ಹೊಸಕೋಟೆ: ಪ್ರಾಂಶುಪಾಲರ ಹುದ್ದೆಗಾಗಿ ಶಾಲಾ ಆಡಳಿತ ಮಂಡಳಿ ನಡುವೆ ಜಟಾಪಟಿ; ಶಾಲೆಯ ನಿರ್ದೇಶಕನಿಂದ ಧರಣಿ
ಹೊಸಕೋಟೆ ತಾಲೂಕಿನ ಕಲ್ಕುಂಟೆ ಅಗ್ರಹಾರ ಗ್ರಾಮದ ರಂಗನಾಥ ಪ್ರೌಢಶಾಲೆಯಲ್ಲಿ ಪ್ರಾಂಶುಪಾಲರ ಹುದ್ದೆಗಾಗಿ ಶಾಲಾ ಆಡಳಿತ ಮಂಡಳಿಯಲ್ಲಿ ಜಟಾಪಟಿ ನಡೆದಿದೆ.
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಹೊಸಕೋಟೆ ತಾಲೂಕಿನ ಕಲ್ಕುಂಟೆ ಅಗ್ರಹಾರ ಗ್ರಾಮದ ರಂಗನಾಥ ಪ್ರೌಢಶಾಲೆಯಲ್ಲಿ ಪ್ರಾಂಶುಪಾಲರ ಹುದ್ದೆಗಳಿಗಾಗಿ ಜಟಾಪಟಿ ಶುರುವಾಗಿದೆ. ಸರ್ಕಾರಿ ಅನುದಾನಿತ ಶಾಲೆಯಲ್ಲಿ ವರ್ಷಕ್ಕೊಬ್ಬರಿಗೆ ಸೀನಿಯರಿಟಿ ಮೇಲೆ ಕೊಡುತ್ತಿದ್ದ ಬಡ್ತಿಯ ಮೆಲೆ ಈ ಭಾರಿ ದಲಿತ ಸಮುದಾಯಕ್ಕೆ ಬರಬೇಕಿದ್ದ ಪ್ರಾಂಶುಪಾಲರ ಹುದ್ದೆ ರಾಜಕೀಯ ಹುನ್ನಾರದಿಂದ ಕೊಟ್ಟಿಲ್ಲವೆಂದು ಆರೋಪಿಸಿ ಇತರೆ ನಿರ್ದೇಶಕರ ವಿರುದ್ದ ದಲಿತ ಸಮುದಾಯದ ನಿರ್ದೇಶಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಸುತ್ತೋಲೆಯಲ್ಲಿ ಬಿಇಒ ಆದೇಶವಿದ್ದರೂ ರಾಜಕೀಯ ಹುನ್ನಾರದಿಂದ ಈ ರೀತಿಯಾಗಿದೆ ಎಂದು ಶಾಲೆಯ ಮುಂದೆ ಧರಣಿ ನಡೆಸಿದ್ದಾರೆ. ಶಾಲಾ ಆಡಳಿತ ಮಂಡಳಿಯ ಕಿತ್ತಾಟದಿಂದ ಗ್ರಾಮಸ್ಥರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗೆ ಬುದ್ದಿವಾದ ಹೇಳಬೇಕಾದ ಶಿಕ್ಷಕರೇ ಈ ರೀತಿ ನಡೆದುಕೊಳ್ಳುತ್ತಿರುವುದು ಸರಿಯಿಲ್ಲವೆಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ನಿವೇಶನಕ್ಕಾಗಿ ಸರ್ಕಾರಿ ಗೋಮಾಳದಲ್ಲಿ ಗುಡಿಸಲು ಹಾಕಿಕೊಂಡು ಗ್ರಾಮಸ್ಥರಿಂದ ಪ್ರತಿಭಟನೆ
ದಾವಣಗೆರೆ: ನಿವೇಶನಕ್ಕಾಗಿ ಕಳೆದ ಐದು ವರ್ಷಗಳಿಂದ ಹೋರಾಟ ಮಾಡುತ್ತಿರುವ ಚನ್ನಗಿರಿ ತಾಲೂಕಿನ ಹಿರೇಕೋಗಲೂರು ಗ್ರಾಮಸ್ಥರು ಸರ್ಕಾರಿ ಗೋಮಾಳದಲ್ಲಿ ಗುಡಿಸಲು ಹಾಕಿಕೊಂಡು ಪ್ರತಿಭಟನೆ ನಡೆಸಿದ್ದಾರೆ. ಗ್ರಾಮದ ಸರ್ವೇ ನಂಬರ್ 46 ರಲ್ಲಿ ಎಳು ಎಕರೆ 30 ಗುಂಟೆ ಜಮೀನು ಇದ್ದು, ಈ ಜಮೀನು ಬಡವರಿಗೆ ಹಾಗೂ ನಿವೇಶನ ರಹಿತರಿಗೆ 2017 ರಲ್ಲಿ ಸರ್ಕಾರ ಮುಂಜೂರು ಮಾಡಿದೆ. ಆದರೆ ಸ್ಥಳೀಯ ಆಡಳಿತವು ಉದ್ದೇಶ ಪೂರ್ವಕವಾಗಿ ನಿವೇಶನ ಹಂಚಿಕೆ ಮಾಡುತ್ತಿಲ್ಲವೆಂದು ಆರೋಪಿಸಿ ಗ್ರಾಮ ಪಂಚಾಯತ್ ಹಾಗೂ ತಾಲೂಕಾ ಆಡಳಿತ ಸಕಾಲಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ತನಕ ಹಗಲು ರಾತ್ರಿ ಹೋರಾಟ ಮಾಡುತ್ತೇವೆ ಎನ್ನುತ್ತಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:23 pm, Fri, 13 January 23