AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Urvashi Rautela: ಹೆಜ್ಜೆ ಹೆಜ್ಜೆಗೂ ಸುಳ್ಳು ಹೇಳುವ ಸುಂದರಿ; ಬಯಲಾಯ್ತು ಊರ್ವಶಿ ರೌಟೇಲಾ ಮೋಸದ ಜಾಲ

Parveen Babi Biopic: ಊರ್ವಶಿ ರೌಟೇಲಾ ಅವರ ಸರಣಿ ಸುಳ್ಳುಗಳು ಹೊರಬೀಳುತ್ತಿವೆ. ಪ್ರಚಾರಕ್ಕಾಗಿ ಅವರು ಸುಳ್ಳು ಹೇಳುತ್ತಾರೆ ಅಂತ ಸಾಬೀತಾಗಿದೆ. ಇದೊಂದು ಬಗೆಯ ಮೋಸ ಅಂತ ಇಂಡಸ್ಟ್ರಿ ಒಳಗಿನವರು ಹೇಳುತ್ತಿದ್ದಾರೆ.

Urvashi Rautela: ಹೆಜ್ಜೆ ಹೆಜ್ಜೆಗೂ ಸುಳ್ಳು ಹೇಳುವ ಸುಂದರಿ; ಬಯಲಾಯ್ತು ಊರ್ವಶಿ ರೌಟೇಲಾ ಮೋಸದ ಜಾಲ
ಊರ್ವಶಿ ರೌಟೇಲಾ
ಮದನ್​ ಕುಮಾರ್​
|

Updated on: Jun 06, 2023 | 7:09 PM

Share

ನಟಿ ಊರ್ವಶಿ ರೌಟೇಲಾ (Urvashi Rautela) ಅವರಿಗೆ ಬಾಲಿವುಡ್​ನಲ್ಲಿ ಬೇಡಿಕೆ ಇದೆ ಎಂಬುದು ನಿಜ. ಆದರೆ ಕೆಲವೊಂದು ಕಾರಣಗಳಿಂದ ಅವರು ಕಟು ಟೀಕೆಗೆ ಒಳಗಾಗುತ್ತಿದ್ದಾರೆ. ಕ್ರಿಕೆಟರ್​ ರಿಷಭ್​ ಪಂತ್​ ಅವರ ಹಿಂದೆ ಬಿದ್ದಿದ್ದರಿಂದ ಊರ್ವಶಿ ರೌಟೇಲಾರನ್ನು ನೆಟ್ಟಿಗರು ಟ್ರೋಲ್​ ಮಾಡಿದ್ದರು. ಆ ಬಳಿಕ ರಿಷಬ್​ ಶೆಟ್ಟಿ ಜೊತೆ ಫೋಟೋ ಹಂಚಿಕೊಂಡು ಕೂಡ ಊರ್ವಶಿ ರೌಟೇಲಾ ಗಿಮಿಕ್​ ಮಾಡಿದ್ದರು. ಈಗ ಇನ್ನೊಂದು ವಿಚಾರದಲ್ಲಿ ಅವರು ಸುಳ್ಳು ಹೇಳಿರುವುದು ಗೊತ್ತಾಗಿದೆ. ನಟಿ ಪರ್ವೀನ್​ ಬಾಬಿ (Parveen Babi) ಬಯೋಪಿಕ್​ ಬಗ್ಗೆ ಇತ್ತೀಚೆಗೆ ಊರ್ವಶಿ ಹಂಚಿಕೊಂಡ ಮಾಹಿತಿ ಶುದ್ಧ ಸುಳ್ಳು ಎಂಬುದು ಬಯಲಾಗಿದೆ. ಹಾಗಾಗಿ ನೆಟ್ಟಿಗರು ಅವರನ್ನು ಟ್ರೋಲ್​ (Troll) ಮಾಡುತ್ತಿದ್ದಾರೆ.

