AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀಟಿ ಅವ್ಯವಹಾರದಲ್ಲಿ ಭಾಗಿಯಾಗಿದ್ದ ದಂಪತಿಯಿಂದ ಮನೆ ಖರೀದಿ; ಸೈನಿಕನ ವಿರುದ್ಧ ದೂರು ದಾಖಲು

ಮನೆ ವ್ಯಾಪಾರ ಮಾಡಿ ಕಣ್ಮರೆಯಾದ ಆರೋಪ ಹೊತ್ತಿರುವ ದಂಪತಿಗಳ ವಿರುದ್ಧ ಚೀಟಿ ಹಣ ಸಿಗದೆ ವಂಚನೆಗೊಳಗಾದವರು ಕೇಸ್ ದಾಖಲಿಸಿದ್ದಾರೆ. ಅಲ್ಲದೇ ಮನೆ ಖರೀದಿಸಿದ ಸೈನಿಕನ ವಿರುದ್ಧವೂ ಬಾಗಲಗುಂಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಚೀಟಿ ಅವ್ಯವಹಾರದಲ್ಲಿ ಭಾಗಿಯಾಗಿದ್ದ ದಂಪತಿಯಿಂದ ಮನೆ ಖರೀದಿ; ಸೈನಿಕನ ವಿರುದ್ಧ ದೂರು ದಾಖಲು
ಬಾಗಲಕುಂಟೆ ಪೊಲೀಸ್​ ಠಾಣೆ
TV9 Web
| Edited By: |

Updated on:Sep 24, 2021 | 9:33 PM

Share

ಬೆಂಗಳೂರು: ಚೀಟಿ ಅವ್ಯವಹಾರದಲ್ಲಿ ಭಾಗಿಯಾಗಿದ್ದ ದಂಪತಿ, ಸೈನಿಕನಿಗೆ ಮನೆ ಮಾರಾಟ ಮಾಡಿ ಪರಾರಿಯಾದ ಘಟನೆ ಬೆಂಗಳೂರಿನ ಮಲ್ಲಸಂದ್ರದಲ್ಲಿ ನಡೆದಿದೆ. ಪದ್ಮ ಹಾಗೂ ತಿಮ್ಮರಾಯಸ್ವಾಮಿ ದಂಪತಿಗಳಿಂದ ಚೀಟಿ ಹಾಕಿದ್ದವರಿಗೆ ವಂಚನೆಯಾಗಿದೆ. ಹೀಗಾಗಿ ಮನೆ ಖರೀದಿಸಬೇಡಿ ಎಂದು ಸ್ಥಳೀಯರು ಮನವಿ ಮಾಡಿಕೊಂಡರು. ಆದರೂ ಸೈನಿಕ ಪುಟ್ಟರಾಜು ಮನೆ ಖರೀದಿಸಿದ್ದಾರೆ.

ಮನೆ ವ್ಯಾಪಾರ ಮಾಡಿ ಕಣ್ಮರೆಯಾದ ಆರೋಪ ಹೊತ್ತಿರುವ ದಂಪತಿಗಳ ವಿರುದ್ಧ ಚೀಟಿ ಹಣ ಸಿಗದೆ ವಂಚನೆಗೊಳಗಾದವರು ಕೇಸ್ ದಾಖಲಿಸಿದ್ದಾರೆ. ಅಲ್ಲದೇ ಮನೆ ಖರೀದಿಸಿದ ಸೈನಿಕನ ವಿರುದ್ಧವೂ ಬಾಗಲಗುಂಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಾಜಿ ಸೈನಿಕರ ಸಂಘದಿಂದ ಆಕ್ರೋಶ ಸ್ಥಳೀಯರ ದೂರನ್ನು ಪರಿಗಣಿಸಿದ ಬಾಗಲಗುಂಟೆ ಠಾಣೆ ಪೊಲೀಸರು, ಸೈನಿಕ ಪುಟ್ಟರಾಜರನ್ನು ನಿಯಮ ಮೀರಿ ಠಾಣೆಗೆ ಕರೆತಂದಿದ್ದಕ್ಕೆ ಮಾಜಿ ಸೈನಿಕರ ಸಂಘದಿಂದ ಅಕ್ರೋಶ ವ್ಯಕ್ತವಾಗಿದೆ. ಸೈನಿಕರು ಅತ್ಯಾಚಾರ, ಕೊಲೆ, ದರೋಡೆಯಲ್ಲಿ ಭಾಗಿಯಾಗಿದ್ದರೆ, ಐಪಿಎಸ್ ಹಂತದ ಅಧೀಕಾರಿಗಳು ಠಾಣೆಗೆ ಕರೆತರಬೇಕು. ಆದರೆ ಇಲ್ಲಿ ಸೈನಿಕರ ನಿಯಮವಾಳಿ ನಿರ್ಲಕ್ಷ್ಯ ಮಾಡಿ ಠಾಣೆಗೆ ಕರತಂದು ಕಿರಿಕಿರಿ ಮಾಡಿದ್ದಾರೆ. ಅಲ್ಲದೆ ಮೈಮೇಲೆ ಹಾಕಿದ್ದ ಕೋಟ್ ತೆಗೆಸಿ ಬೂಟ್ ಬಿಚ್ಚಿಸಿದ್ದಾರೆ ಎಂದು ಸೈನಿಕರ ಸಂಘದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಗಲಗುಂಟೆ ಪೊಲೀಸರ ವಿರುದ್ಧ ಕಿಡಿ ಠಾಣೆ ಮುಂದೆ ರಾತ್ರಿ ಅಖಿಲ ಕರ್ನಾಟಕ ಮಾಜಿ ಸೈನಿಕರು ಜಮಾವಣೆ ನಡೆಸಿದ್ದು, ನಾಲ್ಕು ಘಂಟೆ ಸೈನಿಕನನ್ನು ಠಾಣೆಯಲ್ಲಿ ಅಕ್ರಮವಾಗಿ ಇರಿಸಿಕೊಂಡಿದ್ದಕ್ಕೆ ಮಾಜಿ ಸೈನಿಕರು ಬಾಗಲಗುಂಟೆ ಪೊಲೀಸರ ವಿರುದ್ಧ ಕಿಡಿ ಕಾರಿದ್ದಾರೆ. ಅಲ್ಲದೆ ತಡರಾತ್ರಿ 12:30ಕ್ಕೆ ವಿಚಾರಣೆಗೆ ಬರುವಂತೆ ನೋಟಿಸ್ ಕೊಟ್ಟು ಹೊರ ಕಳಿಸಿದ ಬಾಗಲಗುಂಟೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೆಲಮಂಗಲ:  ಟಿವಿ9 ಫಲಶೃತಿಯಿಂದ 2 ವರ್ಷದಿಂದ ಪಿಂಚಣಿ ಸಿಗದ ವೃದ್ಧೆಗೆ ದೊರೆಯಿತು ಪಿಂಚಣಿ 2 ವರ್ಷದಿಂದ ಪಿಂಚಣಿ ಸಿಗದೆ 85 ವರ್ಷದ ವೃದ್ಧೆ ಪರದಾಟ ನಡೆಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಜಕ್ಕಸಂದ್ರ ಗ್ರಾಮದ ವೃದ್ದೆ ನಿಂಗಮ್ಮ ಆದೇಶ ಪ್ರತಿ ಕಳೆದುಕೊಂಡಿದ್ದು, ಪಿಂಚಣಿ ಹಣದಿಂದ ವಂಚಿತರಾಗಿದ್ದಾರೆ. ಪ್ರತಿನಿತ್ಯ ತಾಲೂಕು ಕಚೇರಿಗೆ ಅಲೆದಾಡುವ ಪರಿಸ್ಥಿತಿ ಸದ್ಯ ನಿರ್ಮಾಣವಾಗಿದ್ದು, ವೃದ್ಧೆಗೆ ಸಹಾಯ ಮಾಡುವುದಕ್ಕೆ ಅಧಿಕಾರಿಗಳು ಮುಂದಾಗದೆ, ನಿರ್ಲಕ್ಷ್ಯ ತೋರಿದ್ದರು. ಈಕುರಿತು ಟಿವಿ9 ಕನ್ನಡ ಡಿಜಿಟಲ್ ಸುದ್ದಿ ಪ್ರಕಟಿಸಿತ್ತು.

