AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KRK: ಕಮಾಲ್​ ಆರ್​. ಖಾನ್​ ಮೇಲೆ ಸಲ್ಮಾ​ನ್​ ಖಾನ್ ಕೇಸ್​ ಹಾಕಿದ್ದು ದುಡ್ಡಿಗೋಸ್ಕರನಾ? ಶುರುವಾಯ್ತು ಚರ್ಚೆ

Kamaal R Khan: ವಿವಾದಗಳಿಂದ ಕಮಾಲ್​ ಆರ್​ ಖಾನ್​ ಒಮ್ಮೆ ಜೈಲಿಗೆ ಹೋಗಿ ಬಂದಿದ್ದಾರೆ. ಇಷ್ಟಾದರೂ ಕೂಡ ಅವರು ಬುದ್ಧಿ ಕಲಿತಿಲ್ಲ. ಈಗ ಅವರು ಹೊಸ ವರಸೆ ತೆಗೆದಿದ್ದಾರೆ.

KRK: ಕಮಾಲ್​ ಆರ್​. ಖಾನ್​ ಮೇಲೆ ಸಲ್ಮಾ​ನ್​ ಖಾನ್ ಕೇಸ್​ ಹಾಕಿದ್ದು ದುಡ್ಡಿಗೋಸ್ಕರನಾ? ಶುರುವಾಯ್ತು ಚರ್ಚೆ
ಕಮಾಲ್​ ಆರ್​. ಖಾನ್​, ಸಲ್ಮಾನ್​ ಖಾನ್​
ಮದನ್​ ಕುಮಾರ್​
|

Updated on: May 19, 2023 | 6:52 PM

Share

ಕಮಾಲ್​ ಆರ್​. ಖಾನ್​ (Kamaal R Khan) ಬಗ್ಗೆ ಹೊಸದಾಗಿ ಹೇಳಬೇಕಾದ್ದು ಏನೂ ಇಲ್ಲ. ವಿವಾದಗಳಿಂದಲೇ ಅವರು ಫೇಮಸ್​. ನಟನಾಗಿ ಅವರಿಗೆ ಬಾಲಿವುಡ್​ನಲ್ಲಿ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವಾಗಲಿಲ್ಲ. ಇನ್ನುಳಿದವರ ಸಿನಿಮಾವನ್ನು ವಿಮರ್ಶೆ ಮಾಡುತ್ತಾ, ಆಕ್ಷೇಪಾರ್ಹ ರೀತಿಯಲ್ಲಿ ಕಮೆಂಟ್​ ಮಾಡುತ್ತಾ ಅವರು ಕಾಲ ಕಳೆಯುತ್ತಿದ್ದಾರೆ. ಅದರಿಂದ ಅವರ ಮೇಲೆ ಅನೇಕ ಕೇಸ್​ಗಳು (Defamation Case) ಬಿದ್ದಿವೆ. ಒಮ್ಮೆ ಅವರು ಜೈಲಿಗೂ ಹೋಗಿ ಬಂದಿದ್ದಾರೆ. ಇಷ್ಟಾದರೂ ಕೂಡ ಕಮಾಲ್​ ಆರ್. ಖಾನ್​ ಬುದ್ಧಿ ಕಲಿತಿಲ್ಲ. ಈಗ ಅವರು ಹೊಸ ವರಸೆ ತೆಗೆದಿದ್ದಾರೆ. ತಮ್ಮ ಮೇಲೆ ಸಲ್ಮಾನ್​ ಖಾನ್​ (Salman Khan), ಮನೋಜ್​ ಬಾಜ್​ಪೇಯಿ ಮುಂತಾದವರು ಕೇಸ್​ ಹಾಕಿದ್ದು ಹಣಕ್ಕೋಸ್ಕರ ಎಂಬ ಅರ್ಥ ಬರುವ ರೀತಿಯಲ್ಲಿ ಕೆಆರ್​ಕೆ ಟ್ವೀಟ್​ ಮಾಡಿದ್ದಾರೆ. ಆ ಮೂಲಕ ಅವರು ಟ್ರೋಲ್​ ಆಗಿದ್ದಾರೆ.

ಕಮಾಲ್​ ಆರ್​. ಖಾನ್​ ಟ್ವೀಟ್​ನಲ್ಲಿ ಏನಿದೆ?