ಕೆಲವೇ ದಿನಗಳ ಹಿಂದೆ ಊರ್ವಶಿ ರೌಟೇಲಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ಒಂದು ಪೋಸ್ಟ್​ ಹಂಚಿಕೊಂಡಿದ್ದರು. ತಾವು ಪರ್ವೀನ್​ ಬಾಬಿ ಬಯೋಪಿಕ್​ನಲ್ಲಿ ನಟಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದರು. ಆದರೆ ಅದನ್ನು ನಿರ್ಮಾಣ ಮಾಡುತ್ತಿರುವವರು ಯಾರು ಎಂಬ ಮಾಹಿತಿಯನ್ನು ಅವರು ಬಿಟ್ಟುಕೊಟ್ಟಿರಲಿಲ್ಲ. ಮಾಧ್ಯಮಗಳು ವಿಚಾರಿಸಿದಾಗ ಸತ್ಯ ಬಯಲಾಗಿದೆ. ಯಾವುದೇ ನಿರ್ಮಾಪಕರು ಕೂಡ ಪರ್ವೀನ್​ ಬಾಬಿ ಬಯೋಪಿಕ್​ಗಾಗಿ ಊರ್ವಶಿ ರೌಟೇಲಾ ಜೊತೆ ಮಾತುಕತೆ ನಡೆಸಿಲ್ಲ ಎಂಬುದು ಗೊತ್ತಾಗಿದೆ.

ಫೆಬ್ರವರಿ 11ರಂದು ರಿಷಬ್​ ಶೆಟ್ಟಿ ಜೊತೆಗಿನ ಫೋಟೋ ಹಂಚಿಕೊಂಡ ಊರ್ವಶಿ ರೌಟೇಲಾ ಅವರು ‘ಕಾಂತಾರ 2 ಲೋಡಿಂಗ್​..’ ಎಂದು ಕ್ಯಾಪ್ಷನ್​ ನೀಡಿದ್ದರು. ಹಾಗಾಗಿ ಈ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ ಎಂದೇ ಬಿಂಬಿತವಾಗಿತ್ತು. ಆದರೆ ಅವರು ಈ ಚಿತ್ರಕ್ಕೆ ಆಯ್ಕೆ ಆಗಿಲ್ಲ ಎಂಬುದು ನಂತರ ಬಯಲಾಯಿತು. ಹೀಗೆ ಈ ಸುಂದರಿಯ ಸಾಲು ಸಾಲು ಸುಳ್ಳುಗಳು ಹೊರಬೀಳುತ್ತಿವೆ. ಪ್ರಚಾರಕ್ಕಾಗಿ ಅವರು ಈ ಪರಿ ಸುಳ್ಳು ಹೇಳುತ್ತಾರೆ ಅಂತ ಸಾಬೀತಾಗಿದೆ. ಇದೊಂದು ಬಗೆಯ ಮೋಸ ಎಂಬುದಾಗಿಯೂ ಇಂಡಸ್ಟ್ರಿ ಒಳಗಿನವರು ಹೇಳುತ್ತಿದ್ದಾರೆ.

ಇದನ್ನೂ ಓದಿ: Urvashi Rautela: ನಟಿ ಊರ್ವಶಿ ರೌಟೇಲಾ ಹೊಸ ಅವತಾರ ಹೇಗಿದೆ ನೋಡಿ

ಇತ್ತೀಚೆಗೆ ಊರ್ವಶಿ ರೌಟೇಲಾ ಅವರು ಹೊಸ ಮನೆ ಖರೀದಿಸಿರುವ ಬಗ್ಗೆ ಸುದ್ದಿ ಆಗಿದೆ. ಮುಂಬೈನ ಐಶಾರಾಮಿ ಏರಿಯಾ ಆಗಿರುವ ಅಂಧೇರಿ ವೆಸ್ಟ್​ನಲ್ಲಿ, ಬಾಲಿವುಡ್ ನಿರ್ಮಾಪಕ ಯಶ್ ಚೋಪ್ರಾ ಮನೆಯ ಪಕ್ಕದಲ್ಲಿಯೇ ಐಷಾರಾಮಿ ಮನೆಯನ್ನು ಊರ್ವಶಿ ಖರೀದಿಸಿದ್ದಾರೆ. ಈ ಮನೆಗೆ ಊರ್ವಶಿ ಬರೋಬ್ಬರಿ 190 ಕೋಟಿ ರೂಪಾಯಿ ಪಾವತಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಸುಂದರವಾದ ಗಾರ್ಡನ್, ಎರಡು ಸ್ವಿಮ್ಮಿಂಗ್ ಪೂಲ್, ಖಾಸಗಿ ಜಿಮ್, ಚಿತ್ರಮಂದಿರ, ಬಾರ್, ವಿಶಾಲವಾದ ಪಾರ್ಕಿಂಗ್ ಮತ್ತು ಬ್ಯಾಕ್ ಯಾರ್ಡ್ ಸೇರಿದಂತೆ ಹಲವು ಐಷಾರಾಮಿ ಸೌಲಭ್ಯಗಳು ಈ ಹೊಸ ಮನೆಯಲ್ಲಿವೆ ಎಂಬ ಸುದ್ದಿ ಹರಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