ಸ್ಪೈಸ್​ ಜೆಟ್​ ಏರ್​ಲೈನ್ಸ್ ಸಿಬ್ಬಂದಿ ನಿರ್ಲಕ್ಷ್ಯ: ಕೆಂಪೇಗೌಡ ಏರ್​​ಪೋರ್ಟ್​​ನಲ್ಲೇ ಉಳಿದ 250 ಪ್ರಯಾಣಿಕರು

| Updated By: ಗಂಗಾಧರ​ ಬ. ಸಾಬೋಜಿ

Updated on: Dec 06, 2023 | 2:08 PM

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್​​ಪೋರ್ಟ್​ನಲ್ಲಿ ಸ್ಪೈಸ್​ ಜೆಟ್​ ಏರ್​ಲೈನ್ಸ್ ಸಿಬ್ಬಂದಿ ನಿರ್ಲಕ್ಷ್ಯದಿಂದ 8 ಗಂಟೆಗಳಿಂದ ಏರ್​​ಪೋರ್ಟ್​​ನಲ್ಲೇ 250 ಪ್ರಯಾಣಿಕರು ಉಳಿಯುವಂತಾಗಿದೆ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ಸಾವಿರಾರು ರೂ. ನೀಡಿ ಟಿಕೆಟ್ ಖರೀದಿಸಿದರೂ ಪ್ರಯಾಣ ಮಾಡಲು ಆಗುತ್ತಿಲ್ಲ ಎಂದು ಪ್ರತಿಭಟಿಸಿದ್ದಾರೆ.

ಸ್ಪೈಸ್​ ಜೆಟ್​ ಏರ್​ಲೈನ್ಸ್ ಸಿಬ್ಬಂದಿ ನಿರ್ಲಕ್ಷ್ಯ: ಕೆಂಪೇಗೌಡ ಏರ್​​ಪೋರ್ಟ್​​ನಲ್ಲೇ ಉಳಿದ 250 ಪ್ರಯಾಣಿಕರು
ಪ್ರಯಾಣಿಕರು ಮತ್ತು ಸಿಬ್ಬಂದಿ ಮಧ್ಯೆ ಗಲಾಟೆ
Follow us on

ಬೆಂಗಳೂರು ಗ್ರಾಮಾಂತರ, ಡಿಸೆಂಬರ್​​ 06: ಸ್ಪೈಸ್​ ಜೆಟ್​ ಏರ್​ಲೈನ್ಸ್ ಸಿಬ್ಬಂದಿ ನಿರ್ಲಕ್ಷ್ಯದಿಂದ ಕಳೆದ 8 ಗಂಟೆಗಳಿಂದ ಏರ್​​ಪೋರ್ಟ್​​ನಲ್ಲೇ 250 ಪ್ರಯಾಣಿಕರು ಉಳಿದಿರುವಂತಹ ಘಟನೆ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್​​ಪೋರ್ಟ್​ನಲ್ಲಿ (KIAL) ಕಂಡುಬಂದಿದೆ. ಸಾವಿರಾರು ರೂ. ನೀಡಿ ಟಿಕೆಟ್ ಖರೀದಿಸಿದರೂ ಪ್ರಯಾಣ ಮಾಡಲು ಆಗುತ್ತಿಲ್ಲ ಎಂದು ಏರ್​ಲೈನ್ಸ್​ ಸಿಬ್ಬಂದಿ ವಿರುದ್ಧ ಗೇಟ್ ನಂ.15ರಲ್ಲಿ ಪ್ರಯಾಣಿಕರು ಪ್ರತಿಭಟನೆ ಮಾಡಿದ್ದಾರೆ.

ಬೆಳಗ್ಗೆ 5 ಗಂಟೆಗೆ ಬೆಂಗಳೂರಿನಿಂದ ಮುಂಬೈಗೆ ವಿಮಾನ ತೆರಳಬೇಕಿತ್ತು. ಪ್ರಯಾಣಿಕರನ್ನ ಮೂರು ತಾಸು ವಿಮಾನದಲ್ಲಿ ಕೂರಿಸಿದ್ದ ಏರ್​ಲೈನ್ಸ್​ ಸಿಬ್ಬಂದಿ, ಬಳಿಕ ತಾಂತ್ರಿಕ ದೋಷ ಅಂತಾ ವಿಮಾನದಿಂದ ಕೆಳಗಡೆ ಇಳಿಸಿದ್ದಾರೆ.

ಇದನ್ನೂ ಓದಿ: ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಸಿಕ್ತು 4 ಕೋಟಿ ರೂ. ಮೌಲ್ಯದ ಚಿನ್ನ, ಇಂದೋರ್​ನಿಂದ ಬೆಂಗಳೂರಿಗೆ ಬಂದಿದ್ಹೇಗೆ ಗೊತ್ತಾ?

