ಬೆಂಗಳೂರು, ನವೆಂಬರ್ 02: ಕರ್ನಾಟಕಕ್ಕೆ, ಅದರಲ್ಲೂ ಬೆಂಗಳೂರಿಗೆ ಬರುವುದು ನನಗೆ ಖುಷಿ. ಬೆಂಗಳೂರು ದೇಶದ ಟೆಕ್ನಾಲಜಿ ಕ್ಯಾಪಿಟಲ್. ಬೆಂಗಳೂರಿನ ಸಾಧನೆ ಎಲ್ಲೂ ಮಾಡಿಲ್ಲ. ಇದು ಇಡೀ ಭಾರತದ ಸಾಧನೆಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೇಳಿದ್ದಾರೆ. ನೆಲಮಂಗಲದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಡಿಫೆನ್ಸ್ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿಗೆ ಬರುವ ಅವಕಾಶ ಸಿಕ್ಕಾಗಲೆಲ್ಲಾ ಬರುತ್ತೇನೆ. ದಕ್ಷಿಣ ಪಥ್ ಹೆಸರಿನ ಮೂಲಕ ಕರೆಯಲು ಇಚ್ಚಿಸುತ್ತೇನೆ ಎಂದು ಬೆಂಗಳೂರನ್ನು ಹಾಡಿಗೊಳಿದ್ದಾರೆ.
ಕರ್ನಾಟಕ ಬಸವಣ್ಣರ ತತ್ವದಲ್ಲಿ ಕೆಲಸ ಮಾಡುತ್ತಿದೆ. ಇಲ್ಲಿನ ಜನರು, ಕೈಗಾರಿಕೆಗಳು ವಿವಿಧ ಸೆಕ್ಟರ್‌ಗಳಲ್ಲಿ ಸಾಧನೆ ಮಾಡಿದೆ. ಭಾರತದ ಸಂಸ್ಕೃತಿ ಬಹಳ ಹಳೆಯದು. ದೇಶದ ಸಂಸ್ಕೃತಿ ಉಳಿಸಲು ದಕ್ಷಿಣ ಭಾರತ ಅಗ್ರ ಸ್ಥಾನದಲ್ಲಿದ್ದು, ಅದಕ್ಕೆ ಪ್ರಶಂಸೆ ವ್ಯಕ್ತಪಡಿಸುತ್ತೇನೆ. ಭಾರತದ ಸಂಸ್ಕೃತಿಕ ದ್ವಾರ ಅಂತ ಕರೆದರೂ ತಪ್ಪಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ‘ಸ್ಪೈನಲ್ ಮಸ್ಕ್ಯೂಲರ್ ಆಟ್ರೋಫಿ’ ಕಾಯಿಲೆಯಿಂದ ಬಳಲುತ್ತಿರುವ ಮಗು: ಸಿಎಂ ತಪ್ಪು ಮಾಹಿತಿ ಹರಡಿದ್ದಾರೆ ಎಂದ ತೇಜಸ್ವಿ ಸೂರ್ಯ
ಈಗಲೂ ಕೂಡ ದಕ್ಷಿಣ ಭಾರತದಲ್ಲಿ ಉತ್ತಮ ಕುಟುಂಬ ಕಾಣಬಹುದು. ಕಲೆ, ಸಂಸ್ಕೃತಿ, ಚಲನಚಿತ್ರ, ಜ್ಞಾನ, ವಿಜ್ಞಾನ ಎಲ್ಲಾ ರೀತಿಯಲ್ಲೂ ದಕ್ಷಿಣ ಭಾರತ ಮಾದರಿಯಾಗಿದೆ. ಭಾರತದ ಪೂರ್ವದ ಸಂಸ್ಕೃತಿ ದಕ್ಷಿಣದಲ್ಲಿ ಕಾಣಬಹುದು. ಭಾರತದಲ್ಲಿ ದಿನನಿತ್ಯ ಸೂರ್ಯ ಪೂರ್ವದಲ್ಲಿ ಹುಟ್ಟಿದರೆ, ದೇಶದ ವಿಜ್ಞಾನ, ತಂತ್ರಜ್ಞಾನ ದಕ್ಷಿಣದಿಂದ ಹುಟ್ಟುತ್ತದೆ ಎಂದು ಹೇಳಿದ್ದಾರೆ.
ಸಣ್ಣ ಕೈಗಾರಿಕೆಗಳು ಭಾರತದಲ್ಲಿವೆ. ಅವುಗಳ ಸ್ಥಿತಿ ಈಗ ಸುಧಾರಿಸುತ್ತಿವೆ. ಕೈಗಾರಿಕೆಗಳ ಬಗ್ಗೆ ಚರ್ಚೆಗೆ ಬಂದಾಗ ಭಾರತದ ಹಣಕಾಸು ಪರಿಸ್ಥಿತಿ ಬಗ್ಗೆ ಚರ್ಚೆಯಾಗಲಿದೆ. ಖಾಸಗಿ ಸಂಸ್ಥೆಗಳು ಅವುಗಳ ಹೆಸರಿನ ಮೇಲೆ ನಿಂತಿದೆ. ಆದರೆ ನಿಜವಾದ ಪರಿಸ್ಥಿತಿ ಬೇರೆ ರೀತಿ ಇದೆ. ಖಾಸಗಿ ಕೈಗಾರಿಕೆಗಳ ಉದ್ಯೋಗ ಹಣಕಾಸು ಪರಿಸ್ಥಿತಿ ನೂರಾರು ಕುಟುಂಬಗಳನ್ನ ಅವಲಂಬಿಸಿವೆ. ಗಳಿಸಿದ ಹಣ ಫಲಾನುಭವಿಗಳಿಗೆ ತಲುಪಬೇಕು. ಈಗ ಆ ರೀತಿ ಆಗುತ್ತಿಲ್ಲ ಎಂದರು.
