AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಲಮಂಗಲ ಆಸ್ಪತ್ರೆಯಲ್ಲಿ ಸಿಕ್ಕಿದ್ದ ಹೆಣ್ಣು ಭ್ರೂಣದ ತಾಯಿ ಪತ್ತೆ, ಬಾಣಾಂತಿ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ

ಮಂಗಳವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಸರ್ಕಾರಿ ಆಸ್ಪತ್ರೆಯ ಶೌಚಾಲಯದಲ್ಲಿ ಹೆಣ್ಣು ಭ್ರೂಣ ಪತ್ತೆಯಾಗಿತ್ತು. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ನೆಲಮಂಗಲ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಹೆಣ್ಣು ಭ್ರೂಣದ ತಾಯಿಯನ್ನು ಪತ್ತೆ ಹಚ್ಚಿದ್ದಾರೆ.

ನೆಲಮಂಗಲ ಆಸ್ಪತ್ರೆಯಲ್ಲಿ ಸಿಕ್ಕಿದ್ದ ಹೆಣ್ಣು ಭ್ರೂಣದ ತಾಯಿ ಪತ್ತೆ, ಬಾಣಾಂತಿ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ
ನೆಲಮಂಗಲ ಆಸ್ಪತ್ರೆಯಲ್ಲಿ ಸಿಕ್ಕಿದ್ದ ಹೆಣ್ಣು ಭ್ರೂಣದ ತಾಯಿ ಪತ್ತೆ
TV9 Web
| Updated By: ವಿವೇಕ ಬಿರಾದಾರ|

Updated on:May 08, 2024 | 10:50 AM

Share

ನೆಲಮಂಗಲ, ಮೇ 08: ಸರ್ಕಾರಿ ಆಸ್ಪತ್ರೆಯ (Government Hospital) ಶೌಚಾಲಯದಲ್ಲಿ ಪತ್ತೆಯಾಗಿದ್ದ ಹೆಣ್ಣು ಭ್ರೂಣ (fetus) ಯಾರದ್ದು ಅಂತ ಪೊಲೀಸರು (Police) ಹಾಗೂ ಆಸ್ಪತ್ರೆ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ.​ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆ ನೆಲಮಂಗಲ ಸರ್ಕಾರಿ ಆಸ್ಪತ್ರೆಯ ಶೌಚಾಲಯದಲ್ಲಿ ಮಂಗಳವಾರ (ಮೇ 07) ರಂದು 5 ತಿಂಗಳ ಹೆಣ್ಣು ಭ್ರೂಣ ಪತ್ತೆಯಾಗಿತ್ತು. ಈ ವಿಚಾರ ತಿಳಿದು ಆಸ್ಪತ್ರೆ ಸಿಬ್ಬಂದಿ ಮತ್ತು ಪೊಲೀಸರು ಕೊನೆಗೂ ಹೆಣ್ಣು ಭ್ರೂಣ ತಾಯಿಯನ್ನು ಪತ್ತೆ ಮಾಡಿದ್ದಾರೆ.

ಕಲಬುರಗಿ ಮೂಲದ 18 ವರ್ಷದ ಯುವತಿ ತಮ್ಮ ಊರಿನ ಯುವಕನನ್ನು ಪ್ರೀತಿಸುತ್ತಿದ್ದಳು. ಯುವತಿ ನಾಲ್ಕು 4 ತಿಂಗಳ ಹಿಂದೆಯಷ್ಟೇ ತಾಯಿ ಜೊತೆ ನೆಲಮಂಗಲಕ್ಕೆ ಬಂದಿದ್ದಳು. ನೆಲಮಂಗಲ ತಾಲೂಕಿನ ಬೇಗೂರಿನಲ್ಲಿ ತಾಯಿ ಜೊತೆ ನೆಲೆಸಿದ್ದಳು. ಇಲ್ಲಿ ಮದುವೆಗೂ ಮುನ್ನವೇ ಗರ್ಭ ಧರಿಸಿದ್ದಾಳೆ. ಯುವತಿ ಗರ್ಭನಿರೋಧಕ ಮಾತ್ರೆ ಸೇವಿಸಿ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಳು.

ಇದನ್ನೂ ಓದಿ: ಮಂಡ್ಯದಲ್ಲಿ ನಿಂತಿಲ್ಲ ಭ್ರೂಣಲಿಂಗ ಪತ್ತೆ, ಹತ್ಯೆ: ಆರೋಗ್ಯ ಇಲಾಖೆ ಕ್ವಾಟರ್ಸ್​​ನಲ್ಲೇ ಕೃತ್ಯ

ಮಂಗಳವಾರ ಶೌಚಾಲಯಕ್ಕೆ ತೆರಳಿದಾಗ ಗರ್ಭಪಾತವಾಗಿದೆ. ಬಳಿಕ ಯುವತಿ ​ಹೆಣ್ಣು ಭ್ರೂಣವನ್ನ ಶೌಚಾಲಯದಲ್ಲಿ ಹಾಕಿ ಆಸ್ಪತ್ರೆಯಿಂದ ಹೊರ ನಡೆದಿದ್ದಳು. ಈ ವಿಚಾರ ತಿಳಿದ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತನಿಖೆಗೆ ಇಳಿದಿದ್ದು, ಸಿಸಿಟಿವಿ ಕ್ಯಾಮೆರಾ ಆಧರಿಸಿ ಯುವತಿಯನ್ನು ಪತ್ತೆ ಹಚ್ಚಿದ್ದಾರೆ. ಸದ್ಯ ಯುವತಿಗೆ ಬಾಣಾಂತಿ ಆರೈಕೆ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನೆಲಮಂಗಲ ಟೌನ್ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಮುದ್ರ ಪಾಲಾಗುತ್ತಿದ್ದ ಇಬ್ಬರು ಯುವಕರ ರಕ್ಷಣೆ

ಉಡುಪಿ: ಬೆಳ್ಳಂಬೆಳಿಗ್ಗೆ ಸಮುದ್ರ ಪಾಲಾಗುತ್ತಿದ್ದ ಇಬ್ಬರು ಯುವಕರನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ. ಬಳ್ಳಾರಿಯ ಕೊಟ್ಟೂರು ತಾಲೂಕಿನಿಂದ ಬಂದಿದ್ದ ಗೋಪಿನಾಥ್ (25) ರಂಗನಾಥ್ (26) ಇಬ್ಬರು ಯುವಕರು ಇಂದು (ಮೇ 08) ಬೆಳ್ಳಂಬೆಳಿಗ್ಗೆ ತಾಲೂಕಿನ ಮಲ್ಪೆ ಸಮೀಪದ ತೊಟ್ಟಂ ಬೀಚ್​ನಲ್ಲಿ ಆಟವಾಡಲು ಇಳಿದಿದ್ದಾರೆ. ಈ ವೇಳೆ ಬಂದ ದೊಡ್ಡ ಗಾತ್ರದ ಅಲೆಗೆ ಸಿಲುಕಿ ಒದ್ದಾಡುತ್ತಿದ್ದರು. ತಕ್ಷಣ ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿಗಳು ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:46 am, Wed, 8 May 24