ಬೆಳಗ್ಗೆ 8 ಗಂಟೆ ನಂತರ 12 ಗಂಟೆಗೆ ವಿ‌ಮಾನ ಅಂತಾ ಕಾಯಿಸಿದ್ದ ಸಿಬ್ಬಂದಿ, ಆದರೆ 12 ಗಂಟೆ ನಂತರ 3 ಗಂಟೆಗೆ ಪ್ಲೈಟ್ ಅಂತಾ ಹೇಳಿದ್ದಾರೆ. ಸ್ಪೈಸ್​ ಜೆಟ್​ ಏರ್​ಲೈನ್ಸ್ ಸಿಬ್ಬಂದಿ ಹೇಳಿಕೆಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏರ್ಪೋಟ್​ನಲ್ಲಿ ಪ್ರಯಾಣಿಕರ ಧರಣಿ ಮುಂದುವರೆದಿದ್ದು, ರಾತ್ರಿ 8 ಗಂಟೆಗೆ ಪ್ಲೈಟ್ ಮುಂಬೈಗೆ ಹೊರಡುವುದಾಗಿ ಸಿಬ್ಬಂದಿ ಹೇಳಿದ್ದಾರೆ. ಟಿಕೆಟ್ ಹಣ ವಾಪಸ್ ನೀಡುವಂತೆ ಪ್ರಯಾಣಿಕರು ಒತ್ತಾಯಿಸಿದ್ದಾರೆ. ಇಲ್ಲ ಬೇರೆ ವಿಮಾನದಲ್ಲಿ ಕಳಿಸಿಕೊಡುವಂತೆ ಆಗ್ರಹಿಸಿದ್ದಾರೆ.

ಪ್ರಯಾಣಿಕರನ್ನು ಬಿಟ್ಟು ಹಾರಿದ ಗೋ ಫಸ್ಟ್ ವಿಮಾನ

ದೆಹಲಿಗೆ ಹೊರಟಿದ್ದ ಗೋ ಫಸ್ಟ್​ ಕಂಪನಿಯ ವಿಮಾನವು ಪ್ರಯಾಣಿಕರನ್ನು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಬಿಟ್ಟು ಹಾರಿರುವಂತಹ ಘಟನೆ ಇತ್ತೀಚೆಗೆ ನಡೆದಿತ್ತು. ಈ ಸಂಗತಿಯು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಈ ಕಂಪನಿಯ ಸಿಬ್ಬಂದಿ ಯಾವ ರೀತಿ ಕೆಲಸ ಮಾಡುತ್ತಿದ್ದಾರೆ? ಕೊನೆಯ ಕ್ಷಣದ ತಪಾಸಣೆ ಎಂಬುದು ಇರುವುದಿಲ್ಲವೇ? ತೂಕಡಿಸುತ್ತಾ ವಿಮಾನ ಹಾರಿಸುತ್ತಾರಾ ಎಂದೆಲ್ಲಾ ಪ್ರಯಾಣಿಕರು ಪ್ರಶ್ನಿಸಿದ್ದರು.

ಮಾ. 5ರಂದು ವಿಮಾನದಲ್ಲಿ ಸಿಗರೇಟ್ ಸೇದಿ ಆತಂಕ ಸೃಷ್ಟಿಸಿದ್ದ ಯುವತಿ

ಕೋಲ್ಕತ್ತಾದಿಂದ ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಪ್ರಿಯಾಂಕ ಎಂಬ ಯುವತಿ ಇಂಡಿಗೋ 6E716 ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿದ್ದಳು. ವಿಮಾನ ಬೆಂಗಳೂರಿಗೆ ಲ್ಯಾಂಡ್ ಆಗುವ ಅರ್ಧ ಗಂಟೆ ಮುನ್ನ ಸಿಗರೇಟ್ ಸೇದಿದ್ದಳು.

ಇದನ್ನೂ ಓದಿ: ಸ್ನೇಹಿತನಿಗೆ ಡ್ರಾಪ್ ಕೊಡಲು ನಕಲಿ ಟಿಕೆಟ್​​ ಬಳಕೆ: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಮಹಿಳೆ

ಶೌಚಾಲಯ ಬಾಗಿಲು ತೆಗಿಸಿದಾಗ ಡಸ್ಟ್ ಬಿನ್​ನಲ್ಲಿ ಸಿಗರೇಟ್ ತುಂಡು ಪತ್ತೆಯಾಗಿತ್ತು. ಸಿಗರೇಟ್ ಕಂಡು ತಕ್ಷಣ ಸಿಬ್ಬಂದಿ ಡಸ್ಟ್ ಬಿನ್​ಗೆ ನೀರು ಸುರಿದಿದ್ದರು. ಬಳಿಕ ಫ್ಲೈಟ್ ಲ್ಯಾಂಡ್ ಆಗುತ್ತಿದ್ದಂತೆ ಯುವತಿಯನ್ನು ವಶಕ್ಕೆ ಪಡೆಯಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:06 pm, Wed, 6 December 23