KIADB ಅಧಿಕಾರಿಗಳಿಂದ ಕೋಟ್ಯಂತರ ರೂ. ಗುಳುಂ ಮಾಡಲು ಪ್ಲ್ಯಾನ್‌? ರಾತ್ರೋರಾತ್ರಿ ತಲೆ ಎತ್ತಿದೆ ವಿವಿಧ ಹಣ್ಣಿನ ಲಕ್ಷಾಂತರ ಸಸಿಗಳು

ಕೆಐಎಡಿಬಿ ಹಗರಣಗಳು ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿವೆ. ಅದರಂತೆ ಇದೀಗ ಬೆಂಗಳೂರು ಗ್ರಾಮಾಂತರ(Bengaluru rural) ಜಿಲ್ಲೆಯ ನೆಲಮಂಗಲ, ದಾಬಾಸ್‌ಪೇಟೆ‌ ಸುತ್ತಮುತ್ತ ಬ್ರೋಕರ್‌ಗಳ ಜೊತೆ ಸೇರಿ ಕೋಟ್ಯಂತರ ರೂಪಾಯಿ ಗುಳುಂ ಮಾಡಲು ಕೆಐಎಡಿಬಿ ಅಧಿಕಾರಿಗಳು ಪ್ಲ್ಯಾನ್‌ ಮಾಡಿರುವ ಆರೋಪ ಕೇಳಿಬಂದಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

KIADB ಅಧಿಕಾರಿಗಳಿಂದ ಕೋಟ್ಯಂತರ ರೂ. ಗುಳುಂ ಮಾಡಲು ಪ್ಲ್ಯಾನ್‌? ರಾತ್ರೋರಾತ್ರಿ ತಲೆ ಎತ್ತಿದೆ ವಿವಿಧ ಹಣ್ಣಿನ ಲಕ್ಷಾಂತರ ಸಸಿಗಳು
KIADB ಅಧಿಕಾರಿಗಳಿಂದ ಕೋಟ್ಯಂತರ ರೂ. ಗುಳುಂ ಮಾಡಲು ಪ್ಲ್ಯಾನ್‌
ಬಿ ಮೂರ್ತಿ, ನೆಲಮಂಗಲ Edited By: ಕಿರಣ್ ಹನುಮಂತ್​ ಮಾದಾರ್

Updated on: May 21, 2024 | 3:01 PM

ಬೆಂಗಳೂರು ಗ್ರಾಮಾಂತರ, ಮೇ.21: ಬ್ರೋಕರ್‌ಗಳ ಜೊತೆ ಸೇರಿ ಕೋಟ್ಯಂತರ ರೂಪಾಯಿ ಗುಳುಂ ಮಾಡಲು ಕೆಐಎಡಿಬಿ ಅಧಿಕಾರಿಗಳು ಪ್ಲ್ಯಾನ್‌ ಮಾಡಿರುವ ಆರೋಪ ಬೆಂಗಳೂರು ಗ್ರಾಮಾಂತರ(Bengaluru rural) ಜಿಲ್ಲೆಯ ನೆಲಮಂಗಲ, ದಾಬಾಸ್‌ಪೇಟೆ‌ ಸುತ್ತಮುತ್ತ ಕೇಳಿಬಂದಿದೆ. ‘ಕೈಗಾರಿಕಾ ಉದ್ದೇಶಕ್ಕೆಂದು ರೈತರ ಭೂಮಿಯನ್ನು ಕೆಐಎಡಿಬಿ(KIADB) ಖರೀದಿಸುತ್ತದೆ. ಆದರೆ, ಸರ್ಕಾರ ಹಣ ನೀಡಿ‌ ಖರೀದಿಸಿದರೂ ಮತ್ತೊಂದು ಮಾರ್ಗದಲ್ಲಿ ಬ್ರೋಕರ್​ಗಳ ಮುಖಾಂತರ ಕೆಐಎಡಿಬಿ‌ ಅಧಿಕಾರಿಗಳು ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕುತ್ತಿದ್ದಾರೆ.

ರಾತ್ರೋರಾತ್ರಿ‌‌ ಮರಗಳನ್ನ ನೆಟ್ಟಿ, ಪ್ರತಿ ಮರಕ್ಕೂ ಪರಿಹಾರದ ಹಣ ಗುಳುಂ ಮಾಡೋ ಪ್ಲ್ಯಾನ್‌

ನೆಲಮಂಗಲ, ದಾಬಾಸ್ ಪೇಟೆ‌ಯ ಸುತ್ತಮುತ್ತಲಿನ ಪ್ರದೇಶದಲ್ಲಿನ ಭೂಮಿಗೆ ಸರ್ಕಾರ ವಶಕ್ಕೆ ಪಡೆಯೊದಕ್ಕೆ ನೀಡುವ ಹಣಕ್ಕಿಂತ ಹೆಚ್ಚಿನ ಹಣ‌ ಮಾಡಲು ಅಧಿಕಾರಿಗಳು ಮುಂದಾಗಿದ್ದು, ಈ ಹಿನ್ನಲೆ ತೋಟಗಾರಿಕೆ ಇಲಾಖೆ ಮತ್ತು ಕೆಐಎಡಿಬಿ ಅಧಿಕಾರಿಗಳು ಆಂಧ್ರದ ರಾಜಮಂಡ್ರಿ ನರ್ಸರಿಯಿಂದ ರಾತ್ರೋರಾತ್ರಿ‌‌ ಅಡಿಕೆ, ಮಾವು, ಹುಣಸೆ ಸೇರಿ ಲಕ್ಷಾಂತರ ಸಸಿಗಳನ್ನು ತರಿಸಿ ನೆಟ್ಟು, ಪ್ರತಿ ಗಿಡಕ್ಕೂ ಪರಿಹಾರದ ಹಣವನ್ನು ಗುಳುಂ ಮಾಡುವ ಪ್ಲ್ಯಾನ್‌ ಇದಾಗಿದೆ.

