ದೇವಿಗೆ ಗೋಧಿ ಹಿಟ್ಟಿನ ದೀಪವನ್ನು ಬೆಳಗಿದ್ರೆ ಅದೃಷ್ಟ ದೇವಿ ನಿಮಗೆ ಒಲಿತಾಳಂತೆ

ದೇವಿಗೆ ಗೋಧಿ ಹಿಟ್ಟಿನ ದೀಪವನ್ನು ಬೆಳಗಿದ್ರೆ ಅದೃಷ್ಟ ದೇವಿ ನಿಮಗೆ ಒಲಿತಾಳಂತೆ
ಗೋಧಿ ಹಿಟ್ಟಿನ ದೀಪ

ಅದೃಷ್ಟದ ಪರೀಕ್ಷೆಗೆ ಒಳಗಾಗೋದು ಎಷ್ಟು ಸರಿ? ಅನ್ನುವಂತಹ ಪ್ರಶ್ನೆಗಳು ಸಹಜವಾಗೇ ಮೂಡುತ್ವೆ. ಈ ಅದೃಷ್ಟದ ಬಗ್ಗೆ ಆಧ್ಯಾತ್ಮ, ಪುರಾಣಗಳು ಸರಿಯಾದ ಪ್ರಯತ್ನವಿದ್ದರೆ ಇಂದಲ್ಲಾ ನಾಳೆ ಫಲ ಸಿಕ್ಕೇ ಸಿಗುತ್ತೆ ಅಂತಾ ಹೇಳಿವೆ.

Ayesha Banu

|

May 02, 2021 | 6:42 AM

ಕೆಲವೊಮ್ಮೆ ಜೀವನದಲ್ಲಿ ಎಂತಹ ಪರಿಸ್ಥಿತಿ ಬರುತ್ತೆ ಅಂದ್ರೆ ಎಷ್ಟೇ ಕಷ್ಟಪಟ್ಟರೂ ನಮ್ಮ ಪ್ರಯತ್ನಕ್ಕೆ ಫಲ ಸಿಗೋದಿಲ್ಲ. ಎಷ್ಟೇ ಪ್ರಯತ್ನಪಟ್ಟು ಯಾವ ಕೆಲಸ ಮಾಡಿದ್ರೂ ಕೆಲಸದಲ್ಲಿ ಯಶಸ್ಸು ಸಿಗೋದಿಲ್ಲ. ಹೀಗೇನಾದ್ರೂ ಆದ್ರೆ ನಮ್ಮ ಅದೃಷ್ಟ ಚೆನ್ನಾಗಿಲ್ಲ, ನಮ್ಮ ಗ್ರಹಚಾರ ಸರಿಯಿಲ್ಲ, ನಮ್ಮ ಗ್ರಹಚಾರಕ್ಕೆ ಏನೋ ದೋಷ ಇರಬಹುದು, ಅದಕ್ಕೆ ಇಷ್ಟೆಲ್ಲಾ ಕಷ್ಟ ಅನುಭವಿಸ್ತಿದ್ದೇವೆ ಅಂತೆಲ್ಲಾ ಸಾಮಾನ್ಯವಾಗಿ ಕೆಲವರು ಹೇಳೋದನ್ನು ಕೇಳಿರ್ತೀವಿ. ಮತ್ತೆ ಕೆಲವರು ಜೀವನದಲ್ಲಿ ಚೆನ್ನಾಗಿರುವವರನ್ನು ಕಂಡು ಈಕೆ ಅದೃಷ್ಟವಂತೆ ಅಥವಾ ಈತ ಅದೃಷ್ಟವಂತ ಅಂತಾ ಹೇಳೋದನ್ನೂ ಕೇಳಿರ್ತೀವಿ. ಇದಿಷ್ಟೇ ಅಲ್ಲದೇ, ಈ ರೀತಿ ಮಾಡಿದ್ರೆ ಅದೃಷ್ಟ ಬರುತ್ತೆ. ಆ ರೀತಿ ಮಾಡಿದ್ರೆ ದುರಾದೃಷ್ಟ ಅಪ್ಪಳಿಸುತ್ತೆ. ಹಾಗೆ, ಹೀಗೆ ಅಂತೆಲ್ಲಾ ಅದೃಷ್ಟದ ಬಗ್ಗೆ ಕೆಲವರು ಮಾತಾಡ್ತಿರ್ತಾರೆ.

