ಕ್ರಿಸ್ಮಸ್, ಹೊಸವರ್ಷಕ್ಕೆ ಅಂತಾರಾಜ್ಯ, ವಿದೇಶ ಪ್ರವಾಸ ಕೈಗೊಳ್ಳುತ್ತಿರುವ ಜನರು
ರಾಜ್ಯದಲ್ಲಿ ಕ್ರಿಸ್ಮಸ್ ಹಬ್ಬ ಹಾಗೂ ಹೊಸ ವರ್ಷಾಚರಣೆಯ ಸಂಭ್ರಮ ಮನೆ ಮಾಡುತ್ತಿದೆ. ವರ್ಷಾಂತ್ಯದಲ್ಲಿ ಸಾಲು ಸಾಲು ರಜೆಗಳಿರುವ ಹಿನ್ನಲೆ ಕೋವಿಡ್ ಭೀತಿಯ ನಡುವೆಯೂ ಜನರು ದೂರದ ಊರುಗಳಿಗೆ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ದೇವನಹಳ್ಳಿ: ರಾಜ್ಯದಲ್ಲಿ ಕ್ರಿಸ್ಮಸ್ ಹಬ್ಬ (Christmas festival) ಹಾಗೂ ಹೊಸ ವರ್ಷಾಚರಣೆಯ (New Year Celebrations) ಸಂಭ್ರಮ ಮನೆ ಮಾಡುತ್ತಿದೆ. ವರ್ಷಾಂತ್ಯದಲ್ಲಿ ಸಾಲು ಸಾಲು ರಜೆಗಳಿರುವ (Holidays) ಹಿನ್ನಲೆ ಕೋವಿಡ್ ಭೀತಿ (Covid Scare)ಯ ನಡುವೆಯೂ ಜನರು ದೂರದ ಊರುಗಳಿಗೆ ಪ್ರವಾಸ (International And Inter-state Trip) ಕೈಗೊಳ್ಳುತ್ತಿದ್ದಾರೆ. ಇಂದು 86 ಸಾವಿರಕ್ಕೂ ಹೆಚ್ಚು ಜನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Kempe Gowda International Airport Bengaluru) ದಿಂದ 86 ಸಾವಿರಕ್ಕೂ ಹೆಚ್ಚು ಜನ ಪ್ರಯಾಣ ಕೈಗೊಳ್ಳುತ್ತಿದ್ದಾರೆ.
ಬೆಂಗಳೂರಿಂದ ಹೊರ ರಾಜ್ಯಕ್ಕೆ ಹೋಗಲು 44,978 ಜನರು ವಿಮಾನ ಟಿಕೆಟ್ ಬುಕ್ ಮಾಡಿದ್ದು, ಹೊರ ರಾಜ್ಯಗಳಿಂದ ಬೆಂಗಳೂರಿಗೆ 40,585 ಜನರು ಆಗಮಿಸುತ್ತಿದ್ದಾರೆ. ಆಗಮನ ನಿರ್ಗಮನ ಸೇರಿ 44 ಸಾವಿರಕ್ಕೂ ಅಧಿಕ ಜನರ ಪ್ರಯಾಣ ಕೈಗೊಳ್ಳುತ್ತಿದ್ದಾರೆ. ಇಂದು ಕೆಐಎಬಿಯಿಂದ 560ಕ್ಕೂ ಅಧಿಕ ವಿಮಾನಗಳು ಸಂಚಾರ ಮಾಡಲಿದೆ.
ಇದನ್ನೂ ಓದಿ: Bengaluru: ಹೊಸ ವರ್ಷಕ್ಕೆ ಬೆಂಗಳೂರಿನ ಹೋಟೆಲ್ ರೂಮ್ಗಳಿಗೆ ಭಾರೀ ಬೇಡಿಕೆ; ಮಾಲೀಕರಿಗೆ ಕೊರೋನಾಘಾತ
ಮಹಾಮಾರಿ ಕೊರೋನಾ ಸೋಂಕು ಹೆಚ್ಚಳದ ಭೀತಿ ಹಿನ್ನಲೆ ಜನರು ಮಾಸ್ಕ್ಗಳನ್ನು ಧರಿಸಲು ಆರಂಭಿಸಿದ್ದಾರೆ. ಅಲ್ಲದೆ ವಿಮಾನ ನಿಲ್ದಾಣಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೂಡ ಕೈಗೊಳ್ಳಲಾಗುತ್ತಿದೆ. ವಿಮಾನ ಒಳಗಡೆ ಮಾಸ್ಕ್ ಕಡ್ಡಾಯಗೊಳಿಸಲಾಗಿದ್ದು, ವಿಮಾನ ಹತ್ತುವ ಮುನ್ನ ಸಿಬ್ಬಂದಿ ಮಾಸ್ಕ್ ವಿತರಣೆ ಮಾಡಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