KIADB: ಧಾರವಾಡದ ಕೆಐಎಡಿಬಿ ಭ್ರಷ್ಟಾಚಾರದ ವಿರುದ್ಧ ಹಿರಿಯ ಅಧಿಕಾರಿಗಳಿಂದ ತನಿಖೆ: ಧಾರವಾಡ ಡಿಸಿ ಗುರುದತ್ತ ಹೆಗಡೆ ಆದೇಶ

ಹಗರಣಕ್ಕೆ ಸಂಬಂಧಿಸಿದಂತೆ ಧಾರವಾಡದ ಕೆಐಎಡಿಬಿ ಹಿರಿಯ ಅಧಿಕಾರಿಗಳಿಂದ ತನಿಖೆ ಶುರುವಾಗಿದೆ. ಒಟ್ಟು 9 ಮಂದಿ ತನಿಖೆ ನಡೆಸುತ್ತಿದ್ದಾರೆ. ತನಿಖಾ ವರದಿಯನ್ನು ಬೆಂಗಳೂರಿಗೆ ಕಳಿಸಲಾಗುವುದು. ತಪ್ಪು ಮಾಡಿದವರಿಗೆ ಖಂಡಿತ ಶಿಕ್ಷೆ ಆಗುತ್ತೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಧಾರವಾಡದ ಡಿಸಿ ಗುರುದತ್ತ ಹೆಗಡೆ.

KIADB: ಧಾರವಾಡದ ಕೆಐಎಡಿಬಿ ಭ್ರಷ್ಟಾಚಾರದ ವಿರುದ್ಧ ಹಿರಿಯ ಅಧಿಕಾರಿಗಳಿಂದ ತನಿಖೆ: ಧಾರವಾಡ ಡಿಸಿ ಗುರುದತ್ತ ಹೆಗಡೆ ಆದೇಶ
ಧಾರವಾಡ ಡಿಸಿ ಗುರುದತ್ತ ಹೆಗಡೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Dec 08, 2022 | 5:45 PM

ಧಾರವಾಡದ ಕೆಐಎಡಿಬಿ (KIADB) ಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆ ಕೊನೆಗೂ ಶುರುವಾಗಿದೆ. ಅನೇಕರು ಸೇರಿಕೊಂಡು ಒಂದೇ ಭೂಮಿಗೆ ಎರಡು ಬಾರಿ ಪರಿಹಾರ (Compensation) ಹೊಡೆದುಕೊಂಡು ಸರಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿತ್ತು. ಇದೀಗ ಕೊನೆಗೂ ಅಧಿಕಾರಿಗಳು ಎಲ್ಲ ಅಕ್ರಮಗಳ ತನಿಖೆ ಶುರು ಮಾಡೋ ಮೂಲಕ ಭ್ರಷ್ಟರ ಬುಡಕ್ಕೆ ಕೈ ಹಾಕಿದ್ಧಾರೆ.

ಧಾರವಾಡದ (Dharwad) ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ಕಚೇರಿಯೊಳಗೆ ನಡೆದಷ್ಟು ಅಕ್ರಮ, ನಾಡಿನ ಬೇರೆ ಯಾವ ಕಚೇರಿಯಲ್ಲಿಯೂ ನಡೆದಿಲ್ಲ ಅಂದರೆ ತಪ್ಪಾಗಲಾರದು. ಇತ್ತೀಚಿಗಷ್ಟೇ 2010 ರಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಯ ಪರಿಹಾರ ಮೊತ್ತದಲ್ಲಿ ಈಗಾಗಲೇ ರೈತರಿಗೆ (Farmers) ಪಾವತಿಸಿರುವ ಮೊತ್ತವನ್ನು ಮತ್ತೆ 2022 ರಲ್ಲಿ ವಿವಿಧ ಬ್ಯಾಂಕ್ ಗಳಲ್ಲಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಮತ್ತೆ ಲೂಟಿ ಮಾಡಿದ್ದರ ಬಗ್ಗೆ ಆರೋಪ ಕೇಳಿ ಬಂದಿತ್ತು. 21 ಕೋಟಿ 14 ಲಕ್ಷ 78 ಸಾವಿರದ 468 ರೂಪಾಯಿ ಮೊತ್ತವನ್ನು ಹಲವಾರು ರೈತರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆಗೆದು ಆರ್ ಟಿ ಜಿ ಎಸ್ ಮೂಲಕ ಎರಡನೇ ಬಾರಿಗೆ ಜಮಾ ಮಾಡಿಸಿಕೊಳ್ಳಲಾಗಿದೆ ಅಂತಾ ಜನ ಜಾಗೃತಿ ಸಂಘದ ಬಸವರಾಜ ಕೊರವರ್ ಆರೋಪಿಸಿದ್ದರು.

ಆಗಿನ ಧಾರವಾಡದ ವಿಶೇಷ ಭೂಸ್ವಾಧೀನಾಧಿಕಾರಿ ವಿ.ಡಿ. ಸಜ್ಜನ್ ಅವರ ಅವಧಿಯಲ್ಲಿ ಎಪ್ರಿಲ್ 2021ರಿಂದ ಎಪ್ರಿಲ್ 2022 ರ ವರೆಗೆ ಅಂದಾಜು 140 ಕೋಟಿ ಅನುದಾನ ಬಿಡುಗಡೆ ಆಗಿದೆ. ಹೀಗಾಗಿ ಇದರಲ್ಲಿ ಐಎಎಸ್ ಅಧಿಕಾರಿ ಹಾಗೂ ಕೆಐಎಡಿಬಿಯ ಸಿಇಒ ಎನ್. ಶಿವಶಂಕರ್, ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರ ಆಪ್ತ ಕಾರ್ಯದರ್ಶಿ ದಯಾನಂದ ಭಂಡಾರಿ ಸೇರಿದಂತೆ ಅನೇಕರು ಶಾಮೀಲಾಗಿದ್ದಾರೆ ಅಂತಾ ಜನಜಾಗೃತಿ ಸಂಘ ಆರೋಪಿಸಿತ್ತು.

