ಉದ್ಯಮಿಯಾಗು, ಉದ್ಯೋಗ ನೀಡು ಕಾರ್ಯಕ್ರಮ ಉದ್ಘಾಟಿಸುವ ವೇಳೆ ದೀಪ ಹಚ್ಚಲು ಸಿಎಂ ಹರಸಾಹಸ

ಜ್ಯೋತಿ ಬೆಳಗುವಿಕೆಗೆ ಫ್ಯಾನ್ ಗಾಳಿ ಅಡ್ಡಿಯಾದ ಪರಿಣಾಮ ದೀಪ ಅಂಟಿಸಲು ಹರಸಾಹಸ ಪಡಬೇಕಾಯಿತು. ಕೊನೆಗೆ ದೀಪ ಅಂಟಿಸುವಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಯಶಸ್ವಿಯಾದರೂ. ಈ ವೇಳೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಉಪಸ್ಥಿತರಿದ್ದರು.

ಉದ್ಯಮಿಯಾಗು, ಉದ್ಯೋಗ ನೀಡು ಕಾರ್ಯಕ್ರಮ ಉದ್ಘಾಟಿಸುವ ವೇಳೆ ದೀಪ ಹಚ್ಚಲು ಸಿಎಂ ಹರಸಾಹಸ
ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)


ಬೆಂಗಳೂರು: ಉದ್ಯಮಿಯಾಗು, ಉದ್ಯೋಗ ನೀಡು ಕಾರ್ಯಕ್ರಮ ಉದ್ಘಾಟಿಸುವ ವೇಳೆ ದೀಪ ಹಚ್ಚಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹರಸಾಹಸ ಪಟ್ಟಿದ್ದಾರೆ. ಜ್ಯೋತಿ ಬೆಳಗುವಿಕೆಗೆ ಫ್ಯಾನ್ ಗಾಳಿ ಅಡ್ಡಿಯಾದ ಪರಿಣಾಮ ದೀಪ ಅಂಟಿಸಲು ಹರಸಾಹಸ ಪಡಬೇಕಾಯಿತು. ಕೊನೆಗೆ ದೀಪ ಅಂಟಿಸುವಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಯಶಸ್ವಿಯಾದರೂ. ಈ ವೇಳೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಉಪಸ್ಥಿತರಿದ್ದರು.

ಕಾರ್ಯಕ್ರಮದ ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ಉದ್ಯಮಿಯಾಗು ಉದ್ಯೋಗ ನೀಡು ಎನ್ನುವ ಉತ್ತಮ ಕಾರ್ಯಾಗಾರವನ್ನು ಸಚಿವ ಮುರುಗೇಶ್ ನಿರಾಣಿ ಮಾಡಿದ್ದಾರೆ. ಸಣ್ಣ ಉಧ್ಯಮದಿಂದ ದೊಡ್ಡ ಉದ್ಯಮಿಗಳಾಗಿ ಬೆಳದವರಿಬ್ಬರು ನಮ್ಮ ಜೊತೆಯಲ್ಲೇ ಇದ್ದಾರೆ. ಸಣ್ಣ ಕೈಗಾರಿಕಾ ಸಚಿವ ಎಂಟಿಬಿ ನಾಗರಾಜ್ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ನಮಗೆ ಉದಾಹರಣೆ. ಇವತ್ತು ಇವರು ಕರೋಡ್ ಪತಿಗಳಾಗಿದ್ದಾರೆ ಎಂದು ಹೇಳಿದ್ದಾರೆ.

ಶ್ರದ್ಧೆ ಗುರಿಯೊಂದು ಇದ್ದರೇ ಉದ್ಯೋಗ ನೀಡುವ ಉಧ್ಯಮಿಗಳಾಗಬ‍ಹುದು. ಎಂಟಿಬಿ ನಾಗರಾಜ್ ಅವರ ಇಟ್ಟಿಗೆ ಇವತ್ತು ಗುಣಮಟ್ಟದಿಂದ ಕೂಡಿದ್ದು ಮನೆ, ಕಟ್ಟಡ ನಿರ್ಮಾಣಕ್ಕೆ ಫೇಮಸ್ ಆಗಿದೆ. ಹೀಗಾಗಿ ಈ ಉದ್ಯಮಿಗಳೇ ನಿಮಗೆ ತಾಜಾ ಉದಾಹರಣೆ ಎಂದು ಯುವ ಉದ್ಯಮಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರೇರಪಣೆ ನೀಡಿದ್ದಾರೆ.

ದುಡ್ಡಿದ್ದರೆ ಮಾತ್ರ ಉದ್ಯಮ ಆಗಲ್ಲ, ಅದರಂತೆ ಉದ್ಯಮಿ ಆಗಲ್ಲ. ದುಡ್ಡಿಗಿಂತ ಪರಿಶ್ರಮ ಬಹಳ ಮುಖ್ಯ. ಅದೃಷ್ಟದಿಂದ ಉದ್ಯಮಿಯಾಗಲ್ಲ, ಯಶಸ್ವಿ ಆಗಲ್ಲ. ಪರಿಶ್ರಮದಿಂದ ಮಾತ್ರ ಯಶಸ್ವಿ ಆಗುತ್ತೇವೆ. ಪರಿಶ್ರಮ, ಸಮಯ ಪ್ರಜ್ಞೆ, ಸ್ಥಿತಪ್ರಜ್ಞೆ, ಹಣದ ಮೌಲ್ಯ, ಯಶಸ್ಸಿನ ಸೂತ್ರಗಳು ಎಂದು ಈ ಕಾರ್ಯಕ್ರಮದಲ್ಲಿ ಉದಯೋನ್ಮುಖ ಉದ್ಯಮಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ:
President Ram Nath Kovind ಮಡಿಕೇರಿಗೆ ಭೇಟಿ ನೀಡಿದ ರಾಷ್ಟ್ರಪತಿ ರಾಮನಾಥ ಕೋವಿಂದ್; ತೂಗುದೀಪ ಬೆಳಗಿ ಯುದ್ಧ ಸ್ಮಾರಕ ಲೋಕಾರ್ಪಣೆ

ದೇವಿಗೆ ಗೋಧಿ ಹಿಟ್ಟಿನ ದೀಪವನ್ನು ಬೆಳಗಿದ್ರೆ ಅದೃಷ್ಟ ದೇವಿ ನಿಮಗೆ ಒಲಿತಾಳಂತೆ

Published On - 12:59 pm, Mon, 11 October 21

Click on your DTH Provider to Add TV9 Kannada