AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು ಆರೋಪ; ಆಸ್ಪತ್ರೆ ವಿರುದ್ದ ಕುಟುಂಬಸ್ಥರ ಆಕ್ರೋಶ

ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವನ್ನಪ್ಪಿದ ಆರೋಪ ಆನೇಕಲ್(Anekal) ಪಟ್ಟಣದ ಖಾಸಗಿ ಆಸ್ಪತ್ರೆಯೊಂದರ ವೈದ್ಯರ ಮೇಲೆ ಕೇಳಿಬಂದಿದೆ. ಇದೀಗ ಆನೇಕಲ್ ಪೊಲೀಸ್ ಠಾಣೆಯಲ್ಲಿ ಮೃತರ ಅಣ್ಣ ಮಧುಸೂದನ್ ಎಂಬುವವರು ದೂರು ದಾಖಲು ಮಾಡಿದ್ದಾರೆ. ಕೂಡಲೇ ಅಮ್ಮ ಆಸ್ಪತ್ರೆ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು ಆರೋಪ; ಆಸ್ಪತ್ರೆ ವಿರುದ್ದ ಕುಟುಂಬಸ್ಥರ ಆಕ್ರೋಶ
ಮೃತ ಬಾಣಂತಿ
ರಾಮು, ಆನೇಕಲ್​
| Edited By: |

Updated on:Apr 16, 2024 | 4:00 PM

Share

ಬೆಂಗಳೂರು ಗ್ರಾಮಾಂತರ, ಏ.16: ಆನೇಕಲ್(Anekal) ಪಟ್ಟಣದ ಖಾಸಗಿ ಆಸ್ಪತ್ರೆಯೊಂದರ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವನ್ನಪ್ಪಿದ ಆರೋಪ ಕೇಳಿಬಂದಿದೆ. ಕವಿತಾ(24) ಮೃತ ದುರ್ದೈವಿ. ಇನ್ನು ಆಸ್ಪತ್ರೆ ವಿರುದ್ಧ ಮೃತ ಬಾಣಂತಿ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಣಂತಿಗೆ ಇದೇ ತಿಂಗಳು 13ನೇ ತಾರೀಖು ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೇರಿಗೆಗಾಗಿ ಅಮ್ಮ ಆಸ್ಪತ್ರೆಗೆ ದಾಖಲು ಮಾಡಿಲಾಗಿತ್ತು. 14ನೇ ತಾರೀಖು ಆಪರೇಷನ್ ಮೂಲಕ ವೈದ್ಯರು ಹೆರಿಗೆ ಮಾಡಿಸಿದ್ದರು.

ಹೆರಿಗೆ ಬಳಿಕ ತೀವ್ರ ರಕ್ತಸ್ರಾವದಿಂದ ಬಳಲಿದ ತಾಯಿ

ಇನ್ನು ಹೆರಿಗೆ ಆದ ಬಳಿಕ ತಾಯಿ ತೀವ್ರ ರಕ್ತಸ್ರಾವದಿಂದ ಬಳಲಿದ್ದಾರೆ. ಈ ಹಿನ್ನಲೆ ಪರಿಸ್ಥಿತಿ ಹದಗೆಡುತ್ತಿದ್ದಂತೆ ನಾರಾಯಣ ಹೆಲ್ತ್ ಸಿಟಿಗೆ ಶಿಫ್ಟ್ ಮಾಡಲಾಗಿದೆ. ಆದ್ರೆ, ನಾರಾಯಣ ಹೆಲ್ತ್ ಸಿಟಿಯಲ್ಲಿ ಬಾಣಂತಿ ಕೊನೆಯುಸಿರೆಳೆದಿದ್ದಾರೆ. ವೈದ್ಯರ ನಿರ್ಲಕ್ಷ್ಯ ಆರೋಪದ ಮೇಲೆ ಇದೀಗ ಆನೇಕಲ್ ಪೊಲೀಸ್ ಠಾಣೆಯಲ್ಲಿ ಮೃತ ಕವಿತಾ ಅಣ್ಣ ಮಧುಸೂದನ್ ದೂರು ದಾಖಲು ಮಾಡಿದ್ದಾರೆ. ಕೂಡಲೇ ಅಮ್ಮ ಆಸ್ಪತ್ರೆ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ:ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು ಆರೋಪ; ರಸ್ತೆ ತಡೆದು ಪ್ರತಿಭಟನೆ ನಡೆಸಿದ ಕುಟುಂಬಸ್ಥರು

ಪಾದಾಚಾರಿ ರಸ್ತೆದಾಟುವ ವೇಳೆ ಸರಣಿ ಅಪಘಾತ

ಬೆಂಗಳೂರು: ಪಾದಚಾರಿಗೆ ಡಿಕ್ಕಿ ತಪ್ಪಿಸಲು ಬ್ರೇಕ್ ಹಾಕಿದ್ದಕ್ಕೆ ಏರ್ಪೋರ್ಟ್ ರಸ್ತೆಯ ಚಿಕ್ಕಜಾಲ‌ ಫ್ಲೈ ಓವರ್ ಮೇಲೆ ಸರಣಿ ಅಪಘಾತ ಸಂಭವಿಸಿದೆ. ಹಿಂದಿನಿಂದ ಒಂದಕ್ಕೊಂದು 3 ಕಾರುಗಳು ಡಿಕ್ಕಿ ಹೊಡೆದಿದೆ. ಕೂಡಲೇ ಗಾಯಾಳು ಪಾದಾಚಾರಿಯನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತ ಹಿನ್ನಲೆ ಏರ್ಪೋಟ್ ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ಈ ಕುರಿತು ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:53 pm, Tue, 16 April 24

