ಸರ್ಜಾಪುರದಲ್ಲಿ ಭಾರಿ ಮಳೆ, ಗಾಳಿಗೆ ಕುಸಿದು ಬಿದ್ದ ಜಾಹಿರಾತು ಹೋರ್ಡಿಂಗ್ಸ್; ಅಪಘಾತದ ಬಳಿಕ ಬಯಲಾಯ್ತು ಹೋರ್ಡಿಂಗ್ಸ್ ಮಾಫಿಯಾ
ನೆನ್ನೆ ಸುರಿದ ಭಾರಿ ಮಳೆ, ಬೀಸಿದ ಗಾಳಿ ರಭಸಕ್ಕೆ ಹಲವಾರು ಹೋರ್ಡಿಂಗ್ಗಳು ಕುಸಿದು ಬಿದ್ದು ಜನರಿಗೆ ಜೀವ ಭಯ ಹುಟ್ಟಿಸಿವೆ. ಸರ್ಜಾಪುರದ ಮುಖ್ಯರಸ್ತೆಯಲ್ಲಿ ಅಳವಡಿಸಲಾಗಿದ್ದ ಬಹುದೊಡ್ಡ ಹೋರ್ಡಿಂಗ್ ಬಿಲ್ಡಿಂಗ್ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬ ಸೇರಿದಂತೆ ಇಡೀ ಬಿಲ್ಡಿಂಗ್ ಜಖಂ ಗೊಂಡಿದೆ.
ಆನೇಕಲ್: ಇಲ್ಲಿ ಮನೆಗಳಿಗಿಂತ ಜಾಹಿರಾತಿನ ಹೋರ್ಡಿಂಗ್ಸ್ ಗಳೇ ಜಾಸ್ತಿ, ಸ್ವಲ್ಪ ಗಾಳಿ ಬೀಸಿದ್ರೂ ಸಾಕು ಜನರ ಮೇಲೆಯೇ ಬಿಳುವಂತಿರುವ ಈ ದೊಡ್ಡ ದೊಡ್ಡ ಹೋರ್ಡಿಂಗ್ ಸರ್ಜಾಪುದಲ್ಲಿ ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ಬೆಂಗಳೂರು ನಗರ ಜಿಲ್ಲೆಯ ಸರ್ಜಾಪುರದ ಮುಖ್ಯ ರಸ್ತೆಯಲ್ಲಿ ಬರೀ ಜಾಹಿರಾತು ಹೋರ್ಡಿಂಗಳ ರಾಜ್ಯಭಾರ. ನೆನ್ನೆ ಸುರಿದ ಭಾರಿ ಮಳೆ, ಬೀಸಿದ ಗಾಳಿ ರಭಸಕ್ಕೆ ಹಲವಾರು ಹೋರ್ಡಿಂಗ್ಗಳು ಕುಸಿದು ಬಿದ್ದು ಜನರಿಗೆ ಜೀವ ಭಯ ಹುಟ್ಟಿಸಿವೆ. ಸರ್ಜಾಪುರದ ಮುಖ್ಯರಸ್ತೆಯಲ್ಲಿ ಅಳವಡಿಸಲಾಗಿದ್ದ ಬಹುದೊಡ್ಡ ಹೋರ್ಡಿಂಗ್ ಬಿಲ್ಡಿಂಗ್ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬ ಸೇರಿದಂತೆ ಇಡೀ ಬಿಲ್ಡಿಂಗ್ ಜಖಂ ಗೊಂಡಿದೆ. ಅದೃಷ್ಟವಶಾತ್ ರಾತ್ರಿ ವೇಳೆ ಯಾರೂ ಇರದ ಪರಿಣಾಮ ಸಾವು ನೋವು ಸಂಭವಿಸಿಲ್ಲ. ಈ ಹೋರ್ಡಿಂಗ್ ಅಳವಡಿಸಲು ಜಾಗ ಕೊಟ್ಟ ಮಾಲೀಕ ಮುತ್ತುಸ್ವಾಮಿ ಮೇಲೆ ಅವರದ್ದೇ ಸಂಬಂಧಿ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾರೆ. ಇದನ್ನು ಹಾಕೋದಕ್ಕೆ ಅನುವು ಮಾಡಿಕೊಟ್ಟಿದ್ದು pwd ಇಂಜಿನಿಯರ್ ವಿಠಲ್ ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ.
ಈ ಜಾಗದ ಮಾಲೀಕ ಎಂದು ಹೇಳಲಾಗುತ್ತಿರುವ ಮುತ್ತುಸ್ವಾಮಿ ಪ್ರತಿ ತಿಂಗಳು 10ಸಾವಿರದಂತೆ ಸ್ವರ್ಣ ಆರ್ಟ್ಸ್ ಎಂಬುವವರಿಗೆ ಬಾಡಿಗೆಗೆ ಕೊಟ್ಟಿದ್ದಾರೆ. ಆದರೆ ಈ ಬಗ್ಗೆ 2017 ರಿಂದಲೂ ಕೋರ್ಟಿನಲ್ಲಿ ಕೇಸ್ ನಡೀತಿದೆ. ಅವಘಡ ಸಂಭವಿಸಿದ ನಂತರವೂ ಸ್ಥಳ ಪರಿಶೀಲನೆಗೆ ಪಂಚಾಯ್ತಿ ಅಧ್ಯಕ್ಷ ಹಾಗೂ ಇಂಜಿನಿಯರ್ ವಿಠಲ್ ಸ್ಥಳಕ್ಕೆ ಬಂದಿಲ್ಲ. ಅಲ್ಲದೆ ಇವರ ಮೇಲೆ ಲಂಚ ಪಡೆದಿರುವ ಆರೋಪ ಕೇಳಿ ಬಂದಿದೆ. ಇದಕ್ಕೆ ಎಇಇ ವೆಂಕಟೇಶ್ವರ್ ಕೂಡ ಶಾಮೀಲು ಆಗಿದ್ದಾರೆ ಅಂತ ಸ್ಥಳೀಯರು ಆರೋಪಮಾಡಿದ್ದಾರೆ.
ಒಟ್ಟಿನಲ್ಲಿ ಬೆಂಗಳೂರು ಹೊರವಲಯ ಸುತ್ತಮುತ್ತಾ ಅಳವಡಿಸಲಾಗಿರುವ ಜಾಹಿರಾತು ಹೋರ್ಡಿಂಗ್ಸ್ ಒಂದು ಮಾಫಿಯಾ ಆಗಿ ಪರಿಣಮಿಸಿವೆ, ಎಲ್ಲಾ ಇಲಾಖೆಗಳ ಇಂಜಿನಿಯರ್ ಹಾಗೂ ಬೆಸ್ಕಾಂ ಎಇ ಗಳ ಮೇಲೆ ಸರಕಾರ ಗಮನ ಹರಿಸಿ ಭ್ರಷ್ಟ ಅಧಿಕಾರಿಗಳನ್ನು ಕೆಲಸದಿಂದ ಕೈ ಬಿಡಬೇಕಿದೆ.
ವರದಿ: ಸೈಯ್ಯದ್ ನಿಜಾಮುದ್ದೀನ್, ಟಿವಿ9 ಆನೇಕಲ್
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:34 pm, Mon, 9 May 22