ಸದ್ದಿಲ್ಲದೆ 2ನೇ ಮದುವೆ: ತಾಳಿ ಕಟ್ಟೋ ಟೈಮಿಗೆ ಮೊದಲ ಹೆಂಡ್ತಿ ಎಂಟ್ರಿ, ಮುಂದೇನಾಯ್ತು?

ವಿವಾಹಿತ ಪುರುಷ ಅಥವಾ ಸ್ತ್ರೀ ಎರಡನೇ ಮದುವೆಯಾಗಬೇಕಾದರೆ, ಮೊದಲು ಸಂಗಾತಿಯು ಮರಣ ಹೊಂದಿರಬೇಕು. ಸಂಗಾತಿ ಮರಣ ಹೊಂದಿದ್ದರೆ ಮಾತ್ರ ಎರಡನೇ ಮದುವೆಯಾಗುವ ಅವಕಾಶವಿರುತ್ತದೆ. ಇನ್ನು ಪುರುಷ, ಎರಡನೇ ವಿವಾಹವಾಗಬೇಕಾದರೆ ಮೊದಲ ಕಾನೂನು ಪ್ರಕರವಾಗಿ ವಿಚ್ಛೇದನ ನೀಡೇಕು. ಆದ್ರೆ, ಇಲ್ಲೋರ್ವ ವ್ಯಕ್ತಿ, ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಎರಡನೇ ಮದ್ವೆ ಮಾಡಿಕೊಳ್ಳಲು ಹೋಗಿ ಸಿಕ್ಕಿಬಿದ್ದಿದ್ದಾನೆ.

ಸದ್ದಿಲ್ಲದೆ 2ನೇ ಮದುವೆ: ತಾಳಿ ಕಟ್ಟೋ ಟೈಮಿಗೆ ಮೊದಲ ಹೆಂಡ್ತಿ ಎಂಟ್ರಿ, ಮುಂದೇನಾಯ್ತು?
ಮೊದಲ ಮದ್ವೆಯ ಫೋಟೋ
Edited By:

Updated on: Mar 25, 2026 | 6:43 PM

ಬೆಂಗಳೂರು (ಮಾರ್ಚ್ 25): ಮೊದಲ ಹೆಂಡ್ತಿ ಬದುಕಿರುವಾಗಲೇ, ವಿಚ್ಛೇದನವನ್ನೂ ಕೊಡದೆ ಎರಡನೇ ಮದುವೆಯಾಗಲು (Second Marriage) ಹೋಗಿದ್ದ ಪತಿರಾಯನಿಗೆ ಮೊದಲ ಪತ್ನಿ ಮಂಟಪದಲ್ಲೇ ಶಾಕ್ ಕೊಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ (Bangalore Rural) ಜಿಲ್ಲೆ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಗ್ರಾಮದ (Kodagurki Village) ಮುನೇಶ್ವರ ದೇಗುಲದ ಬಳಿ ಸುರೇಶ್ ಎಂಬಾತ ಕದ್ದು ಮುಚ್ಚಿ ಎರಡನೇ ಮದುವೆಯಾಗುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ. ಹೌದು…ವಿಚ್ಚೇದನ ನೀಡದೆ ಮತ್ತೊಂದು ವಿವಾಹವಾಗುತ್ತಿರುವ ವಿಚಾರ ತಿಳಿದು ಮೊದಲ ಪತ್ನಿ ಪೊಲೀಸರ ಜೊತೆಯಲ್ಲೇ ಆಗಮಿಸಿ ಮದುವೆ ನಿಲ್ಲಿಸಿದ್ದಾಳೆ.

19 ವರ್ಷಗಳ ಹಿಂದೆಯೇ ಚಿಕ್ಕಬಳ್ಳಾಪುರ ಮಂಚೇನಹಳ್ಳಿ ಗ್ರಾಮದ ನಾಗಮಣಿ ಎಂಬಾಕೆಯನ್ನ ಆಂಧ್ರ ಮೂಲದ ಕದರಿ ಎಂಬ ಗ್ರಾಮಕ್ಕೆ ಸೇರಿದ್ದ ಸುರೇಶ್ ಮದುವೆಯಾಗಿದ್ದ. ಈ ದಂಪತಿ ಇಬ್ಬರು ಮಕ್ಕಳು ಕೂಡ ಇದ್ದಾರಂತೆ. ಮದುವೆಯಾಗಿ ಹತ್ತಾರು ವರ್ಷ ಸಂಸಾರ ಮಾಡಿದ ಸುರೇಶ್​ ಮೊದಲ ಪತ್ನಿಯನ್ನ ಬಿಟ್ಟು 2ನೇ ಮದುವೆಯಾಗಲು ಮುಂದಾಗಿದ್ದ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಗ್ರಾಮದ ಮುನೇಶ್ವರ ದೇಗುಲದ ಬಳಿ ಸುರೇಶ್​ ಎಂಬಾತನ ಎರಡನೇ ಮದುವೆ ಕೂಡ ನಡೆದಿತ್ತು. ಇನ್ನೇನು ತಾಳಿ ಕಟ್ಟೋ ಸಮಯಕ್ಕೆ ಸರಿಯಾಗಿ ಬಂದ ನಾಗಮಣಿ ಮದುವೆ ನಿಲ್ಲಿಸಿದ್ದಾರೆ.

ಇದನ್ನೂ ನೋಡಿ: ಪ್ರೇಯಸಿ ಮದ್ವೆ ಮಂಟಪಕ್ಕೆ ಬರುವಷ್ಟರಲ್ಲೇ ಬೇರೊಂದು ಯುವತಿಗೆ ತಾಳಿಕಟ್ಟಿದ್ದ ಪ್ರಿಯಕರ ಅರೆಸ್ಟ್

ಇನ್ನೂ ಪೊಲೀಸರ ಸಮೇತ ಮೊದಲ ಪತ್ನಿ ಎಂಟ್ರಿಕೊಡುತ್ತಿದ್ದಂತೆಯೇ ಗಂಡ ಕಕ್ಕಾಬಿಕ್ಕಿಯಾಗಿದ್ದಾರೆ. ಮೊದಲನೆ ಪತ್ನಿಗೆ ವಿಚ್ಚೇಧನ ನೀಡದೆ ಎರಡನೆ ಮದುವೆಯಾಗುವುದು ತಪ್ಪು ಎಂದು ಬುದ್ದಿವಾದ ಹೇಳಿದ್ದು ಮದುವೆಯನ್ನ ನಿಲ್ಲಿಸಿದ್ದು, ಸಿಂಗಾರಗೊಂಡು ಮದುವೆಗೆ ಸಿದ್ದವಾಗಿ ಕುಳಿತಿದ್ದ ಸುರೇಶ್ ನನ್ನ ಪೊಲೀಸರ ವಶಕ್ಕೆ ಪಡೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Naveen Kumar

ನವೀನ್ ಕುಮಾರ್ ಟಿ ಎಂಬ ನಾನು ಮೂಲತಃಹ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ನಮ್ಮ ಹೆಮ್ಮೆಯ ಟಿವಿನೈನ್ ನ ದೇವನಹಳ್ಳಿ ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ನಾನು ಪದವಿ ಮುಗಿಯುತ್ತಿದ್ದಂತೆ ಟಿವಿನೈನ್ ನಲ್ಲಿ ವರದಿಗಾರನಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಉದ್ದೇಯನ್ನ ಪಡೆದು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡ್ತಿದ್ದೀನಿ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಾ ಬಂದಿದ್ದೇನೆ.

Read More
Follow Us