ಬೆಂಗಳೂರು ಗ್ರಾಮಾಂತರ: ಇತ್ತೀಚೆಗೆ ಸೈಬರ್ ಕ್ರೈಂ(Cyber Crime) ಬಗ್ಗೆ ಹೆಚ್ಚಾಗಿ ವರದಿಯಾಗುತ್ತಿದೆ. ಅದರಂತೆ ಇದೀಗ ಆನ್ಲೈನ್ ಚೋರರು ಆನೇಕಲ್(Anekal) ಉಪವಿಭಾಗದ ಅತ್ತಿಬೆಲೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೆ. ವಿಶ್ವನಾಥ್ ಹೆಸರಿನಲ್ಲಿ ಫೇಸ್ಬುಕ್ ಫೇಕ್ ಅಕೌಂಟ್ ಕ್ರಿಯೆಟ್ ಮಾಡಿ ಹಣ ವಸೂಲಿಗೆ ಯತ್ನ ಮಾಡಿದ ಘಟನೆ ನಡೆದಿದೆ. ಹೌದು ಪೊಲೀಸರ ಅಕೌಂಟ್ ಕೂಡ ಬಿಡದ ಹ್ಯಾಕರ್ಸ್ಗಳು, ಆನ್ಲೈನ್ ಮೂಲಕ ಹಣ ಪೀಕಲು ಪ್ಲಾನ್ ಮಾಡಿದ್ದಾರೆ. ಇನ್ನು ಈ ಕುರಿತು ತಿಳಿಯುತ್ತಿದ್ದಂತೆ ಇನ್ಸ್‌ಪೆಕ್ಟರ್ ಸೈಬರ್ ಕ್ರೈಂ ಮೂಲಕ ದೂರು ನೀಡಲು ಮುಂದಾಗಿದ್ದಾರೆ.
ಚಾಮರಾಜನಗರ: ಸೈಬರ್ ಚೋರರ ಚಿತ್ತ ಇದೀಗ ಚಾಮರಾಜನಗರ ಜಿಲ್ಲೆಯತ್ತ ಬಿದ್ದಿದೆ. ಕಳೆದ 7 ತಿಂಗಳಲ್ಲಿ ಬರೊಬ್ಬರಿ ಬರೋಬ್ಬರಿ 29 ಎಫ್.ಐ.ಆರ್ ದಾಖಲಾಗಿದೆ. ಸೋಶಿಯಲ್ ಮಿಡಿಯಾದಲ್ಲಿ ಹೆಚ್ಚು ಆಕ್ಟೀವ್ ಆಗಿರುವವರನ್ನೇ ಸೈಬರ್ ಚೋರರು ಮೇನ್ ಟಾರ್ಗೆಟ್ ಮಾಡುತ್ತಿದ್ದಾರೆ. ಫಾರಿನ್ ಗಿಫ್ಟ್ ಆಮೀಶವೊಡ್ಡಿ, 50 ಪರ್ಸೆಂಟ್ ಆಫರ್ ನೀಡುವುದಾಗಿ ಹೇಳಿ, ಲಕ್ಷ ಲಕ್ಷ ಹಣ ಪೀಕಿದ್ದಾರೆ.
ಇದನ್ನೂ ಓದಿ:ಸೈಬರ್ ಕ್ರೈಂ ಪ್ರಕರಣ ತಡೆಗಟ್ಟಲು ಪ್ರತ್ಯೇಕ CEN ಘಟಕಗಳ ಆರಂಭ
ಇನ್ನು ಸೈಬರ್ ಕ್ರೈಂಗಳಲ್ಲಿ ಹೆಚ್ಚಾಗಿ ಯುವತಿಯರೇ ವಂಚನೆಗೊಳಗಾಗುತ್ತಿದ್ದು, ಈ ಹಿನ್ನಲೆ ವಂಚನೆಗೆ ಒಳಗಾದವರು ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಸೂಚನೆ ನೀಡಿದ್ದಾರೆ. ಜೊತೆಗೆ ಘಟನೆ ನಡೆದ 2 ಗಂಟೆಯೊಳಗೆ ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಲು ಸೂಚಿಸಿದ್ದಾರೆ. ಇನ್ನು ಸೈಬರ್ ಚೋರರಿಗೆ ಕಡಿವಾಣ ಹಾಕಲು ಚಿಂತನೆ ನಡೆಸಿರುವ ಪೊಲೀಸ್ ಇಲಾಖೆ, ಓಟಿಪಿ ಹಾಗೂ ಅನಾವಶ್ಯಕ ಲಿಂಕ್ ಬಗ್ಗೆ ಎಚ್ಚರದಿಂದ ಇರಬೇಕು. ಮುಂಬರುವ ದಿನಗಳಲ್ಲಿ ಪ್ರತಿ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಭೆ ನಡೆಸಿ ಸೈಬರ್ ವಂಚನೆ ಕುರಿತು ಸೂಕ್ತ ಮಾಹಿತಿಯನ್ನ ನೀಡಲು ಚಿಂತನೆ ನಡೆಸಿರುವುದಾಗಿ ಹೇಳಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