ಆನೇಕಲ್: ಸೂಟ್​ಕೇಸ್​ನಲ್ಲಿ ಅಪರಿಚಿತ ಬಾಲಕಿಯ ಶವ ಪತ್ತೆ

ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿ ಭೀಕರ ಘಟನೆ ನಡೆದಿದೆ. ಹಳೇ ಚಂದಾಪುರ ರೈಲ್ವೆ ಸೇತುವೆಯ ಬಳಿ ಸೂಟ್‌ಕೇಸ್‌ನಲ್ಲಿ ಸುಮಾರು 10 ವರ್ಷದ ಬಾಲಕಿಯ ಶವ ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಇನ್ನೊಂದು ಘಟನೆಯಲ್ಲಿ, ನೆಲಮಂಗಲದಲ್ಲಿ ಕಸದ ರಾಶಿಯಲ್ಲಿ ನವಜಾತ ಶಿಶುವನ್ನು ಪತ್ತೆಯಾಗಿದೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆ ಸಂಬಂಧ ತನಿಖೆ ನಡೆಯುತ್ತಿದೆ.

ಆನೇಕಲ್: ಸೂಟ್​ಕೇಸ್​ನಲ್ಲಿ ಅಪರಿಚಿತ ಬಾಲಕಿಯ ಶವ ಪತ್ತೆ
ಸೂಟ್​ಕೇಸ್​ನಲ್ಲಿ ಬಾಲಕಿ ಶವ ಪತ್ತೆ
Edited By:

Updated on: May 21, 2025 | 4:41 PM

ಆನೇಕಲ್, ಮೇ 21: ಬೆಂಗಳೂರು (Bengaluru) ನಗರ ಜಿಲ್ಲೆಯ ಆನೇಕಲ್ (Anekal) ತಾಲೂಕಿನ ಹಳೇ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಸೂಟ್​ಕೇಸ್​ನಲ್ಲಿ ಅಪರಿಚಿತ ಬಾಲಕಿಯ ಶವ ಪತ್ತೆಯಾಗಿದೆ. ಹೊಸೂರು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ರೈಲ್ವೆ ಬ್ರಿಡ್ಜ್ ಬಳಿ ಸುಮಾರು 10 ವರ್ಷದ ಬಾಲಕಿಯ ಮೃತದೇಹವಿದ್ದ ಸೂಟ್​ಕೇಸ್​ ಪತ್ತೆಯಾಗಿದೆ. ಸ್ಥಳಕ್ಕೆ ಸೂರ್ಯನಗರ ಠಾಣೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದರು. ಬಾಲಕಿ ಮೃತಪಟ್ಟ ಬಳಿಕ ಇಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ

ಕಸದ ರಾಶಿ ಮೇಲೆ ಸಿಕ್ಕ ನವಜಾತ ಶಿಶು

ನೆಲಮಂಗಲ: ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕಸದ ರಾಶಿ ಮೇಲೆ ನವಜಾತ ಶಿಶುವೊಂದು ಪತ್ತೆಯಾಗಿದೆ. ಯಾರೋ ಮಾದನಾಯಕನಹಳ್ಳಿ ರಸ್ತೆಪಕ್ಕದಲ್ಲಿನ ಕಸದ ರಾಶಿ ಮೇಲೆ ನಜಾತ ಶಿಶುವನ್ನು ಬಿಸಾಡಿ ತೆರಳಿದ್ದಾರೆ. ಮಗು ಅಳುತ್ತಿದ್ದಿದ್ದನ್ನ ಗಮನಿಸಿದ ಸ್ಥಳೀಯರು ಮಾದನಾಯಕನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಇನ್ಸ್ಪೆಕ್ಟರ್ ಮುರುಳಿ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿ, ಮಗುವನ್ನ ರಕ್ಷಿಸಿ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲೊಬ್ಬ ಆಧುನಿಕ ರಾಬಿನ್ ಹುಡ್: ಕಳ್ಳತನ ಮಾಡಿ 20 ಮಕ್ಕಳ ಶಾಲಾ, ಕಾಲೇಜು ಫೀಸ್ ಕಟ್ಟಿದ್ದ ಆರೋಪಿ

ಇದನ್ನೂ ಓದಿ
ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಪ್ರಕರಣದ ಎ3 ಪೊಲೀಸಪ್ಪನ ಮಗ ಪರಾರಿ
ಪತಿಯನ್ನೇ ಕೊಂದು ಪಕ್ಕದ ಮನೆಯವನ ಮೇಲೆ ಆರೋಪ ಹಾಕಿದ್ದ ಮಹಿಳೆ ಅರೆಸ್ಟ್
ಮಹಿಳೆಯ ಪ್ರೇಮಿಯಿಂದಲೇ ಆಕೆಯ 2 ವರ್ಷದ ಮಗು ಮೇಲೆ ಅತ್ಯಾಚಾರ, ಕೊಲೆ
ಅನಾಥವಾಗಿ ಬಿದ್ದಿದ್ದ ಮಗುವನ್ನು ಸಾಕಿದ ಮಹಿಳೆ ಆ ಮಗಳಿಂದಲೇ ಕೊಲೆಯಾದ ಕತೆ!

ಆಹಾರ ಇಲ್ಲದೆ ನರಳಾಡುತ್ತಿದ್ದ ಮಗುವಿಗೆ ಆಸ್ಪತ್ರೆಯಲ್ಲಿ ಆರೈಕೆ ಮಾಡಲಾಗುತ್ತಿದೆ. ಪೊಲೀಸರ ಸಮಯ ಪ್ರಜ್ಞೆ ಯಿಂದ ನವಜಾತ ಶಿಶು ಬದುಕಿದೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವಜಾತ ಶಿಶುವನ್ನು ಬಿಸಾಡಿದ್ದವರ ವಿರುದ್ಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