ಅಜ್ಜಿ ನಿಂಗಮ್ಮ ಅವರ ಮನೆಗೆ ತೆರಳಿ ಪಿಂಚಣಿ ಅದೇಶ ಪ್ರತಿ ನೀಡಲಾಗಿದೆ. ಸುದ್ದಿ ಪ್ರಕಟವಾದ ಕೆಲವೇ ಗಂಟೆಯಲ್ಲಿ ವೃದ್ದೆಯ ಮನೆ ಬಾಗಿಲಿಗೆ ತಹಶಿಲ್ದಾರ್ ಕೆ.ಮಂಜುನಾಥ್ ಪಿಂಚಣಿ ಆದೇಶ ಪತ್ರ ತಲುಪಿಸಿದ್ದಾರೆ.

Nelamangala Tv9 Impact

ತಹಶೀಲ್ದಾರ್ ಕೆ ಮಂಜುನಾಥ್ ವೃದ್ಧೆಗೆ ಪಿಂಚಣಿ ವ್ಯವಸ್ಥೆ ಮಾಡಿದರು

ಆದೇಶ ಪ್ರತಿ ಜೊತೆ ಅಧಾರ್ ಕಾರ್ಡ್ ತರುವಂತೆ ತಾಲೂಕು ಕಚೇರಿ ಸಿಬ್ಬಂದಿ ಸಬೂಬು ಹೇಳುತ್ತಿದ್ದು, ನನಗೆ ಯಾರು ಸಹಾಯ ಮಾಡುತ್ತಿಲ್ಲವೆಂದು ವೃದ್ಧೆ ನಿಂಗಮ್ಮ ಅಳಲು ತೋಡಿಕೊಂಡಿದ್ದರು. ಆದರೆ ಇದೀಗ ಸುದ್ದಿ ಪ್ರಕಟವಾಗುತ್ತಿದ್ದಂತೆ ವೃದ್ಧೆಗೆ ಪಿಂಚಣಿ ಆದೇಶ ತಲುಪಿಸಲಾಗಿದೆ.

ಇದನ್ನೂ ಓದಿ:Indian Bank: ಇಂಡಿಯನ್​ ಬ್ಯಾಂಕ್​ನಲ್ಲಿ ರೂ. 300 ಕೋಟಿಗೂ ಅಧಿಕ ಮೌಲ್ಯದ ಎರಡು ಎನ್​ಪಿಎ ವಂಚನೆ ಘೋಷಣೆ

ನಂಜನಗೂಡು ಯುವತಿಗೆ ಪ್ರೀತಿ ಹೆಸರಲ್ಲಿ ವಂಚನೆ; ಮಂಗಳೂರು ನಿವಾಸಿ ಮೊಹಮ್ಮದ್ ಅಜ್ವಾನ್ ಬಂಧನ

Published On - 11:15 am, Fri, 24 September 21

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್