AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru News: ಡೇಟಿಂಗ್ ಆ್ಯಪ್ ಮೂಲಕ ಯುವತಿಗೆ ವಂಚಿಸಿದ್ದ ಆರೋಪಿ ಬಂಧನ

ಡೇಟಿಂಗ್ ಆ್ಯಪ್ ಮೂಲಕ ಹಿಂದೂ ಯುವಕನ ಹೆಸರಲ್ಲಿ ಯುವತಿಗೆ ವಂಚಿಸಿದ್ದ ಆರೋಪಿ ಮುದಾಸಿರ್ ಎಂಬಾತನನ್ನ ಬೆಂಗಳೂರಿನ ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Bengaluru News: ಡೇಟಿಂಗ್ ಆ್ಯಪ್ ಮೂಲಕ ಯುವತಿಗೆ ವಂಚಿಸಿದ್ದ ಆರೋಪಿ ಬಂಧನ
ಆರೋಪಿ ಮುದಾಸಿರ್
ಕಿರಣ್ ಹನುಮಂತ್​ ಮಾದಾರ್
|

Updated on: Jun 10, 2023 | 10:40 AM

Share

ಬೆಂಗಳೂರು: ಡೇಟಿಂಗ್ ಆ್ಯಪ್(Dating App) ಮೂಲಕ ಯುವತಿಗೆ ವಂಚಿಸಿದ್ದ ಆರೋಪಿ ಮುದಾಸಿರ್ ಎಂಬಾತನನ್ನ ಬೆಂಗಳೂರಿ(Bengaluru)ನ ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಿಂದೂ ಯುವಕನ ಹೆಸರಲ್ಲಿ ಆರೋಪಿ ಮುದಾಸಿರ್ ಪ್ರೊಫೈಲ್ ಕ್ರಿಯೇಟ್ ಮಾಡಿದ್ದ. ಆ್ಯಪ್​​ನಲ್ಲಿ ಸಂಗಾತಿ ಹುಡುಕುತ್ತಿದ್ದ ಯುವತಿಗೆ ಮೆಸೇಜ್​​ ಕಳಿಸಿದ್ದ. ಬಳಿಕ ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿದ್ದನು. ದೈಹಿಕ ಸಂಪರ್ಕ ಕೂಡ ಬೆಳೆಸಿದ್ದ ಆರೋಪಿ ಮುದಾಸಿರ್, ನಂತರ ಯುವತಿ ಭೇಟಿ ವೇಳೆ ಆತ​ ಹಿಂದೂ ಅಲ್ಲ ಎಂಬುದು ಬೆಳಕಿಗೆ ಬಂದಿದೆ. ಜೊತೆಗೆ ​ತಾಯಿಗೆ ಹುಷಾರಿಲ್ಲವೆಂದು ಯುವತಿ ಬಳಿ 1 ಲಕ್ಷ ಹಣವನ್ನ ಪಡೆದಿದ್ದನಂತೆ. ಬಳಿಕ ತಾಯಿ ಮೃತಪಟ್ಟಿದ್ದಾರೆ ಎಂದು ಸುಳ್ಳಿನ ಕಥೆ ಕಟ್ಟಿದ್ದಾನೆ.

ಪ್ರೀತಿಸಿದ ಹುಡುಗ ಅನಿರುದ್ದ್ ಅಲ್ಲ ಮುದಾಸಿರ್

ಇನ್ನು ಕೊನೆಗೆ ಸೋದರನನ್ನ ನೋಡಲು ದುಬೈಗೆ ಹೋಗಿ ಬರುತ್ತೆನೆಂದು ಫೋನ್ ಸ್ಪಿಚ್ ಆಫ್ ಮಾಡಿ, ಬಳಿಕ ಮುದಾಸಿರ್​ನನ್ನ ಪತ್ತೆ ಹಚ್ಚಿದ ಯುವತಿಗೆ ಡಬ್ಬಲ್ ಡಬ್ಬಲ್ ಶಾಕ್ ಎದುರಾಗಿತ್ತು. ಹೌದು ಅನಿರುದ್ದ್​ ಹೆಸರಿನವನು ಅನಿರುದ್ದ್ ಅಲ್ಲ ಮುದಾಸಿರ್ ಅನ್ನೋದರ ಜೊತೆಗೆ ಮುದಾಸಿರ್​ಗೆ ಮತ್ತೊಂದು ಮದುವೆಯಾಗಿ ಹೆಂಡತಿ ಮಕ್ಕಳು ಇದ್ದಾರೆಂಬುದು ಗೊತ್ತಾಗಿದೆ. ಕೊನೆಗೆ ನೊಂದ ಯುವತಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ದೂರು ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಿ ಇದೀಗ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ:Urvashi Rautela: ಹೆಜ್ಜೆ ಹೆಜ್ಜೆಗೂ ಸುಳ್ಳು ಹೇಳುವ ಸುಂದರಿ; ಬಯಲಾಯ್ತು ಊರ್ವಶಿ ರೌಟೇಲಾ ಮೋಸದ ಜಾಲ

ಡೇಟಿಂಗ್‌ ಆ್ಯಪ್‌ ಜಾಲಕ್ಕೆ ಸಿಲುಕಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಯುವತಿ!

ಆನ್‌ಲೈನ್‌ ವಂಚನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಇದೇ ಮೊದಲಲ್ಲ, ಸಾಕಷ್ಟು ಜಾಗೃತಿ ಮೂಡಿಸಿದರೂ ವಂಚಕರು ಹೊಸ ಮಾರ್ಗಗಳನ್ನು ಬಳಸಿ ಹಣ ಲೂಡಿ ಮಾಡುತ್ತಿದ್ದಾರೆ. ಅದರಂತೆ ಡೇಟಿಂಗ್‌ ಆ್ಯಪ್‌ ಮೂಲಕ ಪರಿಚಯವಾದ ಅಪರಿಚಿತ ವಂಚಕನ ಬಲೆಗೆ ಬಿದ್ದ ಯುವತಿಯೊಬ್ಬರು 3.18 ಲಕ್ಷ ರೂ. ಕಳೆದುಕೊಂಡಿದ್ದರು. ಈ ಕುರಿತು ಮೋಸ ಹೋದ 35 ವರ್ಷದ ಯುವತಿ ವೈಟ್‌ಫೀಲ್ಡ್‌ ಸೈಬರ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದಿತ್ಯ ಹೆಸರಿನ ವಂಚಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ದೂರುದಾರೆಗೆ ಕೆಲ ತಿಂಗಳ ಹಿಂದೆ ಡೇಟಿಂಗ್‌ ಆ್ಯಪ್‌ನಲ್ಲಿ ಆದಿತ್ಯ ಎಂಬಾತ ಪರಿಚಯವಾಗಿದ್ದ. ತಾನು ಲಂಡನ್‌ನಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದ. ಬಳಿಕ ಇಂಟರ್ನೆಟ್‌ ವಾಟ್ಸ್‌ಆ್ಯಪ್‌ ಕಾಲ್‌ನಲ್ಲಿ ಸಂಪರ್ಕ ಸಾಧಿಸಿದ್ದು, ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಇನ್ನು ಇಂತಹ ಪ್ರಕರಣಗಳು ಅದೆಷ್ಟೋ ಬೆಳಕಿಗೆ ಬಂದಿದ್ದರು, ಮೋಸ ಹೋಗುವವರ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