ಕೆಲಸದ ನೆಪವೊಡ್ಡಿ ಯುವತಿ ಮೇಲೆ ರಾತ್ರಿಯೆಲ್ಲಾ ಅತ್ಯಾಚಾರ, ಬೆಳಗ್ಗೆ ಎದ್ದು ಕಾಮುಕ ಸೀದಾ ಪರಪ್ಪನ ಅಗ್ರಹಾರ ಜೈಲುಪಾಲು
ಅವನ ವಯಸ್ಸು 47, ಸ್ವಂತ ಮನೆ, ಜೀವನಕ್ಕೆ ಬೇಕಾದಷ್ಟು ಆಸ್ತಿ ಅಂತಸ್ತು ಇದೆ. ಆದರೆ ಈತನ ಖಯಾಲಿಯೇ ಬೇರೆ. ಮನೆಗೆಲಸದ ನೆಪದಲ್ಲಿ ಆನ್ಲೈನ್ ನಲ್ಲಿ ಯುವತಿಯರನ್ನು ಸರ್ಚ್ ಮಾಡೋದು, ಮನೆಗೆ ಬಂದ ಯುವತಿಯರ ಮೇಲೆ ಎರಗಿ ಬೀಳೋದು..
ಆನೇಕಲ್: ಅವನು ತನ್ನ ಮನೆಗೆ ಕೆಲಸದವಳನ್ನು (House maid) ಹುಡುಕೋ ನೆಪದಲ್ಲಿದ್ದ, ಆನ್ಲೈನ್ ನಲ್ಲಿ (Book My Bai) ಯುವತಿಯೋರ್ವಳನ್ನು ಕೆಲಸಕ್ಕೆ ಸೆಲೆಕ್ಟ್ ಮಾಡಿದ್ದ. ಮನೆಗೆಲಸಕ್ಕೆಂದು ಯುವತಿ ಬಂದ ತಕ್ಷಣ ಕಾಮ ಪಿಶಾಚಿಯಂತೆ ಎರಗಿ ಅತ್ಯಾಚಾರ (rape) ಎಸಗಿದ್ದಾನೆ. ಅಲ್ಲದೆ ಯಾರಿಗಾದರೂ ಹೇಳಿದ್ರೆ ಕೊಲೆ ಮಾಡಿ ಬಿಡ್ತೀನಿ ಅಂತಾನೂ ಹೆದರಿಸಿದ್ದ ಆ ರಾಕ್ಷಸನಿಗೆ ಪರಪ್ಪನ ಅಗ್ರಹಾರ ಪೊಲೀಸರು (Parappana Agrahara Jail) ಜೈಲಿನ ದಾರಿ ತೋರಿಸಿದ್ದಾರೆ.
ಅವನ ವಯಸ್ಸು 47, ಹೆಸರು ಬಾಬು ಅಲಿಯಾಸ್ ಕೇಶವಮೂರ್ತಿ. ಸ್ವಂತ ಮನೆ, ಜೀವನಕ್ಕೆ ಬೇಕಾದಷ್ಟು ಆಸ್ತಿ ಅಂತಸ್ತು ಇದೆ. ಆದರೆ ಈತನ ಖಯಾಲಿಯೇ ಬೇರೆ, ಆನ್ಲೈನ್ ನಲ್ಲಿ ಯುವತಿಯರನ್ನು ಸರ್ಚ್ ಮಾಡೋದು, ಮನೆಗೆ ಬಂದ ಯುವತಿಯರ ಮೇಲೆ ಎರಗಿ ಬೀಳೋದು.. ಮನೆಗೆಲಸದ ನೆಪದಲ್ಲಿ ಮಹಿಳೆಯರನ್ನು ಮನೆಗೆ ಕರೆತರುತ್ತಿದ್ದ ಈ ಕಾಮಿಕ್ರಿಮಿ.
ಬುಕ್ ಮೈ ಬಾಯಿ ಆನ್ಲೈನ್ ಅಪ್ಲಿಕೇಶನ್ ಮುಖಾಂತರ ಮನೆ ಕೆಲಸ ಮಾಡುವ ಹೆಣ್ಣುಮಕ್ಕಳ ಫೊಟೋ ನೋಡಿ ಕಾಮಾಂಧನಾಗಿ, ಪೈಶಾಚಿಕ ಕೃತ್ಯ ವೊಂದನ್ನು ನಡೆಸಿದ್ದಾನೆ. ನವೆಂಬರ್ 30 ರಂದು ಯುವತಿ ಮೇಲೆ ನಡೆದಿದ್ದ ಅತ್ಯಾಚಾರ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರು ನಗರ ಜಿಲ್ಲೆಯ, ಪರಪ್ಪನ ಅಗ್ರಹಾರ ಸಮೀಪದ ಕೂಡ್ಲು ಬಡಾವಣೆಯಲ್ಲಿ ವಾಸವಿದ್ದ ಈತ 21 ವರ್ಷದ ಜಾರ್ಖಂಡ್ ಮೂಲದ ಯುವತಿಯನ್ನು ರಾತ್ರಿಯಿಡೀ ಅತ್ಯಾಚಾರ ಮಾಡಿ ಈಗ ಜೈಲುಪಾಲಾಗಿದ್ದಾನೆ.
ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಕೆಲಸದವರು ಸಿಗಬೇಕು ಅಂದರೆ ಬಹಳ ಕಷ್ಟ. ಅಲ್ಲದೆ ಕೆಲಸದವರ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಮುಂಬೈ ಮೂಲದ ಕಂಪನಿಯೊಂದು ತನ್ನ ಗ್ರಾಹಕರಿಗೆ ವೇದಿಕೆಯೊಂದನ್ನು ಕಲ್ಪಿಸಿದೆ. ಮನೆಗೆಲಸ ಮಾಡಲು, ಮಕ್ಕಳನ್ನು ನೋಡಿಕೊಳ್ಳಲು, ವೃದ್ಧರನ್ನು ನೋಡಿಕೊಳ್ಳಲು ಮನೆಕೆಲಸದ ಮಹಿಳೆಯರು ಬೇಕಿದ್ದರೆ ಬುಕ್ ಮೈ ಬಾಯಿ ಎಂಬ ಆ್ಯಪ್ ನಿಂದ ಮನೆಗೆ ಬೇಕಾಗಿರುವ ಕೆಲಸದವರ ಪೋಟೊ ಅವರ ಇಚ್ಛೆ, ಅವರು ಏನೇನು ಕೆಲಸ ಮಾಡುತ್ತಾರೆ ಅನ್ನುವ ಮಾಹಿತಿ ಅಲ್ಲಿ ನೀಡಲಾಗಿರುತ್ತದೆ.
ಇದನ್ನೇ ಬಂಡವಾಳ ಮಾಡಿಕೊಂಡ ಕೇಶವಮೂರ್ತಿ, ಯುವತಿ ಪೋಟೊ ನೋಡಿ ಮರುಳಾಗಿದ್ದಾನೆ. ಆ್ಯಪ್ ಮುಖಾಂತರ ತನ್ನ ಪರಿಚಯ ಮಾಡಿಕೊಂಡು ಯುವತಿ ಕರೆತರಲು ಬೆಂಗಳೂರಿನ ವಿಲ್ಸನ್ ಗಾರ್ಡನ್ ಬಳಿಯ ಕಚೇರಿಗೆ ತೆರಳಿದ್ದಾನೆ. ತನ್ನ ವೃದ್ಧ ತಾಯಿಯನ್ನು ನೋಡಿಕೊಳ್ಳಲು ತಿಂಗಳಿಗೆ 15 ಸಾವಿರ ಕೊಡೋದಾಗಿ ಹೇಳಿದ ಬಾಬು ಒಟ್ಟು 18 ಸಾವಿರ ಫೀಸ್ ಕೊಟ್ಟು ಯುವತಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ಯುವತಿ ಮನೆಗೆ ಬಂದಿದ್ದೇ ತಡ ಕಿಚನ್ ನಲ್ಲಿ ಹೋಗಿ ಪಾತ್ರೆ ತೊಳೆಯಲು ಹೇಳಿದ ಕೀಚಕ, ಯುವತಿಯ ಮೇಲೆ ಸತತ ಅತ್ಯಾಚಾರ ವೆಸಗಿದ್ದಾನೆ
ತನ್ನ ಮನೆಯವರ ಲಾಲನೆಪಾಲನೆಗಾಗಿ ಜಾರ್ಖಂಡ್ ನಿಂದ ಬೆಂಗಳೂರಿಗೆ ಬಂದಿದ್ದ ಆ ಯುವತಿ ತನ್ನ ಜತೆ ಅದೇನು ಆಗ್ತಿದೆ ಅನ್ನೋದೇ ತಿಳಿಯಲಿಲ್ಲ. ರಾತ್ರಿಯಿಡೀ ಅವನ ಮನೆಯಲ್ಲೇ ಇದ್ದ ಆ ಯುವತಿ, ಕೇಶವಮೂರ್ತಿ ಹೊರಗೊಡೆ ಹೋಗೋದನ್ನೇ ಕಾಯ್ತಾ ಇದ್ದಳು. ಮನೆಯಲ್ಲಿ ಯುವತಿಯನ್ನು ಬಿಟ್ಟು ವಾರ್ನ್ ಮಾಡಿದ್ದ ಬಾಬು, ನಡೆದಿರುವ ವಿಷಯ ಯಾರಿಗಾದ್ರೂ ಹೇಳಿದರೆ ಕೊಲೆ ಮಾಡ್ತೀನಿ ಅಂತ ಬೆದರಿಸಿದ್ದ.
ಇದ್ರಿಂದ ಇನ್ನಷ್ಟು ಭಯಪಟ್ಟಿದ್ದ ಯುವತಿ, ತನ್ನ ಕಂಪನಿ ಮ್ಯಾನೇಜರ್ ಗೆ ನಡೆದಿರೋದನ್ನೆಲ್ಲಾ ಹೇಳಿದ್ದಾಳೆ. ಯುವತಿಯ ಈ ಪರಿಸ್ಥಿತಿಯ ಬಗ್ಗೆ ಬುಕ್ ಮೈ ಬಾಯಿ ಕಂಪನಿಯ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿ ಯುವತಿಯನ್ನು ಬಚಾವ್ ಮಾಡಿ, ಕೇಶವಮೂರ್ತಿಯನ್ನು ಅರೆಸ್ಟ್ ಮಾಡಿದ್ದಾರೆ. ಆನ್ಲೈನ್ ನಲ್ಲಿ ಮನೆಗೆಲಸದವರನ್ನು ಬುಕ್ ಮಾಡಿ ಅತ್ಯಾಚಾರ ಮಾಡಿದ ಉದಾಹರಣೆ ಬೆಂಗಳೂರಿಗೆ ಹೊಸ ಪ್ರಕರಣ ಆಗಿದ್ದು ಈ ಪ್ರಕರಣದಿಂದ ಮನೆಗೆಲಸದವರಲ್ಲಿ ಇನ್ನಷ್ಟು ಆತಂಕ ಭಾವನೆ ಮನೆ ಮಾಡಿದೆ.
ವರದಿ: ಸೈಯ್ಯದ್ ನಿಜಾಮುದ್ದೀನ್, ಟಿವಿ 9, ಆನೇಕಲ್
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:15 am, Tue, 20 December 22