‘ಸಲ್ಮಾನ್ ಖಾನ್, ವಶು ಭಗ್ನಾನಿ, ಮನೋಜ್ ಬಾಜ್​ಪೇಯಿ, ಹನ್ಸಲ್ ಮೆಹ್ತಾ, ವಿಕ್ರಮ್ ಭಟ್ ಮುಂತಾದ ದೊಡ್ಡ ದೊಡ್ಡ ವ್ಯಕ್ತಿಗಳು ನನ್ನ ವಿರುದ್ಧ ಏಕೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ಹಲವರು ನನ್ನನ್ನು ಕೇಳುತ್ತಾರೆ. ಅದಕ್ಕೆ ನನ್ನ ಉತ್ತರ; ಶ್ರೀಮಂತ ಮತ್ತು ಪ್ರಸಿದ್ಧ ವ್ಯಕ್ತಿಗಳ ವಿರುದ್ಧ ಮಾತ್ರ ಜನರು ಮಾನನಷ್ಟ ಮೊಕದ್ದಮೆಗಳನ್ನು ಹೂಡುತ್ತಾರೆ’ ಎಂದು ಕಮಾಲ್​ ಆರ್​. ಖಾನ್​ ಟ್ವೀಟ್​ ಮಾಡಿದ್ದಾರೆ.

ಇತ್ತೀಚೆಗೆ ವಿವೇಕ್​ ಅಗ್ನಿಹೋತ್ರಿ ಬಗ್ಗೆ ಕಮಾಲ್​ ಆರ್​. ಖಾನ್​ ಖಾರವಾಗಿ ಟ್ವೀಟ್​ ಮಾಡಿದ್ದರು. ‘ಈತ ಬಾಲಿವುಡ್​ನಲ್ಲಿ ಅತಿ ಹೆಚ್ಚು ಹತಾಶೆಗೆ ಒಳಗಾದ ವ್ಯಕ್ತಿ. ಜೀವನದಲ್ಲಿ ಬರೀ ಕೆಟ್ಟ ಸಿನಿಮಾಗಳನ್ನು ಮಾಡಿದ. ಹಾಗಾಗಿ ಈತನನ್ನು ಬಾಲಿವುಡ್​ನವರು ದೊಡ್ಡ ನಿರ್ದೇಶಕ ಅಂತ ಗುರುತಿಸಲಿಲ್ಲ. ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾ ನಿರ್ದೇಶಿಸಿದ ನಂತರವೂ ಇವನಿಗೆ ಬಾಲಿವುಡ್​ನವರು ಮನ್ನಣೆ ನೀಡಿಲ್ಲ. ಹಾಗಾಗಿ ಇನ್ನೂ ಹೆಚ್ಚು ಹತಾಶೆಗೆ ಒಳಗಾಗಿದ್ದಾನೆ’ ಎಂದು ಕಮಾಲ್​ ಆರ್​. ಖಾನ್​ ಅವರು ಟ್ವೀಟ್​ ಮಾಡಿದ್ದರು.

ಇದನ್ನೂ ಓದಿ: KRK: ಶ್ರದ್ಧಾ ಕಪೂರ್​ಗೆ ಬಾಡಿ ಶೇಮಿಂಗ್​ ಮಾಡಿದ ಕಾಂಟ್ರವರ್ಸಿ ವಿಮರ್ಶಕ ಕಮಾಲ್​ ಆರ್​. ಖಾನ್​

