ದೇವನಹಳ್ಳಿ: ಹಿರಾನಂದನಿ ವಿಲ್ಲಾಗೆ ನುಗ್ಗಿಬಂದ ನೀರು, ಹಿರಾನಂದನಿ ವಿರುದ್ಧ ಗ್ರಾಮಸ್ಥರ ಆಕ್ರೋಶ, ಸರ್ವೆ ಅಧಿಕಾರಿಗಳ ಭೇಟಿ
ಪ್ರಸನ್ನಹಳ್ಳಿ ಗ್ರಾಮಸ್ಥರು ಈ ಬಾರಿ ವಿಲ್ಲಾ ಅಸೋಸಿಯೇಷನ್ ವಿರುದ್ಧ ಆಕ್ರೋಶಗೊಂಡಿದ್ದು, ಈಗಾಗಲೇ ಇದ್ದ ಗ್ರಾಮದ ರಸ್ತೆಯನ್ನು ಮುಚ್ಚಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ವಿಲ್ಲಾ ವಿರುದ್ಧ ಆರೋಪ ಮಾಡಿದ್ದಾರೆ. ಇದೀಗ ವಿಲ್ಲಾದಲ್ಲಿ ಮಳೆ ನೀರು ನಿಂತ ಪರಿಣಾಮ ಗೇಟ್ ಒಪನ್ ಮಾಡಿ, ನೀರು ಹೊರಬಿಡುತ್ತಿದ್ದಾರೆ. ಇಷ್ಟು ದಿನ ಇಲ್ಲದ ಗೇಟ್ ಇದೀಗ ಒಪನ್ ಮಾಡಿರುವುದಕ್ಕೆ ಮತ್ತು ಅದರಿಂದ ನೀರು ನುಗ್ಗುತ್ತಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವನಹಳ್ಳಿ ತಾಲೂಕಿನ ವಿವಿಧ ಕೆರೆಗಳಿಂದ ಕೋಡಿ ಹರಿದು ನೀರು ಭಾರಿ ಪ್ರಮಾಣದಲ್ಲಿ ಹಿರಾನಂದನಿ ವಿಲ್ಲಾ ಬಂಗಲೆಯತ್ತ ಹರಿದುಬರುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಅವಾಂತರ ಸೃಷ್ಟಿಸಿದೆ. ನೀರಿನ ಪ್ರಮಾಣಕ್ಕೆ ಸರಿಸಮವಾಗಿ ರಾಜಕಾಲುವೆ ಇಲ್ಲದೆ (raja kaluve encroachment) ಅವಾಂತರ ಸೃಷ್ಟಿಯಾಗಿದೆ. ನೀರು ಹೊರ ಹಾಕಲು ಜೆಸಿಬಿ ವಾಹನಗಳನ್ನು ಬಳಸಲಾಗಿದೆ. ಈ ಮಧ್ಯೆ, ರಾಜಕಾಲುವೆ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿರುವ ಸುತ್ತಮುತ್ತಲ ಗ್ರಾಮಸ್ಥರು ಹಿರಾನಂದನಿ ವಿಲ್ಲಾ (Hiranandani Villas) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಸನ್ನಹಳ್ಳಿ ಗ್ರಾಮಸ್ಥರು ವಿಲ್ಲಾ ಅಸೋಸಿಯೇಷನ್ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಈ ಬೆಳವಣಿಗೆಗಳ ಸಮ್ಮುಖದಲ್ಲಿ ಹಿರಾನಂದನಿ ವಿಲ್ಲಾ ಬಳಿ ಪುರಸಭೆ ಮತ್ತು ಸರ್ವೆ ಅಧಿಕಾರಿಗಳು ಧಾವಿಸಿದ್ದು, ಒತ್ತುವರಿಯಾಗಿರುವ ರಾಜಕಾಲುವೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ (devanahalli) ಹೊರವಲಯದ ಕೋಡಿಮಂಚೇನಹಳ್ಳಿಯಿಂದ ಬೆಟ್ಟಕೋಟೆ ಕೆರೆಗೆ ಹರಿಯುವ ಕಾಲುವೆಯನ್ನು ಮುಚ್ಚಿ ಚರಂಡಿ ಮಾಡಿರವ ಕಾರಣ ನೀರು ಹರಿದುಹೋಗದೇ ಅಲ್ಲಲ್ಲೇ ನಿಂತಿದ್ದು ಭಾರೀ ಅವಾಂತರ ಸೃಷ್ಟಿಸಿದೆ. ಮುಚ್ಚಿರೂ ರಾಜಕಾಲುವೆಯನ್ನು ತೆರವು ಮಾಡಲು ಜೆಸಿಬಿಗಳನ್ನು ಬಳಸಲಾಗಿದೆ. ಕಾಲುವೆ ತೆಗೆದು ನೀರು ಹರಿದೋಗಲು ವ್ಯವಸ್ಥೆ ಮಾಡಲಾಗುತ್ತಿದೆ.
