ಎರಡು ವರ್ಷದಿಂದ ಕೊರೊನಾ ಕರಿನೆರಳು; ಗಣೇಶ ಮೂರ್ತಿ ತಯಾರಕರು ಕಂಗಾಲು

| Updated By: guruganesh bhat

Updated on: Aug 24, 2021 | 2:30 PM

ಸಾವಿರಾರು ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆಯಿಡಲು ಕಲರ್ ಪುಲ್ ಬಣ್ಣಗಳೊಂದಿಗೆ ಸಿದ್ಧವಾಗಿದ್ದರೂ, ಹೊರಗಡೆ ಬರಲಾಗದೆ ಕುಳಿತ ಜಾಗದಲ್ಲೇ ಉಳಿದುಕೊಂಡಿದೆ. ಇದರಿಂದ ಗಣೇಶ ತಯಾರಿಕೆ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ಎರಡು ವರ್ಷದಿಂದ ಕೊರೊನಾ ಕರಿನೆರಳು; ಗಣೇಶ ಮೂರ್ತಿ ತಯಾರಕರು ಕಂಗಾಲು
ಸಾಂದರ್ಭಿಕ ಚಿತ್ರ
Follow us on

ದೇವನಹಳ್ಳಿ: ಕಳೆದ ಎರಡು ವರ್ಷದಿಂದ ಮಹಾಮಾರಿ ಕೊರೊನಾ (Coronavirus) ಅದೇಷ್ಟೋ ಸಣ್ಣ ಉದ್ದಿಮೆಗಳಿಗೆ ಭಾರಿ ಹೊಡೆತ ಕೊಟ್ಟಿದೆ. ಇನ್ನೆನೂ ಕೊರೊನಾ ಕಡಿಮೆಯಾಗಿ ಆರ್ಥಿಕವಾಗಿ ಸುಧಾರಿಸಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ಕೊರೊನಾ ಮೂರನೇ ಅಲೆ (Coronavirus 3rd Wave) ಬಂದು ಅಪ್ಪಳಿಸಿದೆ. ಮೂರನೇ ಅಲೆಯನ್ನ ನಿಯಂತ್ರಣ ಮಾಡಲು ಸರ್ಕಾರ ಈ ಬಾರಿ ತಂದಿರುವ ಮಾರ್ಗಸೂಚಿ ಗಣೇಶ ತಯಾರಿಕಾ ಕುಟುಂಬಗಳಿಗೆ ಆತಂಕ ತಂದೊಡ್ಡಿದೆ.

ಒಂದು ಕಡೆ ವ್ಯಾಪಾರವಾಗದೆ ಕಳೆದೊಂದು ವರ್ಷದಿಂದ ಬೃಹತ್ ಗಣೇಶ ಮೂರ್ತಿಗಳು ಹಾಗೆ ಉಳಿದಿದ್ದರೆ, ಮತ್ತೊಂದೆಡೆ ಕೊರೊನಾ ಮೂರನೇ ಅಲೆಯ ಆತಂಕದ ನಡುವೆ ಈ ಭಾರಿಯಾದರು ಒಂದಷ್ಟು ಹಣ ಸಿಗುತ್ತೆ, ಸಂಕಷ್ಟಗಳಿಂದ ಪಾರಾಗೋಣ ಅಂತ ಚಿಕ್ಕ ಚಿಕ್ಕ ಗಣೇಶ ಮೂರ್ತಿಗಳನ್ನ ಸಿದ್ಧಪಡಿಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ರಾಜಗೋಪಾಲ ಎನ್ನುವವರ ಕುಟುಂಬ ಕಳೆದ 50 ವರ್ಷದಿಂದ ಗಣೇಶ ಮೂರ್ತಿ ತಯಾರಿಕೆಯನ್ನೆ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಜತೆಗೆ ಇಲ್ಲಿ ತಯಾರಿಕೆ ಮಾಡುವ ಗಣೇಶ ಮೂರ್ತಿಗಳಿಗೆ ಮಂಡ್ಯ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಿಂದ ಬೇಡಿಕೆಯಿದ್ದು, ಪ್ರತಿವರ್ಷ ಸಾಕಷ್ಟು ಜನ ಇಲ್ಲಿಗೆ ಬಂದು ಗಣೇಶ ಮೂರ್ತಿಗಳನ್ನ ಕೊಂಡುಕೊಳ್ಳುತ್ತಾರೆ. ಆದರೆ ಕಳೆದ ವರ್ಷದಿಂದ ಕೊರೊನಾ ಕರಿನೆರಳು ಈ ಕುಟುಂಬವನ್ನ ಭಾಧಿಸುತ್ತಿದೆ.

