ಶಾರ್ಟ್ ಸರ್ಕ್ಯೂಟ್ ಆಗಿ ಆಸ್ಪತ್ರೆ ಮೇಲ್ಛಾವಣಿಯಲ್ಲಿ ಬೆಂಕಿ; ಆತಂಕದಲ್ಲೇ ಕಾಲ ಕಳೆಯುತ್ತಿರುವ ರೋಗಿ, ಸಿಬ್ಬಂದಿ

ಆರೋಗ್ಯ ಸಿಬ್ಬಂದಿಯ ಕಾಳಜಿಯಿಂದ ಭಾರಿ ಅನಾಹುತ ತಪ್ಪಿದೆ. ಮೇಲ್ಛಾವಣಿ ಸೂರುತ್ತಿರುವ ಹಿನ್ನೆಲೆ ನೀರಿನಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಳ್ತಿದ್ದಂತೆ ಸಿಬ್ಬಂದಿ ಪವರ್ ಕಟ್ ಮಾಡಿ ಭಾರಿ ಅನಾಹುತ ತಪ್ಪಿಸಿದ್ದಾರೆ. ರೋಗಿಗಳನ್ನು ಹೊಸ ಕಟ್ಟಡಕ್ಕೆ ಶಿಫ್ಟ್ ಮಾಡಲಾಗಿದೆ. ಆಸ್ಪತ್ರೆ ಹಳೆ ಕಟ್ಟಡ ಸಂಪೂರ್ಣ ಕತ್ತಲಾಗಿದೆ.

ಶಾರ್ಟ್ ಸರ್ಕ್ಯೂಟ್ ಆಗಿ ಆಸ್ಪತ್ರೆ ಮೇಲ್ಛಾವಣಿಯಲ್ಲಿ ಬೆಂಕಿ; ಆತಂಕದಲ್ಲೇ ಕಾಲ ಕಳೆಯುತ್ತಿರುವ ರೋಗಿ, ಸಿಬ್ಬಂದಿ
ಶಾರ್ಟ್ ಸರ್ಕ್ಯೂಟ್ ಆಗಿ ಆಸ್ಪತ್ರೆ ಮೇಲ್ಛಾವಣಿಯಲ್ಲಿ ಬೆಂಕಿ; ಆತಂಕದಲ್ಲೇ ಕಾಲ ಕಳೆಯುತ್ತಿರುವ ರೋಗಿ, ಸಿಬ್ಬಂದಿ
Follow us
TV9 Web
| Updated By: ಆಯೇಷಾ ಬಾನು

Updated on: Nov 18, 2021 | 7:25 PM

ದೇವನಹಳ್ಳಿ: ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಆಸ್ವತ್ರೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಕಟ್ಟಡದ ಮೇಲ್ಛಾವಣಿಯಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಸಾರ್ವಜನಿಕ ಆಸ್ವತ್ರೆಯಲ್ಲಿ ನಡೆದಿದೆ.

ಆರೋಗ್ಯ ಸಿಬ್ಬಂದಿಯ ಕಾಳಜಿಯಿಂದ ಭಾರಿ ಅನಾಹುತ ತಪ್ಪಿದೆ. ಮೇಲ್ಛಾವಣಿ ಸೂರುತ್ತಿರುವ ಹಿನ್ನೆಲೆ ನೀರಿನಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಳ್ತಿದ್ದಂತೆ ಸಿಬ್ಬಂದಿ ಪವರ್ ಕಟ್ ಮಾಡಿ ಭಾರಿ ಅನಾಹುತ ತಪ್ಪಿಸಿದ್ದಾರೆ. ರೋಗಿಗಳನ್ನು ಹೊಸ ಕಟ್ಟಡಕ್ಕೆ ಶಿಫ್ಟ್ ಮಾಡಲಾಗಿದೆ. ಆಸ್ಪತ್ರೆ ಹಳೆ ಕಟ್ಟಡ ಸಂಪೂರ್ಣ ಕತ್ತಲಾಗಿದೆ.

ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಪಟ್ಟಣದ ಸರ್ಕಾರಿ ಸಾರ್ವಜನಿಕರ ಆಸ್ವತ್ರೆಯ ಮೇಲ್ಛಾವಣಿಯಿಂದ ನೀರು ಬೀಳುತ್ತಿದ್ದು ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಇನ್ನು ಆಸ್ಪತ್ರೆ ನಿರಂತರವಾಗಿ ಸೂರುತ್ತಿರುವ ಕಾರಣ ಮೇಲ್ಛಾವಣಿ ಕುಸಿದು ಬೀಳುವ ಆತಂಕವೂ ಎದುರಾಗಿದ್ದು ಗ್ರೌಂಡಿಗ್ ಏನಾದ್ರು ಆದ್ರೆ ಯಾರು ಹೊಣೆ ಅನ್ನೂ ಆತಂಕ ಸಿಬ್ಬಂದಿಯಲ್ಲಿ ಮನೆ ಮಾಡಿದೆ. ಜತೆಗೆ ಆಸ್ವತ್ರೆಯ ಪಕ್ಕದಲ್ಲೇ ನೂತನವಾಗಿ ಎರಡು ಅಂತಸ್ಥಿನ ಆಸ್ವತ್ರೆಯನ್ನ ನಿರ್ಮಾಣ ಮಾಡಿದ್ದು ಕಳೆದ ಒಂದೂವರೆ ತಿಂಗಳಿಂದಷ್ಟೆ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಉದ್ಘಾಟನೆ ಮಾಡಿದ್ರು. ಆದ್ರೆ ಸಂಪೂರ್ಣ ಕಾಮಗಾರಿ ಮುಗಿಯದಿದ್ರು ತರಾತುರಿಯಲ್ಲಿ ಬಿಲ್ ಮಾಡಿಕೊಳ್ಳಲು ಕಟ್ಟಡ ಉದ್ಘಾಟನೆ ಮಾಡಿದ್ದು ಇಂದಿಗೂ ಕಾಮಗಾರಿ ನಡೆಯುತ್ತಲೆ ಇದೆ. ಸದ್ಯ ಹಳೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಹೊಸ ಕಟ್ಟಡಕ್ಕೆ ರೋಗಿಗಳನ್ನು ಶಿಫ್ಟ್ ಮಾಡಲಾಗಿದೆ. ಕಳೆದೊಂದು ವಾರದಿಂದ ಹಳೆ ಕಟ್ಟಡದಲ್ಲಿ ಸಮಸ್ಯೆ ಇದ್ದರೂ ಯಾವ ಸಚಿವರು, ಅಧಿಕಾರಿಗಳು ಇಲ್ಲಿಗೆ ಬಂದು ಭೇಟಿ ನೀಡಲ್ಲ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಲಕ್ಷಲಕ್ಷ ಹಣ ನೀಡಿ ಮೋಸ ಹೋದ ಖ್ಯಾತ ನಟಿ; ಕೂಡಿಟ್ಟ ಹಣವೆಲ್ಲವೂ ವಂಚಕರ ಪಾಲು