Modi Canteen: ಆನೇಕಲ್ ಅಸೆಂಬ್ಲಿ ಅಭ್ಯರ್ಥಿ ಎಂದೇ ಬಿಂಬಿತರಾದ ಮಾಜಿ ಐಎಎಸ್ ಶಿವರಾಮ್ ಕ್ಷೇತ್ರದಲ್ಲಿ ‘ಮೋದಿ ಕ್ಯಾಂಟಿನ್’ ತೆರೆದರು!
K. Shivram: 2013ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದ ಕೆ ಶಿವರಾಮ್, ಆರು ತಿಂಗಳಿಗೇ ಕಾಂಗ್ರೆಸ್ ಪಕ್ಷಕ್ಕೆ ಗುಡ್ಬೈ ಹೇಳಿ, ಜೆಡಿಎಸ್ ಸೇರ್ಪಡೆಯಾದರು. 2014ರಲ್ಲಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ, ಪರಾಭವಗೊಂಡಿದ್ದರು. ಮುಂದೆ 2016ರಲ್ಲಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ಮಾಜಿ ಐಎಎಸ್ ಅಧಿಕಾರಿ, ಸಿನಿ ನಟ ಮತ್ತು ಹಾಲಿ ರಾಜಕಾರಣಿ ಶಿವರಾಮು ಕೆ (ಶಿವರಾಮು ಕೆಂಪಯ್ಯ- ಕೆ ಶಿವರಾಮ್) ಅವರು ಸಕ್ರಿಯ ರಾಜಕಾರಣದಲ್ಲಿ ತೊಡಗಿದ್ದಾರೆ. ಮೂಲತಃ ರಾಮನಗರ ಜಿಲ್ಲೆಯ ಕೆ ಶಿವರಾಂ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಸಜ್ಜಾಗಿದ್ದಾರೆ. ಆಡಳಿತಾರೂಢ ಬಿಜೆಪಿ ಪಕ್ಷದ (BJP) ಅಭ್ಯರ್ಥಿಯಾಗಿ ಅವರು ಕಣಕ್ಕಿಳಿಯುವ ಸಾಧ್ಯತೆಯಿದೆ. ಈ ಬಗ್ಗೆ ಪಕ್ಷವಿನ್ನೂ ಅಧಿಕೃತ ಘೋಷಣೆ ಮಾಡಿಲ್ಲವಾದರೂ ಕೆ ಶಿವರಾಮ್ (K. Shivram) ಕ್ಷೇತ್ರದಲ್ಲಿ ಅದಾಗಲೇ ಸಕ್ರಿಯರಾಗಿದ್ದಾರೆ. ಬೆಂಗಳೂರು ವಿವಿ ಪುರಂ ಸಂಜೆ ಕಾಲೇಜಿನಲ್ಲಿ ಬಿಎ ಪದವಿ, ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಎಂಎ ಸ್ನಾತಕೋತ್ತರ ಪದವಿ ಗಳಿಸಿರುವ ಕೆ ಶಿವರಾಮ್, ಕನ್ನಡ ಭಾಷೆಯಲ್ಲಿ IAS Exam ಬರೆದು, ಆಯ್ಕೆಯಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.
ಇತ್ತೀಚೆಗೆ ಒಂದು ಹೆಜ್ಜೆ ಮುಂದೆ ಹೋಗಿರುವ ಕೆ ಶಿವರಾಮ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆಸರಿನಲ್ಲಿ ‘ಮೋದಿ ಕ್ಯಾಂಟಿನ್’ ಆರಂಭಿಸಿದ್ದಾರೆ. ಇದು ಕ್ಷೇತ್ರದ (Anekal Assembly) ಬಡ ಹಾಗೂ ಮಧ್ಯಮ ಕಾರ್ಮಿಕರು, ಜನಸಾಮಾನ್ಯರು, ರೈತರು ರಿಕ್ಷಾ ಡ್ರೈವರ್, ದಿನಗೂಲಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳ ಸೇವೆಗಾಗಿ ಮೀಸಲಾಗಿದೆ. ಆನೇಕಲ್ ತಾಲೂಕು ಕಚೇರಿ ಬಳಿ ಈ ಕ್ಯಾಂಟಿನ್ ಸೇವೆ ಒದಗಿಸಲಿದೆ.
ಮಾಜಿ ಐಎಎಸ್ ಕೆ ಶಿವರಾಮ್ ಅವರ ಹೊಸ ಪ್ರಯತ್ನ ಕಂಡು ಸ್ಥಳೀಯವಾಗಿ ಜನ ಅಮ್ಮಾ ಕ್ಯಾಂಟಿನ್, ಇಂದಿರಾ ಕ್ಯಾಂಟಿನ್, ಅಪ್ಪಾಜಿ ಕ್ಯಾಂಟಿನ್ ಆಯ್ತು ಇದೀಗ ಮೋದಿ ಕ್ಯಾಂಟಿನ್ (Modi Canteen) ಚಾಲ್ತಿಗೆ ಬಂದಿದೆ. ಮುಂದೆ ಯಾರ ಹೆಸರಿನಲ್ಲಿ ಏನು ಬರಲಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
1986 ನೇ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದ ಕೆ ಶಿವರಾಮ್ 10 ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ನಿವೃತ್ತಿ ನಂತರ 2013ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದ ಕೆ ಶಿವರಾಮ್, ಆರು ತಿಂಗಳಿಗೇ ಕಾಂಗ್ರೆಸ್ ಪಕ್ಷಕ್ಕೆ ಗುಡ್ಬೈ ಹೇಳಿ, ಜೆಡಿಎಸ್ ಸೇರ್ಪಡೆಯಾದರು. 2014ರಲ್ಲಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ, ಪರಾಭವಗೊಂಡಿದ್ದರು. ಮುಂದೆ 2016ರಲ್ಲಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
Amma canteenIndira canteenAppaji canteenNow, Modi Canteen
Next ? https://t.co/KCXt2tABoo
— Ashwini M Sripad/ಅಶ್ವಿನಿ ಎಂ ಶ್ರೀಪಾದ್?? (@AshwiniMS_TNIE) May 8, 2022
ಹೆಚ್ಚಿನ ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