ಟ್ವಿಟರ್​ನಲ್ಲಿ ಕಮಾಲ್​ ಆರ್​. ಖಾನ್​ ಆ್ಯಕ್ಟೀವ್​ ಆಗಿದ್ದಾರೆ. ಆಗಾಗ ಅವರು ವಿವಾದಾತ್ಮಕ ರೀತಿಯಲ್ಲಿ ಪೋಸ್ಟ್​ ಮಾಡಿ ಸುದ್ದಿ ಆಗುತ್ತಾರೆ. ಹಿಂದಿ ಚಿತ್ರರಂಗದ ಬಹುತೇಕ ಎಲ್ಲ ಸೆಲೆಬ್ರಿಟಿಗಳನ್ನೂ ಅವರು ಎದುರು ಹಾಕಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸಾಂಪ್ರದಾಯಿಕ ಡ್ರೆಸ್ ತೊಟ್ಟು ಓಣಂ ಹಬ್ಬದೂಟ ಮಾಡಿದ ಮುದ್ದು ನಾಯಿ
ಸಾಂಪ್ರದಾಯಿಕ ಡ್ರೆಸ್ ತೊಟ್ಟು ಓಣಂ ಹಬ್ಬದೂಟ ಮಾಡಿದ ಮುದ್ದು ನಾಯಿ
ಗಂಡನನ್ನು ನಿಮಗೆ ಒಪ್ಪಿಸಿದ್ದೇನೆ, 4 ತಿಂಗಳು ಲಾಕ್ ಮಾಡಿಕೊಳ್ಳಿ: ಹರ್ಷಿಕಾ
ಗಂಡನನ್ನು ನಿಮಗೆ ಒಪ್ಪಿಸಿದ್ದೇನೆ, 4 ತಿಂಗಳು ಲಾಕ್ ಮಾಡಿಕೊಳ್ಳಿ: ಹರ್ಷಿಕಾ
ಇಂದೋರ್​​ನ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಇಲಿ ಕಚ್ಚಿ 2 ಶಿಶುಗಳು ಸಾವು
ಇಂದೋರ್​​ನ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಇಲಿ ಕಚ್ಚಿ 2 ಶಿಶುಗಳು ಸಾವು
ಗಣೇಶ ವಿಸರ್ಜನೆ ವೇಳೆ DJ ಬಂದ್ ಮಾಡಿಸಿದ ಪೊಲೀಸರು, ಗ್ರಾಮಸ್ಥರು ಮಾಡಿದ್ದೇನು
ಗಣೇಶ ವಿಸರ್ಜನೆ ವೇಳೆ DJ ಬಂದ್ ಮಾಡಿಸಿದ ಪೊಲೀಸರು, ಗ್ರಾಮಸ್ಥರು ಮಾಡಿದ್ದೇನು
ಅಭಿಮಾನ್ ಸ್ಟುಡಿಯೋ 10 ಎಕರೆ ಮಾರಾಟ ಆಗಿದ್ದರಲ್ಲಿ ಸರ್ಕಾರದ್ದೇ ಕೈವಾಡ: ಗೀತಾ
ಅಭಿಮಾನ್ ಸ್ಟುಡಿಯೋ 10 ಎಕರೆ ಮಾರಾಟ ಆಗಿದ್ದರಲ್ಲಿ ಸರ್ಕಾರದ್ದೇ ಕೈವಾಡ: ಗೀತಾ
EVM ಬದಲಿಗೆ ಬ್ಯಾಲೆಟ್ ಪೇಪರ್: ಚುನಾವಣಾ ಆಯುಕ್ತರು ಹೇಳಿದ್ದೇನು?
EVM ಬದಲಿಗೆ ಬ್ಯಾಲೆಟ್ ಪೇಪರ್: ಚುನಾವಣಾ ಆಯುಕ್ತರು ಹೇಳಿದ್ದೇನು?
ರಾಜಕೀಯ ನಿವೃತ್ತಿ ಬಗ್ಗೆ ವಿ ಸೋಮಣ್ಣ ಮತ್ತೆ ಸ್ಪಷ್ಟನೆ: ಹೇಳಿದ್ದೇನು ನೋಡಿ
ರಾಜಕೀಯ ನಿವೃತ್ತಿ ಬಗ್ಗೆ ವಿ ಸೋಮಣ್ಣ ಮತ್ತೆ ಸ್ಪಷ್ಟನೆ: ಹೇಳಿದ್ದೇನು ನೋಡಿ
ಉಚಿತವಾಗಿ ಊಟ ವಿತರಿಸುವಾಗ ದುಡ್ಡು ಕೊಟ್ಟು ಊಟ ಪಡೆದ ಸ್ವಾಭಿಮಾನಿ ಬಾಲಕ
ಉಚಿತವಾಗಿ ಊಟ ವಿತರಿಸುವಾಗ ದುಡ್ಡು ಕೊಟ್ಟು ಊಟ ಪಡೆದ ಸ್ವಾಭಿಮಾನಿ ಬಾಲಕ
ಪ್ರಿಯತಮನಿಗೋಸ್ಕರ ಮನೆ ಬಿಟ್ಟು ಓಡಿಹೋದ ಮೂರು ಮಕ್ಕಳ ತಾಯಿ: ಗೋಳಾಡಿದ ಪತಿ
ಪ್ರಿಯತಮನಿಗೋಸ್ಕರ ಮನೆ ಬಿಟ್ಟು ಓಡಿಹೋದ ಮೂರು ಮಕ್ಕಳ ತಾಯಿ: ಗೋಳಾಡಿದ ಪತಿ
ನಾಡೆಲ್ಲಾರಿಂದ ಸುಂದರ್ ಪಿಚ್ಚೈವರೆಗೆ ಟ್ರಂಪ್ ಔತಣ ಕೂಟದಲ್ಲಿ ಯಾರ್ಯಾರಿದ್ರು?
ನಾಡೆಲ್ಲಾರಿಂದ ಸುಂದರ್ ಪಿಚ್ಚೈವರೆಗೆ ಟ್ರಂಪ್ ಔತಣ ಕೂಟದಲ್ಲಿ ಯಾರ್ಯಾರಿದ್ರು?