ಒಂದೇ ಕಾರಿನಲ್ಲಿ ಲಾಂಗ್ ಡ್ರೈವ್ ಹೋಗಿದ್ದ 6 ವಿದ್ಯಾರ್ಥಿಗಳು: ಹೊಸಕೋಟೆ ಬಳಿ ಹೆದ್ದಾರಿಯಲ್ಲಿ ಕಾರು ಪಲ್ಟಿ, 3 ಯುವಕರು, 1 ಯುವತಿ ಸಾವು
ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿ ಪಕ್ಕದ ರಸ್ತೆಗೆ ಹಾರಿ ಲಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮೃತಪಟ್ಟಿದ್ದು ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ದೇವನಹಳ್ಳಿ; ಬೆಳ್ಳಂ ಬೆಳಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಅಟ್ಟೂರು ಗೇಟ್ ಬಳಿ ರಾ.ಹೆ. 75ರಲ್ಲಿ ಭೀಕರ ಅಪಘಾತವೊಂದು(Road Accident) ಸಂಭವಿಸಿದೆ. ಡಿವೈಡರ್ ದಾಟಿ ಲಾರಿಗೆ ಕಾರು ಡಿಕ್ಕಿಯಾಗಿ ನಾಲ್ವರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿ ಪಕ್ಕದ ರಸ್ತೆಗೆ ಹಾರಿ ಲಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮೃತಪಟ್ಟಿದ್ದು ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ವೈಷ್ಣವಿ, ಭರತ್, ಸಿರಿಲ್, ವೆಂಕಟ್ ಮೃತ ದುರ್ದೈವಿಗಳು. ಮೃತರೆಲ್ಲರೂ ಗಾರ್ಡನ್ ಸಿಟಿ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಸಿರಿಕೃಷ್ಣ, ಅಂಕಿತರೆಡ್ಡಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಕೆಆರ್ ಪುರಂನ ಗಾರ್ಡನ್ ಸಿಟಿ ಕಾಲೇಜಿನ ಆರು ಜನ ವಿದ್ಯಾರ್ಥಿಗಳು ಕೋಲಾರದ ನರಸಾಪುರ ಬಳಿಯಿರೂ ಕೆಫೆ ಕಾಫಿ ಡೇ ಗೆ ಲಾಂಗ್ ಡ್ರೈವ್ ಹೋಗಿದ್ದು ತಮಿಳುನಾಡು ನೋಂದಣಿಯ TN-77-P-4512 ಸ್ವಿಫ್ಟ್ ಕಾರಿನಲ್ಲಿ ಕೋಲಾರದ ಕಡೆಯಿಂದ ಬೆಂಗಳೂರು ಕಡೆಗೆ ವಾಪಸ್ಸಾಗ್ತಿದ್ರು.
ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಮೊದಲಿಗೆ ರಸ್ತೆ ಮಧ್ಯೆಯ ಡಿವೈಡರ್ ಗೆ ಡಿಕ್ಕಿ ಹೊಡೆದು ಮೇಲಕ್ಕೆ ಹಾರಿದೆ. ನಂತರ ನೂರು ಮೀಟರ್ಗೂ ಅಧಿಕ ದೂರ ಹೆದ್ದಾರಿಯಲ್ಲೇ ಪಲ್ಟಿ ಹೊಡೆದು ಬೆಂಗಳೂರು ಕಡೆಯಿಂದ ಕೋಲಾರದ ಕಡೆಗೆ ಹೋಗ್ತಿದ್ದ AP-07-TH-6898 ಸಂಖ್ಯೆಯ ಲಾರಿಗೆ ಡಿಕ್ಕಿ ಹೊಡೆದು ನಂತರ ಹೆದ್ದಾರಿ ಬದಿಯ ಹಳ್ಳಕ್ಕೆ ಬಿದ್ದಿದೆ. ಈ ಪರಿಣಾಮ ಕಾರು ಸಂಪೂರ್ಣ ನಜ್ಜು ಗುಜ್ಜಾಗಿ ಜಖಂಗೊಂಡಿದ್ದು ಕಾರಿನಲ್ಲಿದ್ದ ವೆಂಕಟ್. ಸಿರಿಲ್. ವೈಷ್ಣವಿ.ಭರತ್ ಎಂಬುವರು ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನೂ ಮತ್ತಿಬ್ಬರು ವಿದ್ಯಾರ್ಥಿಗಳಾದ ಅಂಕಿರೆಡ್ಡಿ ಮುತ್ತು ಕೃಷ್ಣ ಶ್ರೀ ಎಂಬುವರಿಗೆ ಗಂಭೀರ ಗಾಯವಾಗಿದ್ದು ಗಾಯಾಳುಗಳನ್ನು ಹೊಸಕೋಟೆಯ ಖಾಸಗಿ ಆಸ್ಪತ್ರೆಗೆ ಕಳಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಕಾರಿನಲ್ಲಿದ್ದ ನಾಲ್ಕು ಜನ ಹುಡುಗರು ಬೆಂಗಳೂರಿನ ಗಾರ್ಡನ್ ಸಿಟಿ ಕಾಲೇಜಿನ ವಿದ್ಯಾರ್ಥಿಗಳೆಂದು ಇಬ್ಬರೂ ಹುಡುಗಿಯರು ಬೆಂಗಳೂರು ವಿಲ್ಸನ್ ಗಾರ್ಡನ್ ನಿವಾಸಿಗಳೆನ್ನಲಾಗಿದ್ದು ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಬಸವೇಶ್ವರನಗರ, ಉತ್ತರಹಳ್ಳಿ ಸೇರಿ ಹಲವೆಡೆ ಇಂದು ಪವರ್ ಕಟ್
Published On - 7:24 am, Wed, 16 February 22