ಎಸ್ಎಸ್ಎಲ್​ಸಿ ಉತ್ತರ ಪತ್ರಿಕೆ ನೋಡಿ ಶಾಕ್ ಆದ ಮೌಲ್ಯಮಾಪಕ; ಪಾಸ್ ಮಾಡುವಂತೆ ಈ ಪರೀಕ್ಷಾರ್ಥಿ ಹೇಗೆಲ್ಲಾ ಮೊರೆಯಿಟ್ಟಿದ್ದಾನೆ ಗೊತ್ತಾ?

ಎಸ್ಎಸ್ಎಲ್​ಸಿ ಉತ್ತರ ಪತ್ರಿಕೆ ನೋಡಿ ಶಾಕ್ ಆದ ಮೌಲ್ಯಮಾಪಕ; ಪಾಸ್ ಮಾಡುವಂತೆ ಈ ಪರೀಕ್ಷಾರ್ಥಿ ಹೇಗೆಲ್ಲಾ ಮೊರೆಯಿಟ್ಟಿದ್ದಾನೆ ಗೊತ್ತಾ?
ಎಸ್ಎಸ್ಎಲ್ಸಿ ಉತ್ತರ ಪತ್ರಿಕೆ ನೋಡಿ ಶಾಕ್ ಆದ ಮೌಲ್ಯಮಾಪಕ; ಪಾಸ್ ಮಾಡುವಂತೆ ಈ ಪರೀಕ್ಷಾರ್ಥಿ ಹೇಗೆಲ್ಲಾ ಮೊರೆಯಿಟ್ಟಿದ್ದಾನೆ ಗೊತ್ತಾ?

ವಿಜಯಪುರ ನಗರದ ಸ್ನೇಹ ಸಂಗಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಮೌಲ್ಯಮಾಪನ ನಡೆಯುತ್ತಿದೆ. ಮೌಲ್ಯಮಾಪನ ಮಾಡುತ್ತಿದ್ದ ವೇಳೆ ಪರೀಕ್ಷಾರ್ಥಿ ಉತ್ತರ ಪತ್ರಿಕೆ ನೋಡಿ ಮೌಲ್ಯಮಾಪಕರಿಗೆ ಅಚ್ಚರಿ ಮೂಡಿದೆ.

TV9kannada Web Team

| Edited By: Ayesha Banu

Apr 29, 2022 | 2:13 PM

ವಿಜಯಪುರ: ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪರೀಕ್ಷಾರ್ಥಿಗಳು ದೇವರಿಗೆ ಮೊರೆ ಹೋಗೋದು, ಪರೀಕ್ಷೆಯಲ್ಲಿ ನಕಲು ಮಾಡೋದು ನೋಡಿದ್ದೇವೆ. ಆದರೆ ವಿಜಯಪುರದಲ್ಲೊಬ್ಬ ಎಸ್ಎಸ್ಎಲ್ಸಿ ಪರೀಕ್ಷಾರ್ಥಿ ಪಾಸ್ ಮಾಡುವಂತೆ ಉತ್ತರ ಪತ್ರಿಕೆಯಲ್ಲಿ ಮೌಲ್ಯಮಾಪಕರಿಗೆ ಸಾಷ್ಟಾಂಗ ನಮಸ್ಕಾರ ಹಾಕಿರುವುದು ಬಯಲಾಗಿದೆ.

