Rahul Gandhi: ‘ಒಂದಿನ ರಾಹುಲ್ ಗಾಂಧಿ ಪ್ರಧಾನ ಮಂತ್ರಿ ಆಗಿ ಬೆಸ್ಟ್ ಪಿಎಂ ಎನಿಸಿಕೊಳ್ತಾರೆ’: ಭವಿಷ್ಯ ನುಡಿದ ಕೆಆರ್ಕೆ
Kamaal R Khan: ಬಾಲಿವುಡ್ನ ಬಹುತೇಕ ಎಲ್ಲ ಸಿನಿಮಾಗಳನ್ನೂ ಕಮಾಲ್ ಆರ್. ಖಾನ್ ವಿಮರ್ಶೆ ಮಾಡುತ್ತಾರೆ. ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆಯೂ ಅವರು ಕಮೆಂಟ್ ಮಾಡುತ್ತಾರೆ.
ವಿವಾದಾತ್ಮಕ ಹೇಳಿಕೆಗಳಿಂದಲೇ ಫೇಮಸ್ ಆಗಿರುವ ಕಮಾಲ್ ಆರ್. ಖಾನ್ (Kamaal R Khan) ಅವರು ಈಗ ಕೇವಲ ಸಿನಿಮಾ ಮಾತ್ರವಲ್ಲದೇ ಇನ್ನುಳಿದ ವಿಚಾರಗಳ ಬಗ್ಗೆಯೂ ಮಾತನಾಡಲಾರಂಭಿಸಿದ್ದಾರೆ. ರಾಜಕೀಯದ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಈಗ ಅವರು ರಾಹುಲ್ ಗಾಂಧಿ (Rahul Gandhi) ಕುರಿತು ಟ್ವೀಟ್ ಮಾಡಿದ್ದಾರೆ. ಇದು ಅವರ ಭವಿಷ್ಯವಾಣಿಯಂತೆ! ‘ಮುಂದೊಂದು ದಿನ ರಾಹುಲ್ ಗಾಂಧಿ ಅವರು ಪ್ರಧಾನ ಮಂತ್ರಿ ಆಗುತ್ತಾರೆ. ಅವರನ್ನು ಭಾರತದ ಇತಿಹಾಸದಲ್ಲೇ ಅತ್ಯುತ್ತಮ ಪ್ರಧಾನಿ ಎಂದು ಕರೆಯಲಾಗುತ್ತದೆ’ ಎಂದು ಕಮಾಲ್ ಆರ್. ಖಾನ್ ಅಲಿಯಾಸ್ ಕೆಆರ್ಕೆ ಅವರು ತಮ್ಮ ಟ್ವಿಟರ್ (KRK Twitter) ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್ ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಬಾಲಿವುಡ್ನ ಬಹುತೇಕ ಎಲ್ಲ ಸಿನಿಮಾಗಳನ್ನೂ ಕಮಾಲ್ ಆರ್. ಖಾನ್ ವಿಮರ್ಶೆ ಮಾಡುತ್ತಾರೆ. ತೀರಾ ಕಟು ಮಾತುಗಳಿಂದ ಅವರು ವ್ಯಂಗ್ಯ ಮಾಡುತ್ತಾರೆ. ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆಯೂ ಅವರು ಕಮೆಂಟ್ ಮಾಡುತ್ತಾರೆ. ಇದರಿಂದ ಕೆಲವರಿಗೆ ಮಾನಹಾನಿ ಆಗಿದ್ದುಂಟು. ಅಂಥವರಿಂದ ಕಮಾಲ್ ಆರ್. ಖಾನ್ ಮೇಲೆ ಕೇಸ್ ಕೂಡ ಹಾಕಲಾದ ಉದಾಹರಣೆ ಇದೆ. ಈಗ ಅವರು ಪೊಲಿಟಿಕಲ್ ವಿಚಾರಗಳ ಬಗ್ಗೆ ಟ್ವೀಟ್ ಮಾಡುತ್ತಿರುವುದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ‘ಸಿನಿಮಾ ವಿಮರ್ಶೆಗೆ ಮಾತ್ರ ನೀವು ಸೀಮಿತವಾಗಿರಿ’ ಎಂದು ನೆಟ್ಟಿಗರು ಬುದ್ಧಿ ಹೇಳಿದ್ದಾರೆ.