ಪ್ರಸನ್ನಹಳ್ಳಿ ಗ್ರಾಮಸ್ಥರು ಈ ಬಾರಿ ವಿಲ್ಲಾ ಅಸೋಸಿಯೇಷನ್ ವಿರುದ್ಧ ಆಕ್ರೋಶಗೊಂಡಿದ್ದು, ಈಗಾಗಲೇ ಇದ್ದ ಗ್ರಾಮದ ರಸ್ತೆಯನ್ನು ಮುಚ್ಚಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ವಿಲ್ಲಾ ವಿರುದ್ಧ ಆರೋಪ ಮಾಡಿದ್ದಾರೆ. ಇದೀಗ ವಿಲ್ಲಾದಲ್ಲಿ ಮಳೆ ನೀರು ನಿಂತ ಪರಿಣಾಮ ಗೇಟ್ ಒಪನ್ ಮಾಡಿ, ನೀರು ಹೊರಬಿಡುತ್ತಿದ್ದಾರೆ. ಇಷ್ಟು ದಿನ ಇಲ್ಲದ ಗೇಟ್ ಇದೀಗ ಒಪನ್ ಮಾಡಿರುವುದಕ್ಕೆ ಮತ್ತು ಅದರಿಂದ ನೀರು ನುಗ್ಗುತ್ತಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಶ್ವತವಾಗಿ ರಸ್ತೆ ಒಪನ್ ಮಾಡಿ, ಇಲ್ಲವಾದರೆ ಮುಚ್ಚಿಬಿಡಿ ಎಂದು ಗ್ರಾಮಸ್ಥರ ಪಟ್ಟು ಹಿಡಿದಿದ್ದಾರೆ.
ಕೊನೆಗೂ ಪುರಸಭೆ ಮತ್ತು ಸರ್ವೆ ಅಧಿಕಾರಿಗಳು ಭೇಟಿ: ಹಿರಾನಂದನಿ ಯಲ್ಲಿ ಮಳೆ ನೀರು ನಿಂತು ಅವಾಂತರದ ಸಮ್ಮುಖದಲ್ಲಿ ಹಿರಾನಂದನಿಗೆ ಪುರಸಭೆ ಮತ್ತು ಸರ್ವೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಒತ್ತುವರಿಯಾಗಿರೂ ರಾಜಕಾಲುವೆಗಳ ಪರಿಶೀಲನೆ ನಡೆಸಿದ್ದಾರೆ. ಎಲ್ಲೆಲ್ಲಿ ಎಷ್ಟು ಕಾಲುವೆಗಳು ಒತ್ತುವರಿಯಾಗಿದೆ ಅನ್ನೂ ಬಗ್ಗೆ ಪರಿಶೀಲನೆ ನಡೆದಿದೆ. ಪರಿಶೀಲನೆ ಮಾಡಿ ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ತಯಾರಿ ನಡೆಸಿದ್ದಾರೆ. ತೆರವುಗೊಳಿಸಿ ರಸ್ತೆಯಲ್ಲಿ ನಿಂತಿರೂ ನೀರು ಖಾಲಿ ಮಾಡಿಸಲು ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಡೆವಲಪರ್ಸ್ ಮತ್ತು ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ್ದಾರೆ.
Published On - 11:47 am, Sat, 20 November 21