ವಿಜಯಪುರ ನಗರದ ಸ್ನೇಹ ಸಂಗಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಮೌಲ್ಯಮಾಪನ ನಡೆಯುತ್ತಿದೆ. ಮೌಲ್ಯಮಾಪನ ಮಾಡುತ್ತಿದ್ದ ವೇಳೆ ಪರೀಕ್ಷಾರ್ಥಿ ಉತ್ತರ ಪತ್ರಿಕೆ ನೋಡಿ ಮೌಲ್ಯಮಾಪಕರಿಗೆ ಅಚ್ಚರಿ ಮೂಡಿದೆ. ಗ್ರಾಮ ಪಂಚಾಯಿತಿಯೊಂದರಲ್ಲಿ ವಾಟರ್ ಮ್ಯಾನ್ ಆಗಿರುವವ ಬಾಹ್ಯ ಪರೀಕ್ಷಾರ್ಥಿಯಾಗಿ SSLC ಪರೀಕ್ಷೆ ಬರೆದಿದ್ದಾನೆ. ಉತ್ತರ ಪತ್ರಿಕೆ ಮೌಲ್ಯಮಾಪನವನ್ನು ಸಿದ್ದರಾಮೇಶ್ವರ ಪ್ರೌಢ ಶಾಲೆಯ ಶಿಕ್ಷಕ ಸಿದ್ದಪ್ಪ ಅಂಬಳನೂರು ಮಾಡುತ್ತಿದ್ದಾಗ, ಉಪಾಧ್ಯಾಯರಿಗೆ ಸಾಷ್ಟಾಂಗ ನಮಸ್ಕಾರ ಪಾಸ್ ಮಾಡಿ ನಾನು ಬಿಲ್ ಕಲೆಕ್ಟರ್ ಆಗಬೇಕಿದೆ. ನನ್ನ ಪಾಸ್ ಮಾಡಿದರೆ ನಿಮಗೆ ದೇವರು ಒಳ್ಳೆಯದು ಮಾಡುತ್ತಾನೆ. ಒಳ್ಳೆಯ ಮನಸ್ಸಿನಿಂದ ನನ್ನ ಪಾಸ್ ಮಾಡಿಕೊಡಿ. ಪರೀಕ್ಷೆಯ ಮಾರ್ಕ್ಸ್ ಮೇಲೆ ಎಲ್ಲವೂ ನಿಂತಿದೆ. ನನ್ನನ್ನ ದಯವಿಟ್ಟು ಪಾಸ್ ಮಾಡಿ ಎಂದು ಗೋಗರೆದಿರುವುದು ನೋಡಿ ಅಚ್ಚರಿಗೊಂಡಿದ್ದಾರೆ. ಬಳಿಕ ಆ ಉತ್ತರ ಪತ್ರಿಕೆ ಫೋಟೋ ತೆಗೆದುಕೊಂಡು ಶಿಕ್ಷಕ ಸಿದ್ದಪ್ಪ ಅವರು ತಮ್ಮ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದಾರೆ. ಇದೀಗ ಅದು ಎಲ್ಲೆಡೆ ವೈರಲ್ ಆಗುತ್ತಿದೆ. ಮೌಲ್ಯಮಾಪಕರು ಉತ್ತರ ಪತ್ರಿಕೆಯೊಂದನ್ನು ಹೀಗೆ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿರೋದು ಪರೀಕ್ಷಾ ಪ್ರಮಾದವಾಗುವುದಿಲ್ಲವೇ ಎಂಬುದೂ ಸಹ ಚರ್ಚೆಗೆ ಗ್ರಾಸವಾಗಿದೆ.

ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ

SSLC Exam

ಉತ್ತರ ಪತ್ರಿಕೆ

ಇದನ್ನೂ ಓದಿ: ವಿದ್ಯುತ್ ಸ್ಥಾವರದಲ್ಲಿ ಕಲ್ಲಿದ್ದಲು ದಾಸ್ತಾನು ಇಲ್ಲ ಎಂದ ದೆಹಲಿ ಸರ್ಕಾರ; ಎನ್​ಟಿಪಿಸಿ ಹೇಳಿದ್ದೇ ಬೇರೆ!

ವರ್ಕ್ ಆರ್ಡರ್ ಇಲ್ಲದೆ ಕೆಲಸ ನಡೆದ ಅಧಿಕಾರಿಗಳೇ ಜವಾಬ್ದಾರಿ: ಸಚಿವ ಗೋವಿಂದ ಕಾರಜೋಳ

Follow us on

Related Stories

Most Read Stories

Click on your DTH Provider to Add TV9 Kannada