Anekal News: ದೆಹಲಿ ಮಾದರಿಯಲ್ಲಿ ಮಹಿಳೆಯ ಕೊಲೆ ಕೇಸ್​: ಏಳು ಆರೋಪಿಗಳ ಪೈಕಿ ಓರ್ವ ಅರೆಸ್ಟ್​​

|

Updated on: Jun 10, 2023 | 3:12 PM

ದೆಹಲಿ ಮಾದರಿಯಲ್ಲಿ ಮಹಿಳೆ ಕೊಲೆ‌ ಮಾಡಿ ದೇಹವನ್ನು ಪೀಸ್ ಪೀಸ್ ಮಾಡಿದ ಕೇಸ್​ಗೆ ಸಂಬಂಧಿಸಿದಂತೆ ಏಳು ಜನರ ಪೈಕಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Anekal News: ದೆಹಲಿ ಮಾದರಿಯಲ್ಲಿ ಮಹಿಳೆಯ ಕೊಲೆ ಕೇಸ್​: ಏಳು ಆರೋಪಿಗಳ ಪೈಕಿ ಓರ್ವ ಅರೆಸ್ಟ್​​
ಮೃತ ಗೀತಾ
Follow us on

ಆನೇಕಲ್​: ದೆಹಲಿ ಮಾದರಿಯಲ್ಲಿ ಮಹಿಳೆ ಕೊಲೆ‌ (murder case) ಮಾಡಿ ದೇಹವನ್ನು ಪೀಸ್ ಪೀಸ್ ಮಾಡಿದ ಕೇಸ್​ಗೆ ಸಂಬಂಧಿಸಿದಂತೆ ಏಳು ಜನರ ಪೈಕಿ ಓರ್ವ ಆರೋಪಿಯನ್ನು ಆನೇಕಲ್ ಉಪವಿಭಾಗದ ಬನ್ನೇರುಘಟ್ಟ ಠಾಣೆ ಪೋಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಇಂದಲ್ ಕುಮಾರ್(21) ಬಂಧಿತ ಆರೋಪಿ. ಪ್ರಮುಖ ಆರೋಪಿಗಳಾದ ಪಂಕಜ್ ಕುಮಾರ್, ಸುಮೀತ್​ ಜೊತೆ ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಜೂನ್ 1‌ರಂದು ಮಹಿಳೆ ಮೃತ ದೇಹ ಪತ್ತೆಯಾಗಿತ್ತು. ಕೊಲೆಗಡುಕರ ಪತ್ತೆಗೆ ಪೊಲೀಸರು ತಂಡ ರಚನೆ ಮಾಡಿದ್ದರು. ಬಿಹಾರದಿಂದ ಬೆಂಗಳೂರಿಗೆ ಬಂದಿದ್ದ ಯುವಕರು ಕೊಲೆಯಾದ‌ ಗೀತಾ(54)‌ ಮನೆಯಲ್ಲಿ ಬಾಡಿಗೆಗೆ ಇದ್ದರು. ಮಹಿಳೆಯ ಮನೆಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಹುನ್ನಾರ ಮಾಡಿದ್ದು, ಸಹಿ ಹಾಕುವಂತೆ ಬಲವಂತ ಮಾಡಿ, ಒಪ್ಪದಿದ್ದಾಗ ಕೊಲೆ ಮಾಡಿದ್ದಾರೆ.

ಶವದ ಮುಂದೆಯೇ ಊಟ  

ಹತ್ಯೆ ವಿಚಾರ ಗೊತ್ತಾಗದಿರಲು ದೇಹವನ್ನು ತುಂಡರಿಸಿ ಬಿಸಾಡಲು ಪ್ಲ್ಯಾನ್​ ಮಾಡಿದ್ದು, ಮೃತದೇಹ ಭಾಗಗಳನ್ನು ಕಟ್ ಮಾಡಿ ಪ್ಲಾಸ್ಟಿಕ್​ ಕವರ್​ನಲ್ಲಿ ಹಾಕಿ ಅಲ್ಲಲ್ಲಿ ಎಸೆದಿದ್ದಾರೆ. ಕೊಲೆಯಾದ‌ ನಂತರವೂ ಒಂದು ದಿನ ಕೆಲಸಕ್ಕೆ ತೆರಳಿದ್ದಾರೆ. ಬಳಿಕ ಮತ್ತೆ ಎರಡು ದಿನ ಅಂಗಾಗಳ ಸಾಗಾಟ ಮಾಡಿದ್ದಾರೆ. ಶವದ ಮುಂದೆಯೇ ಇಬ್ಬರು ಯುವಕರು ಊಟ ಕೂಡ ಸೇವಿಸಿದ್ದಾರೆ.

ಇದನ್ನೂ ಓದಿ: Bengaluru News: ಯುವತಿಯರನ್ನು ವೇಶ್ಯಾವಾಟಿಕೆ ದೂಡಿದ್ದ ಆರೋಪಿಗಳ ಬಂಧನ: 26 ಯುವತಿಯರ ರಕ್ಷಣೆ

ದೇಹ ಬಿಸಾಡಿ ಪರಾರಿ

ಕೃತ್ಯ ನಡೆದ ಮೂರು ದಿನಗಳ ಬಳಿಕ ಮನೆಯಲ್ಲಿ ದೇಹದ ವಾಸನೆ ಹೆಚ್ಚಾಗುತ್ತಿದ್ದಂತೆ ಯುವಕರು ಭಯಪಟ್ಟಿದ್ದಾರೆ. ಅದಕ್ಕೆ ಮನೆಯ ಹಿಂಭಾಗದಲ್ಲಿ ದೇಹ ಬಿಸಾಡಿ ಎಸ್ಕೇಪ್​ ಆಗಿದ್ದಾರೆ. ಬನ್ನೇರುಘಟ್ಟ ಬಯಲಾಜಿಕಲ್‌ ಪಾರ್ಕ್ ಅರಣ್ಯ ಪ್ರದೇಶದಲ್ಲಿ ಅಂದರೆ 1 ಕಿ.ಮಿ ದೂರದಲ್ಲಿ ತಲೆ ಮತ್ತು ಒಂದು ಕೈ ಪತ್ತೆಯಾಗಿದೆ.

ಇದನ್ನೂ ಓದಿ: Bengaluru News: ಡೇಟಿಂಗ್ ಆ್ಯಪ್ ಮೂಲಕ ಯುವತಿಗೆ ವಂಚಿಸಿದ್ದ ಆರೋಪಿ ಬಂಧನ

ಕೃತ್ಯದ ಮುಂಚೆ ಅತ್ಯಾಚಾರ ಆಗಿರುವ ಕುರಿತು ಮರಣೋತ್ತರ ವರದಿಯನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಸದ್ಯಕ್ಕೆ ಆಸ್ತಿ ವಿಚಾರವಾಗಿಯೇ ಕೊಲೆ ನಡೆದಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಆಸ್ತಿ ಅಲ್ಲದೇ ಬೇರೆ ಯಾವುದಾದರೂ ವಿಚಾರಕ್ಕೆ ಕೊಲೆ ನಡೆದಿದೆಯಾ ಎನ್ನುವ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು  ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:11 pm, Sat, 10 June 23