ಅಗ್ನಿ ಅವಘಡ: ದಾಬಸ್​ಪೇಟೆ ಬಳಿ ಬೆಂಕಿಗೆ ಆಹುತಿಯಾದ ಬಟ್ಟೆ ಅಂಗಡಿ

ಅಂಗಡಿಯಲ್ಲಿದ್ದ ಬಟ್ಟೆ, ಹೊಲಿಗೆ ಯಂತ್ರ ಸೇರಿದಂತೆ ಇತರೆ ಉಪಕರಣಗಳು ಬೆಂಕಿಗೆ ಆಹುತಿಯಾಗಿದ್ದು, ಘಟನೆಯಿಂದಾಗಿ ಸುಮಾರು ₹12-₹15ಲಕ್ಷ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಅಗ್ನಿ ಅವಘಡ: ದಾಬಸ್​ಪೇಟೆ ಬಳಿ ಬೆಂಕಿಗೆ ಆಹುತಿಯಾದ ಬಟ್ಟೆ ಅಂಗಡಿ
ಅಗ್ನಿಗೆ ಆಹುತಿಯಾದ ಬಟ್ಟೆ ಅಂಗಡಿ
Follow us
Skanda
|

Updated on:Jan 30, 2021 | 5:29 PM

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆ, ನೆಲಮಂಗಲ ತಾಲ್ಲೂಕಿನ ದಾಬಸ್​ಪೇಟೆ ಬಳಿ ಬಟ್ಟೆ ಅಂಗಡಿಯೊಂದು ಅಗ್ನಿಗೆ ಆಹುತಿಯಾಗಿದೆ. ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಶಿವಕುಮಾರ್​ ಎಂಬುವವರಿಗೆ ಸೇರಿದ ವೈಟ್​ ಬರ್ಡ್​ ಬಟ್ಟೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆಕಸ್ಮಿಕವಾಗಿ ಹೊತ್ತಿ ಉರಿದ ಬೆಂಕಿ ಇಡೀ ಅಂಗಡಿಗೆ ವ್ಯಾಪಿಸಿದ ಪರಿಣಾಮ ಸಂಪೂರ್ಣ ಮಳಿಗೆ ಸುಟ್ಟು ಕರಕಲಾಗಿದೆ.

ಅಂಗಡಿಯಲ್ಲಿದ್ದ ಬಟ್ಟೆ, ಹೊಲಿಗೆ ಯಂತ್ರ ಸೇರಿದಂತೆ ಇತರೆ ಉಪಕರಣಗಳು ಬೆಂಕಿಗೆ ಆಹುತಿಯಾಗಿದ್ದು, ಘಟನೆಯಿಂದಾಗಿ ಸುಮಾರು ₹12-₹15ಲಕ್ಷ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಬೆಳಗ್ಗೆ ಬಾಗಿಲು ತೆಗೆದು ಸ್ವಲ್ಪ ಹೊತ್ತಿನಲ್ಲೇ ಅವಘಡ ಉಂಟಾಗಿದ್ದು, ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಲಾಗಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಅವಘಡ.. ಹೊತ್ತಿ ಉರಿದ ಮೋಕ್ಷ ಅಗರಬತ್ತಿ ಕಾರ್ಖಾನೆ

Published On - 12:18 pm, Sat, 30 January 21