
ದೇವನಹಳ್ಳಿ, ಆಗಸ್ಟ್ 26: ನಕಲಿ ಕೀ ಬಳಸಿ ಸುಮಾರು 32 ಬೈಕ್ಗಳನ್ನು ಕಳ್ಳತನ (theft) ಮಾಡಿದ್ದ ಖದೀಮನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಬೈಕ್ ಕದ್ದು ಪರಾರಿಯಾಗುತ್ತಿದ್ದ ಆಂದ್ರ ಮೂಲದ ಆನಂದ್ ಬಂಧಿತ ಆರೋಪಿ. ದೇವನಹಳ್ಳಿ (Devanahalli) ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ನಡೆಸಿ ಅರೆಸ್ಟ್ ಮಾಡಲಾಗಿದ್ದು, 22 ಸ್ಪ್ಲೆಂಡರ್ ಬೈಕ್, 10 ವಿವಿಧ ಬೈಕ್ಗಳನ್ನು ಸೀಜ್ ಮಾಡಲಾಗಿದೆ.
ಬಂಧಿತ ಆರೋಪಿ ಆನಂದ್, ದೇವನಹಳ್ಳಿ ಸೇರಿದಂತೆ ನಗರದಲ್ಲಿ ನಕಲಿ ಕೀ ಬಳಸಿ ಬೈಕ್ ಕಳ್ಳತನ ಮಾಡುತ್ತಿದ್ದ. ಕದ್ದ ಬೈಕ್ಗಳನ್ನು 10 ರಿಂದ 20 ಸಾವಿರ ರೂ ಮಾರುತ್ತಿದ್ದ. ಶೋಕಿ ಜೀವನ ನಡೆಸುತ್ತಿದ್ದ. ಈ ಹಿಂದೆಯೂ ಬೈಕ್ ಕದ್ದು ಜೈಲು ಸೇರಿದ್ದ. ಬಳಿಕ ಬೇಲ್ ಮೇಲೆ ಹೊರಬಂದು ಮತ್ತೆ ಕಳ್ಳತನಕ್ಕೆ ಇಳಿದ್ದಿದ್ದ. ಇದೀಗ ಮತ್ತೊಮ್ಮೆ ಲಾಕ್ ಆಗಿದ್ದಾನೆ.
ಬೇಗೂರು ಪೊಲೀಸರಿಂದ ಮನೆಕಳವು ಆರೋಪಿ ಬಂಧಿಸಿರುವಂತಹ ಘಟನೆ ನಡೆದಿದೆ. ಶಾಂತಕುಮಾರ್ ಅಲಿಯಾಸ್ ಶಾಂತ ಬಂಧಿತ ಆರೋಪಿ. ಓರ್ವ ನಾಪತ್ತೆ ಆಗಿದ್ದಾನೆ. 230 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದ. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಬೆಂಗಳೂರು: ಸಾಲ ಕೊಟ್ಟವರ ಮನೆಯಲ್ಲೇ ಕನ್ನ; ತಂಗಿ ಕೃತ್ಯಕ್ಕೆ ಅಣ್ಣ ಸಾಥ್, ಆರು ಜನರ ಬಂಧನ
ಬೀಗ ಹಾಕಿದ್ದ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು, ಕೆ.ಜಿ.ಎಫ್ನಿಂದ ಟ್ರೈನ್ನಲ್ಲಿ ಬಂದು ಕಳ್ಳತನ ಮಾಡುತ್ತಿದ್ದರು. ಸದ್ಯ ಶಾಂತ್ ಕುಮಾರ್ ಸ್ನೇಹಿತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆರೋಪಿಗಳ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಠಾಣೆ ಪೊಲೀಸರ ಕಾರ್ಯಾಚರಣೆ ನಡೆಸಿ ಇಬ್ಬರು ಬೈಕ್ ಕಳ್ಳರನ್ನು ಬಂಧಿಸಿದ್ದಾರೆ. ಹೊಸದುರ್ಗ ಠಾಣೆ ಸಿಪಿಐ ರಮೇಶ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದ್ದು, ಚಿತ್ರದುರ್ಗ ಮೂಲದ ದಾದಾಪೀರ್ ಮತ್ತು ನಬೀವುಲ್ಲಾ ಎಂಬುವವರನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತರಿಂದ 7ಲಕ್ಷ ರೂ. ಮೌಲ್ಯದ ಒಟ್ಟು 11ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ. ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.