧಿಕಾರಿ ಅಧೀನದಲ್ಲಿ ಕರ್ತವ್ಯ ನಿರ್ವಹಣೆ ಮಾಡುವ ಹೆಡ್ ಕಾನ್ಸ್ಟೇಬಲ್ ಶಿವಕುಮಾರ್ ಪುತ್ರಿ.
ನೆಲಮಂಗಲ: 2021-22ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ (SSLC Result) ಮೇ 19ರಂದು ಪ್ರಕಟವಾಗಿದೆ. ಈ ಬಾರಿ ರಾಜ್ಯದಲ್ಲಿ ಸುಮಾರು 125 ವಿದ್ಯಾರ್ಥಿಗಳು 625 ಅಂಕಕ್ಕೆ 625 ಅಂಕ ಪಡೆದು ದಾಖಲೆಯ ಸಾಧನೆ ಮಾಡಿದ್ದಾರೆ. ಇನ್ನು ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಪೊಲೀಸರ ಮಕ್ಕಳಲ್ಲಿ ಅತಿ ಹೆಚ್ಚು ಅಂದರೆ 625ಕ್ಕೆ 600 ಅಂಕ ಪಡೆಯುವ ಮೂಲಕ ಹೆಡ್ ಕಾನ್ಸ್ಟೇಬಲ್ ಪುತ್ರಿ ಚೈತ್ರಾ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹೆಚ್ಚು ಅಂಕ ಗಳಿಸಿರುವ ಚೈತ್ರಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ಆಗಿರುವ ವಂಶಿ ಕೃಷ್ಣಾ ಅವರು ಸನ್ಮಾನ ಮಾಡಿ ವಾಚ್ ಉಡುಗೊರೆ ನೀಡಿದ್ದಾರೆ.
600 ಅಂಕಗಳನ್ನು ಪಡೆದು ಸಾಧನೆ ಮಾಡಿರುವ ಚೈತ್ರಾ ಎಸ್ ನೆಲಮಂಗಲ ವೃತ್ತ ತನಿಖಾಧಿಕಾರಿ ಅಧೀನದಲ್ಲಿ ಕರ್ತವ್ಯ ನಿರ್ವಹಣೆ ಮಾಡುವ ಹೆಡ್ ಕಾನ್ಸ್ಟೇಬಲ್ ಶಿವಕುಮಾರ್ ಪುತ್ರಿ. ಯಾವ ವರ್ಷವೂ ಈ ರೀತಿ ಅಂಕಗಳಿಸಿದ ಪೊಲೀಸ್ ಮಕ್ಕಳಿಗೆ ಸನ್ಮಾನ ನಡೆದಿರಲಿಲ್ಲ. ನಾನು ಹಾಗೂ ನಮ್ಮ ಕುಟುಂಬ ಎಸ್ಪಿಗೆ ಧನ್ಯವಾದಗಳನ್ನ ತಿಳಿಸಿದ್ದೇನೆ ಎಂದು ಹೆಡ್ ಕಾನ್ಸ್ಟೇಬಲ್ ಶಿವಕುಮಾರ್ ಹೇಳಿದರು.
Out of Out ಅಂಕ ಪಡೆದ ವಿದ್ಯಾರ್ಥಿಗಳು: * ಪ್ರಥಮ ಭಾಷೆ ಕನ್ನಡ- 125ಕ್ಕೆ 125 ಅಂಕ ಪಡೆದಿದ್ದ ವಿದ್ಯಾರ್ಥಿಗಳು 19,125 * ದ್ವಿತೀಯ ಭಾಷೆ 100ಕ್ಕೆ 100 ಮಾರ್ಕ್ಸ್ ಅನ್ನು- 13,425 ವಿದ್ಯಾರ್ಥಿಗಳು ಪಡೆದುಕೊಂಡಿದ್ದರು. * ತೃತೀಯ ಭಾಷೆ100ಕ್ಕೆ 100 ಅಂಕ ಪಡೆದಿದ್ದವರು 43,126 ವಿದ್ಯಾರ್ಥಿಗಳು * ಗಣಿತದಲ್ಲಿ 100ಕ್ಕೆ ನೂರು ಅಂಕವನ್ನು 13,683 ವಿದ್ಯಾರ್ಥಿಗಳು ಪಡೆದಿದ್ದರು * ವಿಜ್ಞಾನ- 100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ 6,592 * ಸಮಾಜ ವಿಜ್ಞಾನ100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ 50,782.
ಇದನ್ನೂ ಓದಿ: Rishabh Pant: ಡಿಆರ್ಎಸ್ ಏಕೆ ತೆಗೆದುಕೊಳ್ಳಲಿಲ್ಲ ಪ್ರಶ್ನೆಗೆ ರಿಷಭ್ ಪಂತ್ ನೀಡಿದ ಉತ್ತರವೇನು ನೋಡಿ
ವಿದ್ಯಾರ್ಥಿನಿಯರೇ ಮೇಲುಗೈ: ಶೇ. 81.03 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ ಶೇ.90.29 ವಿದ್ಯಾರ್ಥಿನಿಯರು ಪಾಸ್ ಆಗಿದ್ದಾರೆ. 145 ವಿದ್ಯಾರ್ಥಿಗಳು 625 ಅಂಕ ಪಡೆದಿರುವುದು ವಿಶೇಷ.625ಕ್ಕೆ 625 ಅಂಕಗಳನ್ನು 125 ಮಕ್ಕಳು ಗಳಿಸಿದ್ದಾರೆ. ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚು ಫಲಿತಾಂಶ ವಿದ್ಯಾರ್ಥಿಗಳಿಗೆ ಸಿಕ್ಕಿದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:03 am, Sun, 22 May 22