Prediction 95:- One Day @RahulGandhi will become PM of India and he will be called the best PM in the history of India. pic.twitter.com/3PmpMXRtpn
— KRK (@kamaalrkhan) June 5, 2023
2008ರಲ್ಲಿ ‘ದೇಶದ್ರೋಹಿ’ ಸಿನಿಮಾ ತೆರೆಕಂಡಿತ್ತು. ಆ ಚಿತ್ರದಲ್ಲಿ ಕಮಾಲ್ ಆರ್. ಖಾನ್ ಮುಖ್ಯಭೂಮಿಕೆ ನಿಭಾಯಿಸಿದ್ದರು. ನಿರ್ಮಾಣ ಕೂಡ ಅವರದ್ದೇ. ಆ ಸಿನಿಮಾ ಅತಿ ಕೆಟ್ಟ ವಿಮರ್ಶೆ ಪಡೆದುಕೊಂಡಿತ್ತು. ಪ್ರೇಕ್ಷಕರಿಗೂ ಕಿಂಚಿತ್ತೂ ಹಿಡಿಸಲಿಲ್ಲ. ಹೀನಾಯವಾಗಿ ಸೋತರೂ ಕಮಾಲ್ ಆರ್. ಖಾನ್ಗೆ ಬುದ್ಧಿ ಬಂದಿಲ್ಲ. ಈಗ ಅವರು ‘ದೇಶದ್ರೋಹಿ 2’ ಸಿನಿಮಾ ಮಾಡುವ ಉತ್ಸಾಹದಲ್ಲಿದ್ದಾರೆ. 2022ರ ಏಪ್ರಿಲ್ 18ರಂದು ಕಮಾಲ್ ಆರ್. ಖಾನ್ ಅವರು ‘ದೇಶದ್ರೋಹಿ 2’ ಚಿತ್ರದ ಹೊಸ ಪೋಸ್ಟರ್ ಶೇರ್ ಮಾಡಿಕೊಂಡಿದ್ದರು. ಸಿನಿಮಾದ ಶೂಟಿಂಗ್ ಸದ್ಯದಲ್ಲೇ ಆರಂಭ ಆಗಲಿದೆ ಎಂದು ಅವರು ಮಾಹಿತಿ ನೀಡಿದ್ದರು.
ಇದನ್ನೂ ಓದಿ: KRK: ಕಮಾಲ್ ಆರ್. ಖಾನ್ ಮೇಲೆ ಸಲ್ಮಾನ್ ಖಾನ್ ಕೇಸ್ ಹಾಕಿದ್ದು ದುಡ್ಡಿಗೋಸ್ಕರನಾ? ಶುರುವಾಯ್ತು ಚರ್ಚೆ
‘ವಿರಾಟ್ ಕೊಹ್ಲಿಯ ಡ್ಯಾನ್ಸ್ ಕೌಶಲ ನೋಡಿ ನಾನು ಇಂಪ್ರೆಸ್ ಆಗಿದ್ದೇನೆ. ಹಾಗಾಗಿ ನನ್ನ ‘ದೇಶದ್ರೋಹಿ 2’ ಸಿನಿಮಾದಲ್ಲಿ ಅವರಿಗೆ ಐಟಂ ಡ್ಯಾನ್ಸ್ ಮಾಡಲು ಚಾನ್ಸ್ ನೀಡುತ್ತೇನೆ’ ಎಂದು ಕಮಾಲ್ ಆರ್. ಖಾನ್ ಟ್ವೀಟ್ ಮಾಡಿದ್ದರು. ಅದು ವಿರಾಟ್ ಕೊಹ್ಲಿ ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿತ್ತು. ಆ ಟ್ವೀಟ್ಗೆ ಕಮೆಂಟ್ ಮಾಡಿದ ಅನೇಕರು ಕಮಾಲ್ ಆರ್. ಖಾನ್ಗೆ ಎಚ್ಚರಿಕೆ ನೀಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.