ಇದನ್ನೂ ಓದಿ:KIADB ಮತ್ತೊಂದು ಹಗರಣ: ಸತ್ತವರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣ ಹೊಡೆದಿದ್ದಾರಂತೆ! ಸಿಐಡಿ, ರಾಜ್ಯ ಸರ್ಕಾರ ಸೈಲೆಂಟ್

ಅಮಾಯಕ ರೈತರಿಗೆ ನಕಲಿ ದಾಖಲೆ ಸೃಷ್ಟಿಸಿ ಹಣ ಪೀಕಲು ಸಜ್ಜಾದ ಅಧಿಕಾರಿಗಳು

ಒಂದೊಂದು ಸಸಿಗೂ ರೈತರಿಗೆ ಸರ್ಕಾರ ಪರಿಹಾರ ನೀಡುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಅಧಿಕಾರಿಗಳು, ಒಂದೊಂದು ಎಕರೆಯಲ್ಲಿ ಸಾವಿರಾರು‌ ಮರದ ಸಸಿಗಳನ್ನು ತಂದು ನೆಟ್ಟು, ಬ್ರೋಕರ್​ಗಳ ಜೊತೆ ಸೇರಿ ಅಧಿಕಾರಿಗಳು ಕೋಟ್ಯಾಂತರ ಹಣ ಗುಳುಂ ಮಾಡಲು ಮುಂದಾಗಿದ್ದಾರೆ. ಅಮಾಯಕ ರೈತರಿಗೆ ಬೋಗಸ್ ದಾಖಲೆ ಸೃಷ್ಟಿಸಿ ಹಣ ಪೀಕಲು ಸಜ್ಜಾಗಿದ್ದು, ಮಾಚನಹಳ್ಳಿ, ಘಂಟೆ ಹೊಸಹಳ್ಳಿ, ಗೆದ್ದಲಹಳ್ಳಿ, ಹುಲಕುಂಟೆ, ಕೋಡಿಪಾಳ್ಯ, ಬಿದಲೂರು,‌ ಹನುಮಂತಪುರ, ಗೊಟ್ಟಿಕೆರೆ, ಬರಗೇನಹಳ್ಳಿ, ಕಾಸರಘಟ್ಟ,ಕಂಬಾಳು, ಓಬಳಾಪುರ ಸೇರಿದಂತೆ ‌ಹಲವು ಗ್ರಾಮದಲ್ಲಿನ ಭೂಮಿ, ಮತ್ತು ಈಗಾಗಲೇ ರಾಜ್ಯದ ಹಲವು ಜಿಲ್ಲೆಯಲ್ಲಿ ಐಎಡಿಬಿ‌ ಅಧಿಕಾರಿಗಳು ಕೋಟ್ಯಾಂತರ ರೂಪಾಯಿ ಹಣ ಗುಳಂ ಮಾಡಿರುವ ಆರೋಪ ಕೇಳಿಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿ ಮೂರ್ತಿ, ನೆಲಮಂಗಲ

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಬೀರಯ್ಯನಪಾಳ್ಯದ ಮೂರ್ತಿ.ಬಿ.ನಾನು ಓದಿದ್ದು ಪಿಯುಸಿ,ಹೆಸರಘಟ್ಟ ಫಿಲ್ಮ್ ಆ್ಯಂಡ್ ಟಿವಿ ಕಾಲೇಜಿನಲ್ಲಿ ಕೆಲಸಗಾರನಾಗಿ ಕ್ಯಾಮರಾ ಕಲಿತು ದಿನಪತ್ರಿಕೆಗಳಿಗೆ ಪೋಟೋ ಕಳಿಸುವ ಕೆಲಸ ಬಳಿಕ 17ವರ್ಷದ ಹಿಂದೆ ನೇರವಾಗಿ ಟಿವಿನೈ ನಲ್ಲಿ ಕ್ಯಾಮರಾಮೆನ್ ಕೆಲಸಕ್ಕೆ ಸೇರಲಾಯಿತು. ಕಳೆದ 6ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕ್ರೈಂ ಸಿಟಿ,ರಕ್ತಮಂಗಲ ಅಂತೆಲ್ಲ ಖ್ಯಾತಿ ಪಡೆದಿದ್ದ ನೆಲಮಂಗಲಕ್ಕೆ ಕ್ಯಾಮರಾ ಮ್ಯಾನ್ ಹಾಗೂ ವರದಿಗಾರನಾಗಿ ಕೆಲಸ ಮಾಡುವ ಅವಕಾಶ ನಮ್ಮ ಸೀನಿಯರ್ ಗಳಿಂದ ಕೂಡಿ ಬಂತು,ತನಗಿಂತ ಚನ್ನಾಗಿ ಕೆಲಸ ಮಾಡುವ ಕ್ಯಾಮರಾ ಮ್ಯಾನ್ ಗಳು ಇದ್ದರು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ,ನಾನು ಈ ಭಾಗದಲ್ಲಿ ಬಂದಾಗಿನಿಂದ ರೌಡಿಶೀಟರಗಳ ಉಪಟಳ ಕಂಟ್ರೋಲ್ಗೆ ಬಂದಿದೆ,ಯಾವುದೇ ಒಂದು ಚಿಕ್ಕದಾಗಲಿ ದೊಡ್ಡ ಮಟ್ಟದ ಕ್ರೈಂ ಅದ್ರೂ ಮೊದಲು ನಮ್ಮಲ್ಲಿ ನ್ಯೂಸ್ ಕವರ್ ಆಗಿರುತ್ತೆ,

Loading...
Unable to load recommendations.
Follow Us