ಹಗರಣದ ವಿವರ ಓದಲು ಇಲ್ಲಿ ಕ್ಲಿಕ್ ಮಾಡಿ

ಇದೀಗ ಈ ಹಗರಣಕ್ಕೆ ಸಂಬಂಧಿಸಿದಂತೆ ಕೆಐಎಡಿಬಿ ಹಿರಿಯ ಅಧಿಕಾರಿಗಳಿಂದ ತನಿಖೆ ಶುರುವಾಗಿದೆ. ಹಿರಿಯ ಅಧಿಕಾರಿಗಳು ಸೇರಿ ಒಟ್ಟು ಒಂಭತ್ತು ಜನರು ತನಿಖೆ ನಡೆಸುತ್ತಿದ್ದಾರೆ. ಈ ತನಿಖೆಯ ಬಳಿಕ ವರದಿಯನ್ನು ಬೆಂಗಳೂರಿಗೆ ಕಳಿಸಲಾಗುವುದು. ತನಿಖೆಯಲ್ಲಿ ಅಕ್ರಮ ಕಂಡು ಬಂದರೆ ತಪ್ಪು ಮಾಡಿದವರಿಗೆ ಖಂಡಿತ ಶಿಕ್ಷೆ ಆಗುತ್ತೆ ಅನ್ನೋ ವಿಶ್ವಾಸವನ್ನು ಧಾರವಾಡದ ಡಿಸಿ ಗುರುದತ್ತ ಹೆಗಡೆ ವ್ಯಕ್ತಪಡಿಸುತ್ತಾರೆ.

ಇನ್ನು ಈ ಹಗರಣದಲ್ಲಿ ಬ್ಯಾಂಕ್ ಅಧಿಕಾರಿಗಳು ಕೂಡ ಸಾಥ್ ನೀಡಿರೋ ಬಗ್ಗೆಯೂ ಅನುಮಾನ ವ್ಯಕ್ತವಾಗಿತ್ತು. ಏಕೆಂದರೆ ಇಷ್ಟೊಂದು ದೊಡ್ಡ ಮೊತ್ತದ ಹಣ ವರ್ಗಾವಣೆ ಆಗಲು ಹೇಗೆ ಸಾಧ್ಯ ಅನ್ನೋದೇ ಇದಕ್ಕೆ ಕಾರಣವಾಗಿತ್ತು. ಇದೀಗ ಆ ನಿಟ್ಟಿನಲ್ಲಿಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ಇದರ ತನಿಖೆಯನ್ನು ಕೆಐಎಡಿಬಿ ಅಧಿಕಾರಿಗಳೇ ಮಾಡೋದ್ರಿಂದ ಯಾವುದೇ ಪ್ರಯೋಜನವಿಲ್ಲ ಅನ್ನೋ ಮಾತು ಕೇಳಿ ಬರುತ್ತಿವೆ. ಏಕೆಂದರೆ, ಅದೇ ಮಂಡಳಿಯ ಅಧಿಕಾರಿಗಳು ಯಾವತ್ತೂ ಅಕ್ರಮವನ್ನು ಸರಿಯಾಗಿ ಪತ್ತೆ ಹಚ್ಚಲಾರರು. ಎಲ್ಲವನ್ನೂ ಮುಚ್ಚಿಟ್ಟುಬಿಡುತ್ತಾರೆ ಅನ್ನೋ ಅನುಮಾನದ ಮಾತು ಕೂಡ ಕೇಳಿ ಬರುತ್ತಿದೆ. ಇದೇ ಕಾರಣಕ್ಕೆ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಅನ್ನುತ್ತಾರೆ ಬಸವರಾಜ ಕೊರವರ್, ಜನ ಜಾಗೃತಿ ಸಂಘದ ಅಧ್ಯಕ್ಷರು.

ಈ ಪ್ರಕರಣ ಅತ್ಯಂತ ಗಂಭೀರ ಸ್ವರೂಪದ್ದಾಗಿದ್ದು, ತನಿಖೆಯೂ ಸರಿಯಾದ ದಿಕ್ಕಿನಲ್ಲಿಯೇ ಆಗಬೇಕು. ರೈತರ ಹೆಸರಿನಲ್ಲಿ ಈ ರೀತಿ ಕಳ್ಳಾಟ ಆಡಿ, ಕೋಟಿ ಕೋಟಿ ಹಣವನ್ನು ನುಂಗಿದ ಎಲ್ಲರಿಗೂ ಸರಿಯಾದ ಶಾಸ್ತಿಯಾಗಲೇಬೇಕಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇಂಥ ಮತ್ತಷ್ಟು ಪ್ರಕರಣಗಳು ನಡೆಯೋದು ಗ್ಯಾರಂಟಿ. (ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ 9, ಧಾರವಾಡ)

ರಾಜ್ಯದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್  ಮಾಡಿ

‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್