ಬೆಂಗಳೂರು ಗ್ರಾಮಾಂತರ, ಜು.17: ಬೈಕ್ಗೆ ಕಾರು ಡಿಕ್ಕಿಯಾಗಿ ಕೆಳಗೆ ಬಿದ್ದ ಬಾಲಕನ ಮೇಲೆ ಟಿಪ್ಪರ್ ಹರಿದ ಘಟನೆ ರಾಷ್ಟ್ರೀಯ ಹೆದ್ದಾರಿ4 ರ ಚಿಕ್ಕಬಿದರಕಲ್ಲು(Chikkabidarakallu) ಗ್ರಾಮದ ಬಳಿ ನಡೆದಿದೆ. ಅದೃಷ್ಟವಶಾತ್ ಬೈಕ್ನಲ್ಲಿದ್ದ ತಾಯಿ ಪಾರಾಗಿದ್ದು, 12 ವರ್ಷದ ಬಾಲಕ ಸ್ಥಳದಲ್ಲೇ ಅಸುನೀಗಿದ್ದಾನೆ. ಇನ್ನು ಅಪಘಾತದ ಬಳಿಕ ಕಾರಿನ ಜೊತೆ ಚಾಲಕ ಎಸ್ಕೇಪ್, ಆಗಿದ್ದಾನೆ. ಸಧ್ಯ ಟಿಪ್ಪರ್ ಚಾಲಕನನ್ನು ವಶಕ್ಕೆ ಪಡೆದು, ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆ್ಯಕ್ಟೀವಾ ಬೈಕ್ನಲ್ಲಿ ತಾಯಿ-ಮಗ ಹೋಗುತ್ತಿದ್ದರು. ಈ ವೇಳೆ ಕಾರು ಡಿಕ್ಕಿಯಾಗಿ, ಕೆಳಗೆ ಬಿದ್ದ ಬಾಲಕನ ಮೇಲೆ ಚಾಲಕನ ನಿಯಂತ್ರಣ ಸಿಗದೆ ಟಿಪ್ಪರ್ ಹರಿದಿದೆ. ಬೈಕ್ನ ಬಲಭಾಗಕ್ಕೆ ಬಿದ್ದಿದ್ದರಿಂದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೈಕ್ನ ಎಡ ಭಾಗಕ್ಕೆ ಬಿದ್ದಿದ್ದ ತಾಯಿ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಆದರೆ, ಅಪಘಾತಕ್ಕೆ ಕಾರಣವಾದ ಕಾರು ಚಾಲಕ ಸ್ಥಳದಿಂದ ಎಸ್ಕೇಫ್ ಆಗಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿ ಕಾರು ಚಾಲಕನ ಸೆರೆಗೆ ಶೋಧಕಾರ್ಯ ಆರಂಭಿಸಿದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರಿನಲ್ಲಿ ಮುಂದುವರಿದ ಪ್ರವಾಸಿಗರ ಹುಚ್ಚಾಟ; ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಅಪಘಾತ
ಹಾವೇರಿ: ವಾಲ್ಮೀಕಿ ವೃತ್ತದ ಬಳಿ ಸರ್ಕಾರಿ ಬಸ್ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ. ನಗರದ ಇಜಾರಿ ಲಕಮಾಪುರದ ನಿವಾಸಿ ಜಯಲಕ್ಷ್ಮೀ ಕೂಳೇನೂರು(38) ಮೃತರು. ಇನ್ನು ಮೃತ ಮಹಿಳೆ, ಸರ್ಕಾರಿ ಮಹಿಳಾ ಹಾಸ್ಟೆಲ್ ನಲ್ಲಿ ಅಡುಗೆ ಮಾಡಲು ಬಂದಿದ್ದರು. ಪತಿ ರಸ್ತೆ ಪಕ್ಕ ನಿಂತು ಕರೆದರೂ ಎಂದು ರಸ್ತೆ ದಾಟಲು ಹೋಗಿದ್ದಾಗ, ಅತ್ತ ಹುಬ್ಬಳ್ಳಿಯಿಂದ ಹಾವೇರಿಯತ್ತ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದು ದುರ್ಘಟನೆ ನಡೆದಿದೆ. ಈ ಕುರಿತು ಹಾವೇರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:57 pm, Wed, 17 July 24