Follow Us
ಇರಾನ್ ಮೇಲಿನ ದಾಳಿಯ ಮೊದಲ ವಿಡಿಯೋ ರಿಲೀಸ್ ಮಾಡಿದ ಇಸ್ರೇಲ್
ಇರಾನ್ ಮೇಲಿನ ದಾಳಿಯ ಮೊದಲ ವಿಡಿಯೋ ರಿಲೀಸ್ ಮಾಡಿದ ಇಸ್ರೇಲ್
ಯುದ್ಧ: ದುಬೈ ಏರ್​ಪೋರ್ಟ್​​​ನಲ್ಲಿ ಕುಟುಂಬ ಸಮೇತ ಸಿಲುಕಿದ ​​ಭೋಜೇಗೌಡ
ಯುದ್ಧ: ದುಬೈ ಏರ್​ಪೋರ್ಟ್​​​ನಲ್ಲಿ ಕುಟುಂಬ ಸಮೇತ ಸಿಲುಕಿದ ​​ಭೋಜೇಗೌಡ
ಮಾ.3 ಸಂಪೂರ್ಣ ಚಂದ್ರಗ್ರಹಣ;ಕರ್ನಾಟಕದಲ್ಲಿ ಎಷ್ಟು ನಿಮಿಷ ಗೋಚರಿಸಲಿದೆ?
ಮಾ.3 ಸಂಪೂರ್ಣ ಚಂದ್ರಗ್ರಹಣ;ಕರ್ನಾಟಕದಲ್ಲಿ ಎಷ್ಟು ನಿಮಿಷ ಗೋಚರಿಸಲಿದೆ?
ಇರಾನ್​​​-ಇಸ್ರೇಲ್​​​ ಯುದ್ಧ: ಯುದ್ಧಭೂಮಿಯಿಂದ ಕನ್ನಡಿಗ ಹೇಳಿದ್ದಿಷ್ಟು
ಇರಾನ್​​​-ಇಸ್ರೇಲ್​​​ ಯುದ್ಧ: ಯುದ್ಧಭೂಮಿಯಿಂದ ಕನ್ನಡಿಗ ಹೇಳಿದ್ದಿಷ್ಟು
ಮೀನ ರಾಶಿಯ ಮೇಲೆ ಕೇತುಗ್ರಸ್ತ ಚಂದ್ರಗ್ರಹಣದ ಪ್ರಭಾವ ಹೇಗಿರಲಿದೆ?
ಮೀನ ರಾಶಿಯ ಮೇಲೆ ಕೇತುಗ್ರಸ್ತ ಚಂದ್ರಗ್ರಹಣದ ಪ್ರಭಾವ ಹೇಗಿರಲಿದೆ?
ಡಿಕೆ ಶಿವಕುಮಾರ್ ಸಿಎಂ ಆಗುವ ಬಗ್ಗೆ ಮತ್ತೊಮ್ಮೆ ಭವಿಷ್ಯ ನುಡಿದ ಶಾಸಕ
ಡಿಕೆ ಶಿವಕುಮಾರ್ ಸಿಎಂ ಆಗುವ ಬಗ್ಗೆ ಮತ್ತೊಮ್ಮೆ ಭವಿಷ್ಯ ನುಡಿದ ಶಾಸಕ
ಕತಾರ್, ಬಹ್ರೇನ್, ಸೌದಿಯ ಯುಎಸ್​ ವಾಯುನೆಲೆಗಳ ಮೇಲೆ ಇರಾನ್ ದಾಳಿ
ಕತಾರ್, ಬಹ್ರೇನ್, ಸೌದಿಯ ಯುಎಸ್​ ವಾಯುನೆಲೆಗಳ ಮೇಲೆ ಇರಾನ್ ದಾಳಿ
ರಾಗಿಣಿ ಪ್ರಜ್ವಲ್ ಡ್ಯಾನ್ಸ್​​​ಗೆ ಅವರೇ ಸರಿಸಾಟಿ
ರಾಗಿಣಿ ಪ್ರಜ್ವಲ್ ಡ್ಯಾನ್ಸ್​​​ಗೆ ಅವರೇ ಸರಿಸಾಟಿ
ವಿದ್ಯಾರ್ಥಿನಿಗಳ ಜತೆ ಪಾರ್ಟಿ ಮಾಡಿದ ಎಕ್ಸ್ಕ್ಲೂಸಿವ್ ದೃಶ್ಯ
ವಿದ್ಯಾರ್ಥಿನಿಗಳ ಜತೆ ಪಾರ್ಟಿ ಮಾಡಿದ ಎಕ್ಸ್ಕ್ಲೂಸಿವ್ ದೃಶ್ಯ
ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಕುಂಭ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?
ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಕುಂಭ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?