ಬೆಂಗಳೂರು ಗ್ರಾಮಾಂತರ, ಮೇ.08: ಹೊಸಕೋಟೆ ಟೌನ್ (Hoskote) ಅಲ್ಲಿರುವ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವ ಸಮಿತಿಗೆ ಹಿಂದೂಯೇತರ ವ್ಯಕ್ತಿಯನ್ನು ಸದಸ್ಯನಾಗಿ ನೇಮಿಸಿದ್ದ ರಾಜ್ಯ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಬಿಜೆಪಿ (BJP) ಹರಿಹಾಯ್ದಿತ್ತು. ಈ ಹಿನ್ನಲೆ ಇದಕ್ಕೆ ಕಾಂಗ್ರೆಸ್ ಸ್ಪಷ್ಟನೆ ನೀಡಿದ್ದು, ‘ಸುಳ್ಳು ಹಾಗೂ ದುರುದ್ದೇಶದ ಪೋಸ್ಟ್ ಮಾಡಿದ್ದಕ್ಕೆ ಚುನಾವಣಾ ಆಯೋಗದಿಂದ ಹಾಗೂ ಜಾಗತಿಕ ಮಟ್ಟದಲ್ಲಿ ಮುಖಭಂಗ ಅನುಭವಿಸಿದರೂ ಬಿಜೆಪಿಯ ಫೇಕ್ ಫ್ಯಾಕ್ಟರಿಗೆ ಬುದ್ದಿ ಬಂದಂತಿಲ್ಲ. ಹೊಸಕೋಟೆಯ ಅವಿಮುಕ್ತೇಶ್ವರ ಬ್ರಹ್ಮಕಲಶೋತ್ಸವ ಸಮಿತಿಗೆ ಅನ್ಯ ಧರ್ಮದ ವ್ಯಕ್ತಿಯನ್ನು ನೇಮಿಸುವುದು ಬಹಳ ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ, ಇದು ಹೊಸದೇನೂ ಅಲ್ಲ ಎಂದು ತಿರುಗೇಟು ಕೊಟ್ಟಿದೆ.
ಸುಳ್ಳು ಹಾಗೂ ದುರುದ್ದೇಶದ ಪೋಸ್ಟ್ ಮಾಡಿದ್ದಕ್ಕೆ ಚುನಾವಣಾ ಆಯೋಗದಿಂದ ಹಾಗೂ ಜಾಗತಿಕ ಮಟ್ಟದಲ್ಲಿ ಮುಖಭಂಗ ಅನುಭವಿಸಿದರೂ ಬಿಜೆಪಿಯ ಫೇಕ್ ಫ್ಯಾಕ್ಟರಿಗೆ ಬುದ್ದಿ ಬಂದಂತಿಲ್ಲ.
ಹೊಸಕೋಟೆಯ ಅವಿಮುಕ್ತೇಶ್ವರ ಬ್ರಹ್ಮಕಲಶೋತ್ಸವ ಸಮಿತಿಗೆ ಅನ್ಯ ಧರ್ಮದ ವ್ಯಕ್ತಿಯನ್ನು ನೇಮಿಸುವುದು ಬಹಳ ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ, ಇದು ಹೊಸದೇನೂ ಅಲ್ಲ.… https://t.co/zy8eslqSHH pic.twitter.com/3NjnJQvAsS
— Karnataka Congress (@INCKarnataka) May 8, 2024
2020ರಲ್ಲಿಯೂ ಅನ್ಯ ಧರ್ಮದ ವ್ಯಕ್ತಿಯನ್ನು ಸಮಿತಿಯಲ್ಲಿ ನೇಮಿಸಲಾಗಿತ್ತು, ಶಿಫಾರಸು ಮಾಡಿದ್ದು ಬಿಜೆಪಿ ಶಾಸಕ ಎಂಟಿಬಿ ನಾಗರಾಜ್, ಆಗ ಯಾರ ಸರ್ಕಾರವಿತ್ತು, ಸ್ವತಃ ಬಿಜೆಪಿ ಸರ್ಕಾರ. 2022ರಲ್ಲೂ ಅಲ್ಪಸಂಖ್ಯಾತ ವರ್ಗದ ವ್ಯಕ್ತಿಯೊಬ್ಬರನ್ನು ನೇಮಿಸಲಾಗಿತ್ತು, ಆಗಲೂ ಶಿಫಾರಸು ಮಾಡಿದ್ದು ಎಂಟಿಬಿ ನಾಗರಾಜ್, ಅಂದು ಕೂಡ ರಾಜ್ಯದಲ್ಲಿ ಇದ್ದಿದ್ದು ಬಿಜೆಪಿ ಸರ್ಕಾರ. ಬಿಜೆಪಿ ಅವರೇ ಈ ಹಿಂದೆ ನಿಮ್ಮ ಅವಧಿಯಲ್ಲಿ ನೇಮಕವಾದ ಸಮಿತಿಯ ಬಗ್ಗೆ ಉತ್ತರ ಕೊಡುವ ದಮ್ಮು ತಾಕತ್ತು ಇದೆಯೇ?.
ನಿಮ್ಮ ಫೇಕ್ ಫ್ಯಾಕ್ಟರಿಯ ಬಂಡವಾಳ ಜನತೆಗೆ ಅರ್ಥವಾಗಿದೆ. ನಿಮ್ಮ ಯಾವ ಆಟಗಳೂ ನಡೆಯುವುದಿಲ್ಲ ಎಂದು ವಾಗ್ದಾಳಿ ನಡೆಸಿದೆ.
ಇದನ್ನೂ ಓದಿ:ಹೊಸಕೋಟೆ ಬ್ರಹ್ಮರಥೋತ್ಸವ ಸಮಿತಿಯಲ್ಲಿ ಮುಸ್ಲಿಂ ವ್ಯಕ್ತಿ: ಬಿಜೆಪಿ ಆಕ್ರೋಶ
ಹೊಸಕೋಟೆಯ ಶ್ರೀ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮೋತ್ಸವ ಕಾರ್ಯಕ್ರಮದ ಮೇಲ್ವಿಚಾರಣೆಗೆ ಕಾಂಗ್ರೆಸ್ ‘ನವಾಜ್’ ಅವರನ್ನು ನೇಮಿಸಿದೆ. ನಮ್ಮ ದೇವಸ್ಥಾನಗಳನ್ನು ಲೂಟಿ ಮಾಡಲು ಯತ್ನಿಸಿದ ನಂತರ ಹಿಂದೂ ದ್ವೇಷಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಈಗ ಹಿಂದೂಯೇತರರನ್ನು ನೇಮಿಸುವ ಮೂಲಕ ದೇವಾಲಯಗಳು ಮತ್ತು ಅವುಗಳ ಸಂಪನ್ಮೂಲಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ ಎಂದು ವಾಗ್ದಾಳಿ ಮಾಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