ಗಡಿ ಕ್ಯಾತೆ ಆಯ್ತು ಈಗ ಕರ್ನಾಟಕಕ್ಕೆ ಹರಿದು ಬರುವ ದೂಧ್‌ಗಂಗಾ ನದಿ ನೀರಿನ ಮೇಲೆ ಮಹಾರಾಷ್ಟ್ರ ಕಣ್ಣು

ಸುಳಕೂಡ ಬ್ಯಾರೇಜ್ ಕರ್ನಾಟಕದ ಕೊಗನೊಳ್ಳಿ - ಮಹಾರಾಷ್ಟ್ರದ ಸುಳಕೂಡ ಮಧ್ಯೆ ಇದೆ. ಈ ಯೋಜನೆಯನ್ನು ಮಹಾರಾಷ್ಟ್ರ ಸರ್ಕಾರ ಅನುಷ್ಠಾನಗೊಳಿಸಿದ್ದೇ ಆದರೆ, ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೋಜ್, ಯಮಗರಣಿ, ಕಾರದಗಾ ಚಿಕ್ಕೋಡಿ ತಾಲೂಕಿನ ಬೇಡಕಿಹಾಳ, ಶಮನೇವಾಡಿ, ಕಾರದಗಾ, ಸದಲಗಾ ಸೇರಿ 20ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಕಷ್ಟ ಉಂಟಾಗಲಿದೆ.

ಗಡಿ ಕ್ಯಾತೆ ಆಯ್ತು ಈಗ ಕರ್ನಾಟಕಕ್ಕೆ ಹರಿದು ಬರುವ ದೂಧ್‌ಗಂಗಾ ನದಿ ನೀರಿನ ಮೇಲೆ ಮಹಾರಾಷ್ಟ್ರ ಕಣ್ಣು
ದೂಧ್‌ಗಂಗಾ ನದಿ
Follow us
| Updated By: ಗಣಪತಿ ಶರ್ಮ

Updated on: Nov 02, 2023 | 3:26 PM

ಚಿಕ್ಕೋಡಿ, ನವೆಂಬರ್ 2: ಗಡಿ ಕ್ಯಾತೆ ಬಳಿಕ ಮಹಾರಾಷ್ಟ್ರ ಸರ್ಕಾರ (Maharashtra Government) ಇದೀಗ ಮತ್ತೊಂದು ತಗಾದೆ ತೆಗೆಯಲು ಹೊರಟಿದೆ. ಕರ್ನಾಟಕಕ್ಕೆ ಹರಿದು ಬರುವ ದೂಧ್‌ಗಂಗಾ ನದಿ (Doodhganga River) ನೀರಿನ ಮೇಲೆ ಮಹಾರಾಷ್ಟ್ರ ಸರ್ಕಾರದ ದೃಷ್ಟಿ ಬಿದ್ದಿದೆ. ಈ ನದಿಯಿಂದ ಪೈಪ್‌ಲೈನ್ ಮೂಲಕ ಮಹಾರಾಷ್ಟ್ರದ ಇಚಲಕರಂಜಿಗೆ ಕುಡಿಯುವ ನೀರು ಪೂರೈಕೆಗೆ ಮಹಾ ಸರ್ಕಾರ ಯೋಜನೆ ರೂಪಿಸಿದೆ. ಧೂದ್‌ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಸುಳಕೂಡ ಬ್ಯಾರೇಜ್‌ನಿಂದ ನೀರು ಪೂರೈಕೆಗೆ ಯೋಜನೆ ರೂಪಿಸಲಾಗಿದೆ.

ಸುಳಕೂಡ ಬ್ಯಾರೇಜ್ ಕರ್ನಾಟಕದ ಕೊಗನೊಳ್ಳಿ – ಮಹಾರಾಷ್ಟ್ರದ ಸುಳಕೂಡ ಮಧ್ಯೆ ಇದೆ. ಈ ಯೋಜನೆಯನ್ನು ಮಹಾರಾಷ್ಟ್ರ ಸರ್ಕಾರ ಅನುಷ್ಠಾನಗೊಳಿಸಿದ್ದೇ ಆದರೆ, ಮಹಾರಾಷ್ಟ್ರ ಗಡಿಯ ದೂಧ್‌ಗಂಗಾ ನದಿ ತೀರದ ಗ್ರಾಮಸ್ಥರಿಗೆ ಸಂಕಷ್ಟ ಎದುರಾಗಲಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೋಜ್, ಯಮಗರಣಿ, ಕಾರದಗಾ ಚಿಕ್ಕೋಡಿ ತಾಲೂಕಿನ ಬೇಡಕಿಹಾಳ, ಶಮನೇವಾಡಿ, ಕಾರದಗಾ, ಸದಲಗಾ ಸೇರಿ 20ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಕಷ್ಟ ಉಂಟಾಗಲಿದೆ.

ಈ ಯೋಜನೆಗೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆ ಕಾಗಲ್ ತಾಲೂಕಿನ 30ಕ್ಕೂ ಹೆಚ್ಚು ಹಳ್ಳಿಗಳ ಜನರಿಂದಲೂ ವಿರೋಧ ವ್ಯಕ್ತವಾಗಿದೆ. ಯಾವುದೇ ಕಾರಣಕ್ಕೂ ಯೋಜನೆ ಜಾರಿ ಮಾಡದಂತೆ ದೂಧ್‌ಗಂಗಾ ನದಿ ತೀರದ ಜನರು ಆಗ್ರಹಿಸಿದ್ದಾರೆ.

ಯೋಜನೆ ವಿರುದ್ಧ ಹೋರಾಟಕ್ಕೆ ನದಿ ತೀರದ ಗ್ರಾಮಸ್ಥರಿಂದ ಸಿದ್ಧತೆ

ಯೋಜನೆ ಕೈ ಬಿಡುವಂತೆ ಆಗ್ರಹಿಸಿ ಜಂಟಿ ಹೋರಾಟಕ್ಕೆ ಕರ್ನಾಟಕ – ಮಹಾರಾಷ್ಟ್ರ ದೂಧ್‌ಗಂಗಾ ನದಿ ತೀರದ ಗ್ರಾಮಸ್ಥರು ಸಿದ್ಧತೆಯನ್ನೂ ಮಾಡಿದ್ದಾರೆ. ಇಚಲಕರಂಜಿಯಲ್ಲಿ ಹರಿಯುವ ಪಂಚಗಂಗಾ ನದಿ ನೀರು ಕೈಗಾರಿಕಾ ತ್ಯಾಜ್ಯದಿಂದ ಮಲಿನವಾಗಿರುವ ಕಾರಣ ಕರ್ನಾಟಕಕ್ಕೆ ಹರಿಯುವ ದೂಧ್‌ಗಂಗಾ ನದಿ ನೀರಿನ ಮೇಲೆ ಮಹಾರಾಷ್ಟ್ರ ಸರ್ಕಾರದ ವಕ್ರದೃಷ್ಟಿ ಬಿದ್ದಿದೆ. ದೂಧ್‌ಗಂಗಾ ನದಿ ನೀರನ್ನು ಇಚಲಕರಂಜಿಗೆ ಪೂರೈಸಲು ಮಹಾರಾಷ್ಟ್ರ ಸರ್ಕಾರ ಯೋಜನೆ ರೂಪಿಸಿದೆ. ದೂಧ್‌ಗಂಗಾ ನದಿ ನೀರು ಎತ್ತುವಳಿ ಮಾಡಿದ್ರೆ ಸುಳಕೂಡ ಬ್ಯಾರೇಜ್‌ನಲ್ಲಿ ನೀರು ಸಂಗ್ರಹ ಕಡಿಮೆಯಾಗಿ ತೊಂದರೆಯಾಗಲಿದ್ದು, ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಚಿಕ್ಕೋಡಿ ತಾಲೂಕಿನ 20ಕ್ಕೂ ಹೆಚ್ಚು ಹಳ್ಳಿಗಳಿಗೆ ತೊಂದರೆಯಾಗಲಿದೆ.

ಇದನ್ನೂ ಓದಿ: ಜನಪ್ರಧಿನಿಧಿಗಳ ಹಗ್ಗಜಗ್ಗಾಟದಿಂದ ಭದ್ರಾ ಯೋಜನೆ ಬಹುತೇಕ ಸ್ಥಗಿತ: ನನಸಾಗುತ್ತಾ ಕೋಟೆನಾಡಿನ ಜನರ ದಶಕಗಳ ಕನಸು?

ಭೀಕರ ಬರದಿಂದ ಮೊದಲೇ ಸಂಕಷ್ಟದಲ್ಲಿರುವ ಅನ್ನದಾತನಿಗೆ ಮತ್ತಷ್ಟು ತೊಂದರೆಯಾಗಲಿದೆ. ಯೋಜನೆ ಜಾರಿಯಾದ್ರೆ ಬೇಸಿಗೆಗೂ ಮೊದಲೇ ದೂಧ್‌ಗಂಗಾ ನದಿ ಬತ್ತುವ ಆತಂಕ ಎದುರಾಗಿದೆ. ತಕ್ಷಣ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ತರಲು ‌ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕೋಡಿ ತಾಲೂಕು ಅಧ್ಯಕ್ಷ ನಾಗೇಶ್ ಮಾಳಿ ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