ಬೆಂಗಳೂರಿನಲ್ಲಿ ಮಿಲಿಟರಿ ಕಾಂಪೌಂಡ್ ಕುಸಿತ; 10ಕ್ಕೂ ಹೆಚ್ಚು ವಾಹನಗಳು ಜಖಂ
ಕಾಂಪೌಂಡ್ ಕುಸಿದು ಪರಿಣಾಮ 10ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿದ್ದು, ಜಖಂ ಆಗಿರುವ ವಾಹನಗಳ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗೆ ಕಟ್ಟಡಗಳ ಕುಸಿತ ಪ್ರಕರಣ ಹೆಚ್ಚಾಗುತ್ತಿದೆ. ಇಂದು ಬೆಂಗಳೂರಿನ ಇಂದಿರಾನಗರದಲ್ಲಿರುವ ಮಿಲಿಟರಿ ಕಾಂಪೌಂಡ್ ಕುಸಿದಿದೆ. ಕಾಂಪೌಂಡ್ ಕುಸಿದು ಪರಿಣಾಮ 10ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿದ್ದು, ಜಖಂ ಆಗಿರುವ ವಾಹನಗಳ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಂಇಜಿ ಸೆಂಟರ್ಗೆ ಸೇರಿರುವ ಮಿಲಿಟರಿ ಕಾಂಪೌಂಡ್ ಕುಸಿದಿದೆ. ಬೆಳಗ್ಗೆ ನಾಲ್ಕು ಗಂಟೆಗೆ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಇಲ್ಲ.
ಇದು ರೆಸಿಡೆನ್ಸಿಯಲ್ ಏರಿಯಾ ಆಗಿರುವ ಕಾರಣ ಮಕ್ಕಳು ಜಾಸ್ತಿ ಓಡಾಡುತ್ತಾರೆ. ಹೀಗಾಗಿ ಸ್ಥಳೀಯ ನಿವಾಸಿಗಳು ನ್ಯಾಯ ಬೇಕು ಅಂತ ಟಿವಿ9 ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿಯೂ ಮಹಿಳಾ ಮೇಲೆ ಗೋಡೆ ಬಿದ್ದಿದೆ. ಸದ್ಯ ಆ ಮಹಿಳೆ ಮನೆ ಖಾಲಿ ಮಾಡಿ ಬೇರೆ ಕಡೆಗೆ ಹೋಗಿದ್ದಾರೆ. ಆಗಾಗ ಮಿಲಿಟರಿ ಕಾಂಪೌಂಡ್ನಲ್ಲಿ ಮರಗಳ ರೆಂಬೆಗಳು ಮನುಷ್ಯನ ಮೇಲೆ ಬೀಳುತ್ತವೆ. ಆದರೆ ಇದುವರೆಗೆ ಮಿಲಿಟರಿ ಅಧಿಕಾರಿಗಳು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಅಂತ ಸ್ಥಳೀಯರು ಹೇಳುತ್ತಿದ್ದಾರೆ.
ಮಿಲಿಟರಿ ಕಾಂಪೌಂಡ್ ಕುಸಿದಿದ್ದರಿಂದ ದ್ವಿಚಕ್ರ ವಾಹನ ಸೇರಿ ಅಲ್ಲಿದ್ದ ಎಲ್ಲ ವಾಹನಗಳು ಜಖಂಗೊಂಡಿವೆ. ಗಾಡಿಗಳು ಕಳೆದುಕೊಂಡಿರುವ ಸ್ಥಳೀಯರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಘಟನೆ ಸ್ಥಳಕ್ಕೆ ಎಂಎಲ್ಎ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಸೆಕ್ಯೂರಿಟಿ ಗಾರ್ಡ್ ಸಮಯಪ್ರಜ್ಞೆಯಿಂದ ಉಳಿಯಿತು 15 ಜನರ ಜೀವ ಅಕ್ಟೋಬರ್ 07ರಂದು ನಗರದ ಕಸ್ತೂರಿನಗರದಲ್ಲಿ 5 ಅಂತಸ್ತಿನ ಕಟ್ಟಡ ಕುಸಿದು ಬಿದ್ದಿತ್ತು. ಈ ಘಟನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಸಮಯಪ್ರಜ್ಞೆ ಮೆರೆದಿದ್ದು 15 ಜನರನ್ನು ಪಾರು ಮಾಡಿದ್ದಾರೆ. ಕಟ್ಟಡ ಕುಸಿಯುವ ಸೂಚನೆ ಸಿಗುತ್ತಿದ್ದಂತೆ ಸಮಯಪ್ರಜ್ಞೆ ಮೆರೆದ ಸೆಕ್ಯೂರಿಟಿ ಗಾರ್ಡ್ 15 ಜನರನ್ನು ಸೇಫ್ ಮಾಡಿದ್ದಾರೆ.
ಕಟ್ಟಡದ ಬಲ ಭಾಗದ ಪಿಲ್ಲರ್ ಕೆಳಗೆ ಕುಸಿಯುತ್ತಿದ್ದಂತೆ. ಸೆಕ್ಯೂರಿಟಿ ಗಾರ್ಡ್ ಮನೆ ಮನೆಗೆ ಹೋಗಿ ಎಲ್ಲರನ್ನು ಕೆಳಗಡೆ ಇಳಿಸಿದ್ದಾರೆ. ಪಕ್ಕದ ಮನೆಯ ಮಾಲೀಕರನ್ನ ಕೂಗಿ ಕರೆದಿದ್ದಾರೆ. ಕುಸಿಯುತ್ತಿರುವ ಪಿಲ್ಲರ್ ತೋರಿಸಿ ಮಾಹಿತಿ ನೀಡಿದ್ದಾರೆ. ಕಟ್ಟಡ ಕುಸೀತಿದ್ದಂತೆ ಮೊದಲು ಲಿಫ್ಟ್ ಆಫ್ ಮಾಡಿದ್ದಾರೆ. ಮನೆಯಲ್ಲಿದ್ದ ಎಲ್ಲಾ ಬಾಡಿಗೆದಾರರನ್ನು ಮೆಟ್ಟುಲುಗಳ ಸಾಹಯದಿಂದ ಕೆಳಗೆ ಇಳಸಿದ್ದಾರೆ. ತಕ್ಷಣವೇ ಮನೆಯ ಮಾಲೀಕರ ಗಮನಕ್ಕೆ ತಂದಿದ್ದಾರೆ. ಈ ರೀತಿ ಸೆಕ್ಯೂರಿಟಿ ಗಾರ್ಡ್ ಬುದ್ಧಿವಂತಿಕೆಯಿಂದ 15 ಜನ ಬದುಕುಳಿದಿದ್ದಾರೆ.
ಇದನ್ನೂ ಓದಿ
ಡ್ರಗ್ಸ್ ಕೇಸ್: ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ; ಶಾರುಖ್ ಪುತ್ರನಿಗೆ ಮುಗಿಯದ ಸಂಕಷ್ಟ
ಹೊಡೆಯಲ್ಲ ಬೈಯಲ್ಲ, ದಮ್ಮಯ್ಯ ಅಂತೀವಿ ಮೊದಲು ಮನೆಗೆ ಬನ್ನಿ: ಬೆಂಗಳೂರಿನಲ್ಲಿ ನಾಪತ್ತೆಯಾದ 4 ಮಕ್ಕಳ ಪೋಷಕರ ಮನವಿ
Published On - 12:20 pm, Mon, 11 October 21