ಸಾವಿರಾರು ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆಯಿಡಲು ಕಲರ್ ಪುಲ್ ಬಣ್ಣಗಳೊಂದಿಗೆ ಸಿದ್ಧವಾಗಿದ್ದರೂ ಹೊರಗಡೆ ಬರಲಾಗದೆ ಕುಳಿತ ಜಾಗದಲ್ಲೇ ಉಳಿದುಕೊಂಡಿದೆ. ಇದರಿಂದ ಗಣೇಶ ತಯಾರಿಕೆ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈ ಬಾರಿ ಬೃಹತ್ ಗಣೇಶ ಮೂರ್ತಿಗಳನ್ನು ಕೂರಿಸಲು ಅನುಮತಿಯನ್ನ ನಿರಾಕರಿಸಿದ್ದು, ಸಣ್ಣ ಗಣೇಶ ಮೂರ್ತಿಗಳನ್ನ ಮನೆಯಲ್ಲಿ ಕೂರಿಸಿ ಸರಳವಾಗಿ ಹಬ್ಬ ಆಚರಣೆ ಮಾಡಿ ಅಂತಾ ಸರ್ಕಾರ ತಿಳಿಸಿದೆ. ಈ ನಿರ್ಧಾರ ಗಣೇಶ ತಯಾರಿಕೆ ಮಾಡುವವರಿಗೆ ಆತಂಕ ಮನೆ ಮಾಡಿದೆ.

ಕಳೆದ ಬಾರಿ ಎರಡು ಸಾವಿರ ಗಣೇಶ ಮೂರ್ತಿ ಮಾತ್ರ ವ್ಯಾಪಾರವಾಗಿ, ಐದು ಸಾವಿರ ಗಣೇಶ ಮೂರ್ತಿಗಳು ಉಳಿದಿದ್ದವು. ಈ ಬಾರಿ ನಿಯಮಗಳನ್ನ ಸ್ವಲ್ಪ ಬದಲು ಮಾಡಿದರೆ ನಾವು ಬದುಕುತ್ತೇವೆ ಅಂತಾ ಗಣೇಶ ತಯಾರಿಕಾ ಕುಟುಂಬಗಳು ಅಳಲನ್ನ ತೋಡಿಕೊಂಡಿವೆ.

ಇದನ್ನೂ ಓದಿ

Kalyan Singh: ಅಯೋಧ್ಯೆ ರಾಮ ಮಂದಿರದ ರಸ್ತೆಗೆ ಕಲ್ಯಾಣ್ ಸಿಂಗ್ ಹೆಸರು; ರಾಮ ಭಕ್ತನಿಗೆ ಸರ್ಕಾರಿ ಗೌರವ

ಶನಿವಾರ, ರವಿವಾರ ಅಷ್ಟೇ ಕೊರೊನಾ ಬರುತ್ತಾ? ಗಣೇಶೋತ್ಸವ ಆಚರಿಸುವವರು ಅಂಜಬೇಡಿ; ವೈರಲ್ ಆಯ್ತು ಯತ್ನಾಳ್ ಹೇಳಿಕೆ

(Ganesh idol makers are worried about the guidelines published by Karnataka government)

Published On - 2:28 pm, Tue, 24 August 21