ಅಷ್ಟಕ್ಕೂ. ಅದೃಷ್ಟ ಅನ್ನೋದು ಸತ್ಯನಾ? ಅದೃಷ್ಟದ ಪರೀಕ್ಷೆಗೆ ಒಳಗಾಗೋದು ಎಷ್ಟು ಸರಿ? ಅನ್ನುವಂತಹ ಪ್ರಶ್ನೆಗಳು ಸಹಜವಾಗೇ ಮೂಡುತ್ವೆ. ಈ ಅದೃಷ್ಟದ ಬಗ್ಗೆ ಆಧ್ಯಾತ್ಮ, ಪುರಾಣಗಳು ಸರಿಯಾದ ಪ್ರಯತ್ನವಿದ್ದರೆ ಇಂದಲ್ಲಾ ನಾಳೆ ಫಲ ಸಿಕ್ಕೇ ಸಿಗುತ್ತೆ ಅಂತಾ ಹೇಳಿವೆ. ಕೆಲ ಪುರಾಣಗಳ ಪ್ರಕಾರ, ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗದೇ ಇದ್ದರೆ ಅದಕ್ಕೆ ಆಧ್ಯಾತ್ಮದಲ್ಲಿ ಪರಿಹಾರವಿದೆ ಎನ್ನಲಾಗುತ್ತೆ. ಅಷ್ಟಕ್ಕೂ ಆ ಪರಿಹಾರಗಳು ಏನು? ಬನ್ನಿ ತಿಳಿಯಿರಿ.

ಆಧ್ಯಾತ್ಮದ ಪ್ರಕಾರ, ಅದೃಷ್ಟ ಹೆಚ್ಚಿಸಿಕೊಳ್ಳೇಕೆ ಏನು ಮಾಡಬೇಕು? 1)ಗೋಧಿ ಹಿಟ್ಟನ್ನು ಕಲಸಿ ಅದರಿಂದ ದೀಪ ತಯಾರಿಸಬೇಕು. 2)ಆ ದೀಪಕ್ಕೆ 3 ತುದಿಗಳು ಅಥವಾ ಅಂಚುಗಳನ್ನು ಮಾಡಬೇಕು. 3)ಸ್ವಲ್ಪ ಎಳ್ಳೆಣ್ಣೆ, ತುಪ್ಪ ಹಾಗೂ ಸೂರ್ಯಕಾಂತಿ ಎಣ್ಣೆ ಬೆರೆಸಿ ದೀಪಕ್ಕೆ ಹಾಕಬೇಕು. 4)3 ತರಹದ ಎಣ್ಣೆ ಹಾಗೂ 3 ಅಂಚುಗಳನ್ನು ಮಾಡೋದ್ರಿಂದ ದೀಪದ ಬಾವಿ ಸ್ವಲ್ಪ ದೊಡ್ಡದಾಗಿರಬೇಕು. 5)ದೀಪದ 3 ತುದಿಗಳಿಗೆ ಎರಡೆರಡರಂತೆ ದೊಡ್ಡ ಬತ್ತಿಗಳನ್ನು ಇಡಬೇಕು. 6)ಬತ್ತಿಗಳು ಕೆಂಪು, ಅರಿಶಿನ ಹಾಗೂ ಬಿಳಿ ಬಣ್ಣದಿಂದ ಮಾಡಿರಬೇಕು. 7)ಈ ದೀಪವನ್ನು ಅಮ್ಮನವರ ದೇಗುಲದ ಹೊಸ್ತಿಲಲ್ಲಿ ಸೂರ್ಯೋದಕ್ಕೂ ಮುನ್ನ ಇಟ್ಟು ದೀಪ ಬೆಳಗಬೇಕು. 8)ದೀಪ ಬೆಳಗುವಾಗ ಈ ಮಂತ್ರವನ್ನು 21 ಬಾರಿ ಪಠಿಸಬೇಕು. ಯಾ ದೇವಿ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ 9)ಇಷ್ಟಾರ್ಥಗಳ ಈಡೇರಿಕೆಗಾಗಿ ದೇವಿಯಲ್ಲಿ ಸಂಕಲ್ಪ ಮಾಡಿಕೊಳ್ಳಬೇಕು. 10)ನಂತರ ಆಕಾಶದ ಕಡೆ ನೋಡಿ ತಿರುಗಿ ನೋಡದೇ ಹಿಂದಿರುಗಿ ಬರಬೇಕು 12)5 ಶುಕ್ರವಾರಗಳ ಕಾಲ ದೀಪ ಬೆಳಗಬೇಕು.

ಹೀಗೆ ಶ್ರದ್ಧಾ, ಭಕ್ತಿಯಿಂದ ದೇವಿಗೆ ಗೋಧಿಹಿಟ್ಟಿನ ದೀಪವನ್ನು ಬೆಳಗಿದ್ರೆ ಜೀವನ ಪರ್ಯಂತ ಗ್ರಹ ದೋಷಗಳು ಕಾಟ ಕೊಡಲ್ಲ ಅಂತಾ ಪುರಾಣಗಳಲ್ಲಿ ಉಲ್ಲೇಖವಿದೆ.

ಇದನ್ನೂ ಓದಿ: Tonsure| ದೇವಸ್ಥಾನಗಳಲ್ಲಿ ಮುಡಿ ನೀಡೋದೇಕೆ? ಇದರ ಹಿಂದೆ ಅಡಗಿರೋ ಅರ್ಥವೇನು? 

Follow us on

Related Stories

Most Read Stories

Click on your DTH Provider to Add TV9 Kannada