ದೊಡ್ಡ ಕೈಗಾರಿಕೆಗಳು ಬಾರದಿದ್ದಾಗ, ಸಣ್ಣ ಕೈಗಾರಿಕೆಗಳು ತಲೆ ಎತ್ತುತ್ತವೆ. ದೇಶದಲ್ಲಿ ಸಣ್ಣ ಕೈಗಾರಿಕೆಗಳ ಕೊಡುಗೆ ದೊಡ್ಡದು. ಉದ್ಯೋಗ ಅವಕಾಶ ಕೂಡ ಸಿಗಲಿದೆ. ದೊಡ್ಡ ಕೈಗಾರಿಕೆಗಳು ಮಾತ್ರವಲ್ಲದೆ, ಸಣ್ಣ ಕೈಗಾರಿಕೆಗಳು ಕೂಡ ಕಾಂಪಿಟೇಷನ್ ನೀಡುತ್ತಿವೆ. ಈ ದೇಶದ ಅಭಿವೃದ್ಧಿಗೆ ನಿಮ್ಮ ಕೊಡುಗೆ ದೊಡ್ಡದು. ಹೊಸಬರಿಗೆ ಅವಕಾಶ ಮಾಡಿಕೊಡಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.
ಮುದ್ರ ಲೋನ್ ಮೂಲಕ ಸಣ್ಣ ಕೈಗಾರಿಕೆ ತೆರೆಯಲು ಅವಕಾಶ ನೀಡಿದೆ. ಸಣ್ಣ ಕೈಗಾರಿಕೆ ಸ್ಥಾಪನೆ ಮೂಲಕ, ಉದ್ಯೊಗ ಸೃಷ್ಟಿಸಿ ಮುನ್ನಡೆಯೋಣ. ದೇಶದಲ್ಲಿ ಮೂರು ಲಕ್ಷಕ್ಕೂ ಅಧಿಕ ಸ್ಟಾರ್ಟಪ್ ಇದೆ. ಸಣ್ಣ ಉದ್ಯೋಗ ಮೂಲಕ ಆರಂಭಾವಗಿವೆ. ಇದೆಲ್ಲವೂ ಭಾರತೀಯರಿಂದ, ಭಾರತದಲ್ಲಿ ಮಾತ್ರ ಸಾಧ್ಯವಾಗಲಿದೆ. MSME ಮೂಲಕ ಡಿಫೆನ್ಸ್‌ಗೆ ಬೇಕಾದ ವಸ್ತುಗಳನ್ನು ತಯಾರಿಸಲಾಗುತ್ತಿದೆ.
ಇದನ್ನೂ ಓದಿ: ಗಡಿ ಕ್ಯಾತೆ ಆಯ್ತು ಈಗ ಕರ್ನಾಟಕಕ್ಕೆ ಹರಿದು ಬರುವ ದೂಧ್‌ಗಂಗಾ ನದಿ ನೀರಿನ ಮೇಲೆ ಮಹಾರಾಷ್ಟ್ರ ಕಣ್ಣು
ರಕ್ಷಣಾ ಇಲಾಖೆಗೆ ಅಗತ್ಯವಿರುವ ವಸ್ತು ತಯಾರಿಸುವ ಯುವಕರಿಗೆ 10 ಕೋಟಿ ರೂ. ವರೆಗಿನ ಸಾಲ ನೀಡಲು ನಿರ್ಧಾರ ಮಾಡಲಾಗಿದೆ. ದೊಡ್ಡ ದೊಡ್ಡ ಕೈಗಾರಿಕೆಗಳ ಜೊತೆಗೆ, ಸಣ್ಣ ಕೈಗಾರಿಕೆಗಳನ್ನೂ ತೆಗೆದುಕೊಂಡು ಹೋಗಬೇಕಿದೆ. ಕಾನೂನಾತ್ಮಕ ಸಮಸ್ಯೆಗಳು ಎದುರಾದರೆ ನಮ್ಮ ಗಮನಕ್ಕೆ ತನ್ನಿ. ಯಾವ ರೀತಿಯ ಸಮಸ್ಯೆ ಅಂತ ಪರಿಶೀಲನೆ ಮಾಡಲಾಗುವುದು. ಸಣ್ಣ ಕೈಗಾರಿಕೆ ಪ್ರಾರಂಭಿಸುವವರಿಗೆ ಎಲ್ಲಾ ಅಗತ್ಯ ಸೌಕರ್ಯ ನೀಡಲಾಗುವುದು ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.