ದೇವನಹಳ್ಳಿ ಸುತ್ತಮುತ್ತ ಭಾರಿ ಮಳೆ; ಮನೆ ಕುಸಿದು ಆರು ಮೇಕೆ ಸಾವು, ಕುಟುಂಬಸ್ಥರು ಪಾರು

TV9 Digital Desk

| Edited By: Ayesha Banu

Updated on: Oct 12, 2021 | 11:58 AM

ಕೂಗೇನಹಳ್ಳಿ ಗ್ರಾಮದ ಚಂದ್ರಪ್ಪ ಎಂಬುವರ ಮನೆ ಕುಸಿದಿದ್ದು ಜೀವನೋಪಾಯಕ್ಕಾಗಿ ಸಾಕಿಕೊಂಡಿದ್ದ 6 ಮೇಕೆಗಳು ಮೃತಪಟ್ಟಿವೆ. ಹಾಗೂ ಒಂದು ಮೇಕೆಗೆ ಕಾರು ಮುರಿದಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ಚಂದ್ರಪ್ಪ ಕುಟುಂಬಸ್ಥರು ಪಕ್ಕದ ಮನೆಯಲ್ಲಿ ಮಲಗಿದ್ದರು. ಹೀಗಾಗಿ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದೇವನಹಳ್ಳಿ ಸುತ್ತಮುತ್ತ ಭಾರಿ ಮಳೆ; ಮನೆ ಕುಸಿದು ಆರು ಮೇಕೆ ಸಾವು, ಕುಟುಂಬಸ್ಥರು ಪಾರು
ದೇವನಹಳ್ಳಿ ಸುತ್ತಮುತ್ತ ಭಾರಿ ಮಳೆ; ಮನೆ ಕುಸಿದು ಆರು ಮೇಕೆ ಸಾವು, ಕುಟುಂಬಸ್ಥರು ಪಾರು
Follow us

ದೇವನಹಳ್ಳಿ: ಕಳೆದ ರಾತ್ರಿ ದೇವನಹಳ್ಳಿ ಸುತ್ತಮುತ್ತ ಭಾರಿ ಮಳೆಯಾಗಿದ್ದು ಮಳೆಗೆ ಹಳೆ ಮನೆ ಕುಸಿದು ಆರು ಮೇಕೆ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕೂಗೇನಹಳ್ಳಿಯಲ್ಲಿ ನಡೆದಿದೆ.

ಕೂಗೇನಹಳ್ಳಿ ಗ್ರಾಮದ ಚಂದ್ರಪ್ಪ ಎಂಬುವರ ಮನೆ ಕುಸಿದಿದ್ದು ಜೀವನೋಪಾಯಕ್ಕಾಗಿ ಸಾಕಿಕೊಂಡಿದ್ದ 6 ಮೇಕೆಗಳು ಮೃತಪಟ್ಟಿವೆ. ಹಾಗೂ ಒಂದು ಮೇಕೆಗೆ ಕಾರು ಮುರಿದಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ಚಂದ್ರಪ್ಪ ಕುಟುಂಬಸ್ಥರು ಪಕ್ಕದ ಮನೆಯಲ್ಲಿ ಮಲಗಿದ್ದರು. ಹೀಗಾಗಿ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದ್ರೆ ಮನೆಗೆ ಆದಾಯದ ಮೂಲವಾಗಿದ್ದ ಮೇಕೆಗಳ ಸಾವಿನಿಂದ ಚಂದ್ರಪ್ಪ ಕಂಗಾಲಾಗಿದ್ದಾರೆ.

ಕದಿರೇನಪಾಳ್ಯದಲ್ಲಿ ಕಾಂಪೌಂಡ್ ಕುಸಿತ ಬೆಂಗಳೂರಿನ ಕದಿರೇನಪಾಳ್ಯದಲ್ಲಿ ಕಾಂಪೌಂಡ್ ಕುಸಿದಿದೆ. ನಿನ್ನೆ ಅರ್ಧ ಕಾಂಪೌಂಡ್ ಗೋಡೆ ಕುಸಿದುಬಿದ್ದಿತ್ತು. ಭಾರಿ ಮಳೆಯಿಂದಾಗಿ ಈಗ ಮತ್ತಷ್ಟು ಗೋಡೆ ಕುಸಿದಿದೆ. ಬೆಂಗಳೂರಿನ ಇಂದಿರಾನಗರದಲ್ಲಿರುವ ಮಿಲಿಟರಿ ಕಾಂಪೌಂಡ್ ನಿನ್ನೆ ಕುಸಿದಿತ್ತು. ಕಾಂಪೌಂಡ್ ಕುಸಿದ ಪರಿಣಾಮ 10ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿದ್ದು, ಜಖಂ ಆಗಿರುವ ವಾಹನಗಳ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಇದು ರೆಸಿಡೆನ್ಸಿಯಲ್ ಏರಿಯಾ ಆಗಿರುವ ಕಾರಣ ಮಕ್ಕಳು ಜಾಸ್ತಿ ಓಡಾಡುತ್ತಾರೆ. ಹೀಗಾಗಿ ಸ್ಥಳೀಯ ನಿವಾಸಿಗಳು ನ್ಯಾಯ ಬೇಕು ಅಂತ ಟಿವಿ9 ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿಯೂ ಮಹಿಳಾ ಮೇಲೆ ಗೋಡೆ ಬಿದ್ದಿದೆ. ಸದ್ಯ ಆ ಮಹಿಳೆ ಮನೆ ಖಾಲಿ ಮಾಡಿ ಬೇರೆ ಕಡೆಗೆ ಹೋಗಿದ್ದಾರೆ. ಆಗಾಗ ಮಿಲಿಟರಿ ಕಾಂಪೌಂಡ್​ನಲ್ಲಿ ಮರಗಳ ರೆಂಬೆಗಳು ಮನುಷ್ಯನ ಮೇಲೆ ಬೀಳುತ್ತವೆ. ಆದರೆ ಇದುವರೆಗೆ ಮಿಲಿಟರಿ ಅಧಿಕಾರಿಗಳು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಅಂತ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದರು.

ಮಿಲಿಟರಿ ಕಾಂಪೌಂಡ್ ಕುಸಿದಿದ್ದರಿಂದ ದ್ವಿಚಕ್ರ ವಾಹನ ಸೇರಿ ಅಲ್ಲಿದ್ದ ಎಲ್ಲ ವಾಹನಗಳು ಜಖಂಗೊಂಡಿವೆ. ಗಾಡಿಗಳು ಕಳೆದುಕೊಂಡಿರುವ ಸ್ಥಳೀಯರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಘಟನೆ ಸ್ಥಳಕ್ಕೆ ಎಂಎಲ್​ಎ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಿಲಿಟರಿ ಕಾಂಪೌಂಡ್ ಕುಸಿತ; 10ಕ್ಕೂ ಹೆಚ್ಚು ವಾಹನಗಳು ಜಖಂ

ತಾಜಾ ಸುದ್ದಿ

Related Stories

Click on your DTH Provider to Add TV9 Kannada