ಇನ್ನು ಎರಡು ಮೂರು ದಿನಗಳಲ್ಲಿ ಮಾಹಿತಿ ಬಿಚ್ಚಿಡುತ್ತೇನೆ, ನಾನು ಯಾರನ್ನೂ ಟಾರ್ಗೆಟ್ ಮಾಡಲ್ಲ: ಮಾಜಿ ಸಿಎಂ ಕುಮಾರಸ್ವಾಮಿ
545 ಜನ ಆಯ್ಕೆಯಾದ ಪಟ್ಟಿಯನ್ನ ರದ್ದು ಮಾಡಿ ಪರೀಕ್ಷೆ ಬರೆಯಲು ಸರ್ಕಾರ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಕೆಲವರು ಸತ್ಯಾಗ್ರಹ ಮಾಡುತ್ತಿದ್ದು, ನನಗೂ ಬೆಂಬಲ ಕೊಡಿ ಅಂತ ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ.
ದೇವನಹಳ್ಳಿ: ನನ್ನದೇ ಆದ ಮೂಲಗಳ ಪ್ರಕಾರ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಇನ್ನು ಎರಡು ಮೂರು ದಿನಗಳಲ್ಲಿ ಮಾಹಿತಿಯನ್ನ ಬಿಚ್ಚಿಡುತ್ತೇನೆ. ನಾನು ಯಾರನ್ನೂ ಟಾರ್ಗೆಟ್ ಮಾಡಲ್ಲ ಎಂದು ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ (PSI Recruitment) ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ವಿಜಯಪುರ ಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. PSI ನೇಮಕಾತಿ ಅಕ್ರಮ ಕೇವಲ ಕಲಬುರಗಿಗೆ ಸೀಮಿತವಾಗಿಲ್ಲ. ಬೆಂಗಳೂರಿನಲ್ಲೂ ಅಕ್ರಮಕ್ಕೆ ದಾರಿ ಮಾಡಿದ್ದಾರೆಂಬ ಮಾಹಿತಿಯಿದೆ. ದೊಡ್ಡ ಅಧಿಕಾರಿಗಳು ಉತ್ತೇಜನ ನೀಡಿದ್ದಾರೆಂಬ ಮಾಹಿತಿ ಇದೆ. ಈ ಕುರಿತು ನಾನು ಎಲ್ಲ ರೀತಿಯಲ್ಲೂ ಮಾಹಿತಿ ಕಲೆ ಹಾಕ್ತಿದ್ದೇನೆ. ಎರಡ್ಮೂರು ದಿನಗಳಲ್ಲಿ ಎಲ್ಲ ಮಾಹಿತಿಯನ್ನೂ ಬಿಚ್ಚಿಡುತ್ತೇನೆ. 545 ಜನ ಆಯ್ಕೆಯಾದ ಪಟ್ಟಿಯನ್ನ ರದ್ದು ಮಾಡಿ ಪರೀಕ್ಷೆ ಬರೆಯಲು ಸರ್ಕಾರ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಕೆಲವರು ಸತ್ಯಾಗ್ರಹ ಮಾಡುತ್ತಿದ್ದು, ನನಗೂ ಬೆಂಬಲ ಕೊಡಿ ಅಂತ ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಿಐಡಿ ವಿಚಾರಣೆಯಲ್ಲಿ ಬಯಲಾಗಿದೆ ಪ್ರಭಾವಿ ಬಿಜೆಪಿ ಮಂತ್ರಿಯೊಬ್ಬರ ಹೆಸರು
ಪಿಎಸ್ಐ ನೇಮಕಾತಿಯಲ್ಲಿ ನಡೆದ ಅಕ್ರಮ ಈಗಾಗಲೇ ಬಯಲಾಗಿದೆ. ಅಕ್ರಮದ ಕಿಂಗ್ಪಿನ್ಗಳು ಸಿಐಡಿ ಪೊಲೀಸರ (CID Police) ವಶದಲ್ಲಿದ್ದಾರೆ. ಸಿಐಡಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿ ಒಂದೊಂದೆ ಸ್ಫೋಟಕ ಸತ್ಯವನ್ನು ಬಯಲಿಗೆಳೆಯುತ್ತಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಪ್ರಭಾವಿ ಮಂತ್ರಿಯೊಬ್ಬರ ಹೆಸರು ಕೇಳಿಬಂದಿದೆ. ಸಿಐಡಿ ವಿಚಾರಣೆಯಲ್ಲಿ ಬಿಜೆಪಿ ಮಂತ್ರಿಯೊಬ್ಬರ ಹೆಸರು ಕೇಳಿಬಂದಿದ್ದು, ಅಕ್ರಮದಲ್ಲಿ ಅವರ ತಮ್ಮನಿಗೆ 80 ಲಕ್ಷ ರೂಪಾಯಿ ಸೇರಿದೆ ಎಂದು ಹೇಳಲಾಗುತ್ತಿದೆ.
ವೈಎಂಆರ್ ಶೀಟ್ ಮಿಸ್ ಮ್ಯಾಚ್ ಆಗಿದ್ದ ಹಿನ್ನೆಲೆ ಸಿಐಡಿ 10 ಜನರಿಗೆ ನೋಟೀಸ್ ಕೊಟ್ಟಿತ್ತು. ಐದನೇ ರ್ಯಾಂಕ್ ಬಂದಿದ್ದ ದರ್ಶನ್ ಗೌಡನಿಗೆ ನೋಟೀಸ್ ನೀಡಲಾಗಿತ್ತು. ನೋಟೀಸ್ ಹಿನ್ನೆಲೆ ದರ್ಶನ್ ಗೌಡ ವಿಚಾರಣೆಗೆ ಹಾಜರಾಗಿದ್ದ. ವಿಚಾರಣೆಯಲ್ಲಿ 80 ಲಕ್ಷ ರೂಪಾಯಿ ಮಂತ್ರಿಯೊಬ್ಬರ ತಮ್ಮನಿಗೆ ಕೊಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದ. ಈ ಮಾಹಿತಿ ಆಧಾರದ ಮೇಲೆ ಮಂತ್ರಿ ತಮ್ಮನನ್ನು ವಿಚಾರಣೆಗೆ ಕರೆದಿದ್ದರು. ತಕ್ಷಣ ಪ್ರಭಾವಿ ಬಿಜೆಪಿ ಮಂತ್ರಿ ಸಿಐಡಿ ಅಧಿಕಾರಿಗೆ ಕರೆ ಮಾಡಿದ್ದರಂತೆ. ಯಾವುದೇ ಕಾರಣಕ್ಕೂ ವಿಚಾರಣೆ ಮಾಡಬೇಡಿ. ಈಗಲೇ ಬಿಟ್ಟು ಕಳಿಸಿ ಎಂದು ತಿಳಿಸಿದ್ದಾರೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:28 pm, Mon, 2 May 22